ಶ್ರೀದೇವಿ ಪುರಾಣದಿಂದ ಇಷ್ಟಾರ್ಥಗಳು ಸಿದ್ದಿ:ಗುಂಡಕನಾಳಶ್ರೀ
ತಾಳಿಕೋಟೆ :ಅ.೬: ಜಗತ್ತಿನಲ್ಲಿ ಯಾವ ಯಾವ ಸಮಯದಲ್ಲಿ ದುಷ್ಟರ ಉಪಟಳ ಹೆಚ್ಚಾಗುತ್ತಾ ಹೋಗುತ್ತದೆಯೋ ಆ ಸಮಯದಲ್ಲೆಲ್ಲಾ ಶ್ರೀ ಅಂಬಾಭವಾನಿ ದೇವಿ ನಾನಾ ರೂಪಕದಲ್ಲಿ ಅವತರಿಸಿ ಬಂದು ಸಂಹಾರ ಮಾಡುತ್ತಾ ಬಂದಿದ್ದಾಳೆ ಅಂತಹ ದೇವಿಯನ್ನು ಆರಾಧಿಸುವದಕ್ಕೆ ನವರಾತ್ರೋತ್ಸವ ಆಚರಿಸಲಾಗುತ್ತದೆ ಎಂದು ಗುಂಡಕನಾಳ ಹಿರೇಮಠದ ಷ.ಬ್ರ.ಶ್ರೀ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು.
ಶನಿವಾರರಂದು ಪಟ್ಟಣದ ಶ್ರೀ ಖಾಸ್ಗತೇಶ್ವರ ನಗರದ ಬನ್ನಿ ಮಹಾಂಕಾಳಿ ದೇವಸ್ಥಾನ ಆವರಣದಲ್ಲಿ ನವರಾತ್ರೋತ್ಸವ ಅಂಗವಾಗಿ ಶ್ರೀ ದೇವಿ ಮಹಾತ್ಮೆ ಮಹಾ ಪುರಾಣ ಕಾರ್ಯಕ್ರಮದಲ್ಲಿ ದಿವ್ಯ ಸಾನಿದ್ಯ ವಹಿಸಿ ಮಾತನಾಡುತ್ತಿದ್ದ ಅವರು ಬಸ್ಮಾಸುರ, ರಕ್ತ ಬೀಜಾಸುರರಂತವರು ಈ ದೇಶದಲ್ಲಿ ಹುಟ್ಟಿ ತಮ್ಮ ಉಪಟಳವನ್ನು ನಡೆಸಿದ್ದ ಸಮಯದಲ್ಲಿ ಶ್ರೀ ಅಂಬಾಭವಾನಿ ದೇವಿಯು ಅವರನ್ನು ಸಂಹಾರ ಮಾಡಲಿಕ್ಕೆ ಅವತರಿಸಿ ಬರಬೇಕಾಯುತು ರಕ್ತ ಬೀಜಾಸುರರ ಒಂದು ಹನಿ ರಕ್ತ ನೆಲಕ್ಕೆ ಬಿದ್ದರೆ ಲಕ್ಷಾಂತರ ರಕ್ತ ಬೀಜಾಸುರರು ಹುಟ್ಟುವ ಕಾಲದಲ್ಲಿ ಶ್ರೀ ದೇವಿಯು ತನ್ನ ನಾಲಿಗೆಯಿಂದ ರಕ್ತ ಬೀಜಾಸುರನನ್ನು ನುಂಗಿ ಸಂಹಾರ ಮಾಡಿದ್ದಾಳೆ ಅಂತಹ ಶ್ರೀ ದೇವಿಯ ಮಹಾ ಶಕ್ತಿಯ ಅರಿಯುವದ ಕೋಸ್ಕರ ಶ್ರೀ ದೇವಿಯ ಮಹಾ ಪುರಾಣವನ್ನು ನಡೆಸಲಾಗುತ್ತದೆ ನವರಾತ್ರೋತ್ಸವ ಅಂಗವಾಗಿ ೯ ದಿನಗಳ ಕಾಲ ನಡೆಯುವ ಈ ಉತ್ಸವದಲ್ಲಿ ಶ್ರೀ ದೇವಿಯ ಪುರಾಣವನ್ನು ಅರೀತು ನಮ್ಮಲ್ಲಿ ಅಡಗಿರುವ ಅರಷಡ್ ವರ್ಗಗಳನ್ನು ತೆಗೆದು ಹಾಕಬೇಕಾಗಿದೆ ನಮ್ಮ ದೇಶದಲ್ಲಿ ಹರಿಯುವ ಪ್ರತಿ ನದಿಗೂ ಶ್ರೀ ದೇವಿಯ ಹೆಸರುಗಳಿಂದ ಕರೆಯಲಾಗುತ್ತದೆ ನಮ್ಮ ದೇಶಕ್ಕೆ ಕೂಡಾ ಭಾರತ ಮಾತೆ ಎಂದು ಕರೆಯುತ್ತೇವೆ ಅಂತಹ ಶಕ್ತಿ ಶ್ರೀ ದೇವಿಯಲ್ಲಿ ಅಡಗಿದೆ ಶ್ರೀದೇವಿಯ ಪವಿತ್ರ ಮನಸ್ಸಿನಿಂದ ಪೂಜಿಸಿ ನೆನೆದರೆ ನಿಮ್ಮ ಇಷ್ಟಾರ್ಥಗಳು ಇಡೇರಲಿವೆ ಅಲ್ಲದೇ ೧೨ನೇ ಶತಮಾನದಲ್ಲಿ ಅಕ್ಕಮಹಾದೇವಿ, ಆಯ್ದಕ್ಕಿ ಲಕ್ಕಮ್ಮ, ನೀಲಾಂಬಿಕೆ ಒಳಗೊಂಡು ಅನೇಕರು ಶ್ರೀ ದೇವಿಯ ಅನುಗ್ರಹದಿಂದ ದೇವರ ಸ್ವರೂಪವನ್ನು ಪಡೆದುಕೊಂಡಿದ್ದಾರೆ ಮಹಿಳೆಯರಲ್ಲಿ ಸಹನೆ ಎಂಬುದು ಇದೆ ಸಹನೆಯ ಜೊತೆಗೆ ಉಗ್ರ ಸ್ವರೂಪಿನಿಯಾಗುವ ಶಕ್ತಿ ಅವಳಲ್ಲಿದೆ ಅಂತಹ ಅನುಗ್ರಹ ಪಡೆದುಕೊಂಡಿರುವ ಮಹಿಳೆಯರು ಮಕ್ಕಳಲ್ಲಿ ಸಂಸ್ಕಾರವನ್ನು ಬಿತ್ತುವಂತಹ ಕೆಲಸ ಮಾಡಬೇಕು ನಮ್ಮ ದೇಶದ ಸಂಸ್ಕಾರ ಇಡೀ ಜೀವನವನ್ನು ರೂಪಿಸುವಂತಹ ಶಕ್ತಿ ಇದೆ ೯ ದಿನಗಳ ಕಾಲ ಜರುಗುವ ಈ ನವರಾತ್ರೋತ್ಸವದಲ್ಲಿ ಎಲ್ಲರೂ ಶ್ರೀ ದೇವಿಯನ್ನು ಪೂಜ್ಯಭಾವನೆಯಿಂದ ಆರಾಧಿಸಿ ಶ್ರೀ ದೇವಿಯ ವಲುಮೆ ಪಡೆಯುವದರೊಂದಿಗೆ ಇಷ್ಟಾರ್ಥಗಳನ್ನು ಇಡೇರಿಸಿಕೊಳ್ಳಲಿ ಎಂದು ಆಶಿಸಿದರು.
ಇನ್ನೋರ್ವ ಅತಿಥಿ ಪುರಸಭಾ ಸದಸ್ಯ ವಾಸುದೇವ ಹೆಬಸೂರ ಅವರು ಮಾತನಾಡಿ ನಮ್ಮ ದೇಶದಲ್ಲಿ ಅನೇಕ ಉತ್ಸವವಗಳು ಇನ್ನೂ ಜೀವಂತವಾಗಿರುವದು ನಮ್ಮ ಸನಾತನ ಧರ್ಮದಿಂದ ನಮ್ಮ ಹಿಂದೂ ಸಂಪ್ರದಾಯದಿAದ ಆಗಿದೆ ಎಲ್ಲ ದೇವರಿಗೆ ಪೂಜಿಸುವ ಔದಾರ್ಯ ಗುಣ ಹೊಂದಲಾಗಿದೆ ಶ್ರೀ ಅಂಬಾಭವಾನಿ ದೇವಿಯ ಆರಾಧಿಸುವ ನವರಾತ್ರೋತ್ಸವದಲ್ಲಿ ಎಲ್ಲರೂ ಪಾಲ್ಗೊಂಡು ಶ್ರೀ ದೇವಿಯ ಮಹಾ ಪುರಾಣ ಪ್ರವಚನ ನಡೆಸಿರುವದು ಭಕ್ತಿಯ ಪರಾಕಾಷ್ಠೆ ಹೆಚ್ಚಿಸಿದಂತಾಗಿದೆ ಎಂದರು.
ಇನ್ನೋರ್ವ ಶರಣೆ ಶ್ರೀಮತಿ ಶಕುಂತಲಾ ಹಿರೇಮಠ ಅವರು ಮಾತನಾಡಿ ಶ್ರೀ ದೇವಿಯ ಪುರಾಣ ಕೇಳುವದರೊಂದಿಗೆ ಮನಯಲ್ಲಿ ಸಂಪತ್ಬರಿತವಾಗಲಿದೆ ಅಲ್ಲದೇ ನೆಮ್ಮದಿ ಸಂತೋಷ ಎಂಬುದು ಹೆಚ್ಚಾಗಲಿದೆ ಈ ಕಾರಣದಿಂದ ಎಲ್ಲ ಕಡೆಗಳಲ್ಲಿ ಶ್ರೀ ದೇವಿಯ ಪುರಾಣ ಪ್ರವಚನವನ್ನು ನವರಾತ್ರೋತ್ಸವದಲ್ಲಿ ನಡೆಸಲಾಗುತ್ತದೆ ಎಂದರು.
ಇನ್ನೋರ್ವ ಶರಣೆ ಕಾಶಿಬಾಯಿ ಭಂಟನೂರ ಅಮ್ಮನವರು ಶ್ರೀ ದೇವಿಯ ಮಹಾತ್ಮೆ ಕುರಿತು ಮಾತನಾಡಿದರು.
ಪುರಾಣ ಪ್ರವಚನಕಾರರಾದ ಶ್ರೀಮತಿ ಶಿವಲೀಲಾ ಸಂಗಮೇಶ ದೇವಶೆಟ್ಟಿ ಅವರು ಶ್ರೀ ದೇವಿಯ ಪುರಾಣವನ್ನು ನಡೆಸಿಕೊಟ್ಟರು.
ಇದೇ ಸಮಯದಲ್ಲಿ ಶ್ರೀಗಳಿಗೆ, ಅತಿಥಿ ಪುರಸಭೆ ಸದಸ್ಯ ವಾಸುದೇವ ಹೆಬಸೂರ ಮತ್ತು ಪತ್ರಕರ್ತ ಅಂಬಾಜಿ ಘೋರ್ಪಡೆ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಮಯದಲ್ಲಿ ಎಸ್.ಎಂ.ಬಸಣ್ಣವರ, ಸಂಗನಗೌಡ ಗಬಸಾವಳಗಿ, ಆರ್.ಎಸ್.ಶಿಕಳವಾಡಿ, ಗುರುನಾಥರೆಡ್ಡಿ ಪೊಲೀಸ್‌ಪಾಟೀಲ, ಟಿ.ಎಲ್.ತೊಂಡಿಹಾಳ, ಮಲ್ಲನಗೌಡ ಯಾಳವಾರ, ಬಾಪುಗೌಡ ಪಾಟೀಲ, ಎಲ್.ಜಿ.ಬಾಗೇವಾಡಿ, ಮಲ್ಲನಗೌಡ ದ್ಯಾಪೂರ, ಆರ್.ಸಿ.ಮಾಲಿಪಾಟೀಲ, ಎಂ.ಎಸ್.ಹಿರೇಮಠ, ಭೀಮನಗೌಡ ಹಾದಿಮನಿ, ಮಲ್ಲನಗೌಡ ಗುಳಬಾಳ, ಅಶೋಕಗೌಡ ಪಾಟೀಲ, ಮೊದಲಾದವರು ಉಪಸ್ಥಿತರಿದ್ದರು.