ಕೈ ಬಿಸಿ ಕರೆಯುತಿಹ “ಬ್ರಾ ್ಯಂಡ್ ಮೈಸೂರು”
ಸಂಜೆವಾಣಿ ನ್ಯೂಸ್
ಮೈಸೂರು:ಅ.5:- ಮೈಸೂರು ರೇಷ್ಮೆ ನಂಜನಗೂಡಿನ ರಸಬಾಳೆ, ಮೈಸೂರು ಮಲ್ಲಿಗೆ, ಮೈಸೂರು ವೀಳ್ಯದೆಲೆ, ಮೈಸೂರು ಪಾಕ್, ಮೈಸೂರು ಗಂಧದ ಎಣ್ಣೆ ಮತ್ತು ಸಾಬೂನು, ಮೈಸೂರಿನ ಸಾಂಪ್ರದಾಯಿಕ ವರ್ಣ ಚಿತ್ರ ಸೇರಿ ಎಲ್ಲವನ್ನೂ ಒಳಗೊಂಡ ಬ್ರಾಂಡ್ ಮೈಸೂರು ವಸ್ತುಪ್ರದರ್ಶನ ಆವರಣದಲ್ಲಿ ಜನರ ಕೈ ಬಿಸಿ ಕರೆಯುತ್ತಿದೆ.
ಈ ಬಾರಿ ತುಂಬಾ ವಿಭಿನ್ನವಾಗಿ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನದ ಅವರ ಆಲೋಚನೆಯಂತೆ ವಸ್ತು ಪ್ರದರ್ಶನದಲ್ಲಿ “ಬ್ರ್ಯಾಂಡ್ ಮೈಸೂರು” ಈ ವರ್ಷದ ಪ್ರಮುಖ ಆಕರ್ಷಣೆಯಾಗಿ ಮೈಸೂರು ಅರಮನೆಯ ಮೂಲ ಮರದ ಅಂಬಾರಿ ಕಣ್ಮನ ಸೆಳೆಯುತ್ತಿದೆ.
ಮಾತ್ರವಲ್ಲದೆ, ಮೈಸೂರು ಪ್ರವಾಸಿಗರು ಒಂಬತ್ತು ಅರಮನೆಗಳನ್ನು ಕಾಣಬಹುದಾಗಿದೆ. ಜತೆಗೆ ಶ್ರೀಗಂಧದ ತುಂಡುಗಳನ್ನು ಮಾರಾಟ ಮಾಡಲಾಗುವುದು. ಮೈಸೂರು ರೇಷ್ಮೆ ಸೀರೆ ಯಾವ ರೀತಿ ನೇಯ್ಗೆ ಮಾಡಲಾಗುತ್ತದೆ ಎಂಬುದರ ಮಗ್ಗದ ಮಷಿನ್ ಕೂಡ ಪ್ರದರ್ಶನ ಸಹ ಇದೆ.
ಈ ಬಾರಿಯ ವಸ್ತು ಪ್ರದರ್ಶನವನ್ನು ಪ್ಲಾಸ್ಟಿಕ್ ಮುಕ್ತವಾಗಿಸುವ ನಿಟ್ಟಿನಲ್ಲಿ ವಸ್ತು ಪ್ರದರ್ಶನವನ್ನು ವೀಕ್ಷಿಸಲು ಹಾಗೂ ಉತ್ಪನ್ನಗಳನ್ನು ಕೊಂಡುಕೊಳ್ಳಲು ಬರುವ ಸಾರ್ವಜನಿಕರು ಪ್ಲಾಸ್ಟಿಕ್ ಬ್ಯಾಗ್ ಗಳ ಬದಲಾಗಿ ಬಟ್ಟೆ ಚೀಲಗಳನ್ನು ತರಬೇಕು. ಇಲ್ಲದಿದ್ದರೆ ವಸ್ತು ಪ್ರದರ್ಶನದ ಪ್ರಾಧಿಕಾರದ ಮುಂಭಾಗದಲ್ಲಿಯೇ ಸಾರ್ವಜನಿಕರಿಗೆ ಉಚಿತ ಬಟ್ಟೆ ಚೀಲಗಳನ್ನು ವಿತರಿಸಲಾಗುತ್ತದೆ. ಅವಶ್ಯಕತೆ ಇರುವ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಅಲ್ಲದೆ ವಸ್ತು ಪ್ರದರ್ಶನದಲ್ಲಿ ಸ್ಥಾಪಿಸಲಾಗುವ ಸ್ಟಾಲ್ ಗಳು ಮತ್ತು ಹೋಟೆಲ್ ಗಳ ಮಾಲೀಕರಿಗೆ ಪ್ಲಾಸ್ಟಿಕ್ ವಸ್ತುಗಳನ್ನು ಬಳಸದಂತೆ ಎಚ್ಚರಿಕೆವಹಿಸುವಂತೆಯೂ ಖಡಕ್ ಸೂಚನೆ ನೀಡಲಾಗಿದೆ.
ಸರ್ಕಾರದ ವಿವಿಧ ಇಲಾಖೆಗಳ 30 ಸ್ಟಾಲ್ ಹಾಗೂ 153 ಖಾಸಗಿ ಸ್ಟಾಲ್ ಗಳಿದ್ದು, ಪ್ರತಿಬಾರಿಯಂತೆ ಈ ಬಾರಿಯೂ ಮಕ್ಕಳಿಗೆ ಪ್ರವೇಶ ದರ 20 ರೂ. ಗಳಿದ್ದು, ವಯಸ್ಕರು ಹಾಗೂ ಇನ್ನಿತರರಿಗೆ 5 ರೂ. ಗಳನ್ನು ಹೆಚ್ಚಿಸಿ 35 ರೂ. ಟಿಕೆಟ್ ದರವನ್ನು ನಿಗಧಿ ಮಾಡಲಾಗಿದೆ. 90 ದಿನ ನಡೆಯುವ ಕಾರ್ಯಕ್ರಮದಲ್ಲಿ ಉತ್ಪನ್ನಗಳ ವೀಕ್ಷಣೆ ಮತ್ತು ಮಾರಾಟದ ಜೊತೆಗೆ ಅವುಗಳ ತಯಾರಿಕೆಯ ಪ್ರಕ್ರಿಯೆಯನ್ನು ಸಾರ್ವಜನಿಕರು ಕಾಣಬಹುದಾಗಿದೆ. ವಸ್ತು ಪ್ರದರ್ಶನಕ್ಕೆ ಬಂದಂತಹ ಮಕ್ಕಳಿಗೆ ಮನರಂಜನೆಯನ್ನು ನೀಡಲು ಇಂಟರಕ್ಟಿವ್ ಪಾರ್ಕ್ ಹಾಗೂ 3ಡಿ ತಂತ್ರಜ್ಞಾನವನ್ನು ಒಳಗೊಂಡಿರುವ ವರ್ಚುವಲ್ ಪಾರ್ಕ್ ಗಳು ಸಹ ಚಿಣ್ಣರ ಸೆಳೆಯಲಿವೆ ಎಂದರು.
ವಾಟರ್ ಪ್ಲಾಂಟ್: ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಸುಮಾರು 10 ರಿಂದ 15 ಸ್ಥಳಗಳಲ್ಲಿ ಏಪೆರ್Çೀರ್ಟ್ ಮಾದರಿಯ ವಾಟರ್ ಕೌಂಟಿಂಗ್ ಪ್ಲಾಂಟ್ ಗಳನ್ನು ನಿರ್ಮಾಣ, ಇದರಿಂದ ಸಾರ್ವಜನಿಕರಿಗೆ ಉಚಿತವಾಗಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಮಿನಿ ಯುವ ಸಂಭ್ರಮ: ವಸ್ತು ಪ್ರದರ್ಶನವು 90 ದಿನಗಳ ಕಾಲ ನಡೆಯಲಿದ್ದು, ಪ್ರತಿ ಶನಿವಾರ ಯುವ ಸಂಭ್ರಮದಲ್ಲಿ ಪ್ರದರ್ಶನ ನೀಡಿದ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಪ್ರತಿ ರವಿವಾರ ಚಲನಚಿತ್ರ ಕಲಾವಿದರಿಂದ ಮನರಂಜನಾತ್ಮಕ ಕಾರ್ಯಕ್ರಮ ಜನರ ರಂಜಿಸಲಿವೆ.
ಅತಿ ಹೆಚ್ಚು ಸ್ಥಳೀಯ ಪ್ರವಾಸಿಗರು, ಹೊರ ರಾಜ್ಯದ ಪ್ರವಾಸಿಗರು ಹಾಗೂ ವಿದೇಶಿ ಪ್ರವಾಸಿಗರನ್ನು ಆಕರ್ಷಿಸಲು, ಈ ಬಾರಿ ವಸ್ತು ಪ್ರದರ್ಶನದಲ್ಲಿ ದೀಪಾಲಂಕಾರವನ್ನು ಹೆಚ್ಚಿಸಲಾಗಿದ್ದು, ಪ್ರತೀಕಾರದ ಮುಖ್ಯದ್ವಾರ ಮುಂಬಾಗ ಹಾಗೂ ಪ್ರಾಧಿಕಾರದ ಪ್ರಮುಖ ರಸ್ತೆಗಳಲ್ಲಿ ಮತ್ತು ಪ್ರಾಧಿಕಾರದ ವೃತ್ತಗಳಿಗೆ ವಿಶೇಷ ಮಾದರಿಯ ವಿದ್ಯುತ್ ದೀಪ ಬಣ್ಣದ ದೀಪಾಲಂಕಾರ ಎಲ್ಲರ ಸೆಳೆಯುತ್ತಿವೆ.
ಮೂರು ಎಲೆಕ್ಟ್ರಿಕ್ ವಾಹನ: 80 ಎಕ್ಕರೆ ವಿಸ್ತೀರ್ಣದಲ್ಲಿ ನಡೆಯುವ ವಸ್ತು ಪ್ರದರ್ಶನ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರಿಗೆ ಆವರಣದೊಳಗೆ ವಿವಿಧ ಸ್ಥಳಗಳಿಗೆ ಸಂಚರಿಸಲು ಅನುಕೂಲವಾಗಲು ರಿಯಾಯಿತಿ ದರದಲ್ಲಿ 3 ಎಲೆಕ್ಟ್ರಾನಿಕ್ ಏಕೋ ವಾಹನಗಳ ಸೌಲಭ್ಯವನ್ನು ಕಲ್ಪಿಸಲಾಗಿದ್ದು, ಸಾರ್ವಜನಿಕರು, ಹಿರಿಯರು ಹಾಗೂ ವಿಶೇಷಚೇತನರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.
ಗುಲಾಬಿ ಸೆಲ್ಪಿ ಪಾಯಿಂಟ್: ದಸರಾ ವಸ್ತು ಪ್ರದರ್ಶನದಲ್ಲಿ ಸಾರ್ವಜನಿಕರನ್ನು ಹಾಗೂ ಪ್ರವಾಸಿಗರನ್ನು ಆಕರ್ಷಿಸಲು ಗುಲಾಬಿ ಹೂಗಳಿಂದ ಸೆಲ್ಫಿ ಪಾಯಿಂಟನ್ನು ನಿರ್ಮಿಸಲಾಗಿದೆ. ಅಲ್ಲದೆ ವಸ್ತು ಪ್ರದರ್ಶನದ ಪಾರ್ಕ್ ಗಳಲ್ಲಿ ಹೂಗಳಿಂದ ವಿವಿಧ ಆಕಾರದ ಹೂಗುಚ್ಛಗಳನ್ನು ಸ್ಥಾಪನೆ ಮಾಡಲಾಗಿದ್ದು, ಇದು ಬಂದಂತಹ ಪ್ರವಾಸಿಗರು ಮತ್ತು ಮಕ್ಕಳಿಗೆ ವಿಶೇಷ ಅನುಭವವನ್ನು ನೀಡಲಿದೆ.