ಸ್ವಚ್ಛ ನಗರದ ಪಟ್ಟ ಹೋಗಲು ಇದೇ ಕಾರಣ
ಸಂಜೆವಾಣಿ ನ್ಯೂಸ್
ಮೈಸೂರು.ಅ.06:- ಮೈಸೂರು ಮಹಾನಗರ ಪಾಲಿಕೆಯವರು ದಸರಾ ಹಬ್ಬದ ಹಿನ್ನೆಲೆಯಲ್ಲಿ ಜಂಬೂಸವಾರಿ ಸಾಗುವ ಮಾರ್ಗ ಸಯ್ಯಾಜಿರಾವ್ ರಸ್ತೆಯಲ್ಲಿ ಒಣಗಿದ ಮತ್ತು ಅಪಾಯದ ಸ್ಥಿತಿಯಲಿದ್ದ ಮರದ ಕೊಂಬೆ ರೆಂಬೆಗಳನ್ನು ತೆಗೆಯುವ ಶಾಸ್ತ್ರಾ ಮುಗಿಸಿದರು ಆದರೆ ನಗರದ ಅಂದ ಗೆಡಿಸುವ ಈ ಗಿಡಗಳನ್ನು ತೆಗೆಯದೆ ಹಾಗೆ ಬಿಟ್ಟದ್ದು ನಿಜಕ್ಕೂ ಇದು ಜಾಣ ಕುರುಡೇ ಸರಿ,
ಈ ಗಿಡಗಳನ್ನು ಆಸರೆಯಾಗಿ ಮಾಡಿಕೊಂಡು ಫುಟ್ಪಾಥ್ ನಲ್ಲಿ ವ್ಯಾಪಾರ ಮಾಡುವವರು ಪ್ಲಾಸ್ಟಿಕ್ ಚಪ್ಪರಗಳನ್ನು ಹಾಕಿಕೊಂಡು ಕೆ.ಆರ್ ವೃತ್ತದ ಮತ್ತುಮೆರವಣಿಗೆ ಸಾಗುವ ರಸ್ತೆಯ ಅಂದವನ್ನೇ ಕೆಡೆಸುತ್ತಿದ್ದಾರೆ.
ಮುಂದೆ ಬರುವ ನಾಡ ಹಬ್ಬದ ಮೆರವಣಿಗೆಯನ್ನು ವೀಕ್ಷಿಸಲು ಬರುವ ಸಾರ್ವಜನಿಕರು ಈ ಗಿಡಗಳ ಮೇಲೆ ಹತ್ತಿ ದಸರಾ ಮೆರವಣಿಗೆಯನ್ನು ನೋಡುವ ದುಸ್ಸಹಾಸಕ್ಕೂ ಮುಂದಾಗಬಹುದು ಆದರಿಂದ ಅಪಾಯ ಕಟ್ಟಿಟ್ಟಾ ಬುತ್ತಿ. ಆದರಿಂದ ಈ ಕೂಡಲೇ ಸಂಬಂಧ ಪಟ್ಟ ಪಾಲಿಕೆಯ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ಕಾಡು ಸಸಿಗಳ್ಳನ್ನು ಬುಡದ ಸಮೇತ ತೆಗೆದು ಹಾಕಬೇಕೆಂದು ಮನವಿ ಮಾಡಿಕೊಳ್ಳುತೇವೆ.