ಸಾರ್ವಜನಿಕರ ಮೂಲಕ ಸೌಕರ್ಯಕ್ಕೆ ಆದ್ಯತೆ ನೀಡಲು ಸೂಚನೆ
ತಾಳಿಕೋಟೆ : ಅ.೬: ಪಟ್ಟಣದಲ್ಲಿ ಅಗತ್ಯವಿರುವ ಮೂಲಬೂತ ಸೌಕರ್ಯಗಳನ್ನು ಒದಗಿಸುವದರೊಂದಿಗೆ ಕಟ್ಟ ಕಡೆಯ ಮನುಷ್ಯನಿಗೆ ಸರ್ಕಾರದ ಯೋಜನೆಗಳು ಮುಟ್ಟುವಂತಾಗಲು ಪುರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆಂದು ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರು ಹೇಳಿದರು.
ಶನಿವಾರರಂದು ಪಟ್ಟಣದ ಪುರಸಭಾ ಸಭಾಭವನದಲ್ಲಿ ಪುರಸಭಾ ಸದಸ್ಯರ, ಅಧಿಕಾರಿಗಳ ಸಭೆ ನಡೆಸಿ ಪುರಸಭೆಯ ಪ್ರಗತಿ ಪರಿಶೀಲನೆ ನಡೆಸಿದ ನಂತರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು ಪಟ್ಟಣದ ಜನರಿಗೆ ಕುಡಿಯುವ ನೀರು, ಮತು ಪಟ್ಟಣದ ಸ್ವಚ್ಚತೆಗೆ ಗಮನ ಹರಿಸಲು ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದೇನೆ ಮತ್ತು ಕೆಲವು ಮುಖ್ಯ ರಸ್ತೆಗಳಲ್ಲಿ ಅಲ್ಲದೇ ಪುಟಪಾತ್‌ಗಳನ್ನು ಕೆಲವರು ಅತೀಕ್ರಮಿಸಿದ್ದು ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆ ಯುಂಟಾಗುತ್ತಿರುವ ಬಗ್ಗೆ ದೂರುಗಳು ಬಂದಿವೆ ಅಲ್ಲದೇ ಕೆಲವು ಬಡಾವಣೆಗಳಲ್ಲಿ ಇಕ್ಕಲ ರಸ್ತೆಗಳಲ್ಲಿ ಮನೆಯ ಮುಂದೆ ಬೃಹತ್ ಕಟ್ಟೆಗಳನ್ನು ಇನ್ನಿತರಗಳನ್ನು ಕಟ್ಟಿಕೊಂಡು ಸಾರ್ವಜನಿಕರಿಗೆ ತಿರುಗಾಡಲು ಬಾರದ ರೀತಿಯ ಪರಸ್ಥಿತಿ ನಿರ್ಮಾಣವಾಗಿದ್ದು ಅಂತವುಗಳನ್ನು ಸಂಪೂರ್ಣ ತೆರವುಗೊಳಿಸಲು ಸೂಚನೆಯನ್ನು ನೀಡಿದ್ದೇನೆಂದು ಶಾಸಕ ನಾಡಗೌಡ ಅವರು ಹೇಳಿದರು.
ಪುರಸಭೆಗೆ ಬರತಕ್ಕಂತಹ ಟ್ಯಾಕ್ಸ್ ವಸೂಲಿಯಲ್ಲಿ ಅಧಿಕಾರಿಗಳು ಒಳ್ಳೆಯ ರೀತಿಯ ಕಾರ್ಯನಿರ್ವಹಿಸುತ್ತಿದ್ದಾರೆ ಮನೆಯ ಟ್ಯಾಕ್ಸ್ ವಸೂಲಿಯಲ್ಲಿ ಸಾಕಷ್ಟು ಸುದಾರಣೆ ಕಂಡಿದೆ ಅದರಂತೆ ನೀರಿನ ಕರ ಮತ್ತು ವಾಣಿಜ್ಯ ಕರ ವಸೂಲಿಯಲ್ಲಿ ಅಧಿಕಾರಿಗಳು ಮುಂದಾಗಿದ್ದು ಕಂಡುಬAದಿದ್ದು ಅಲ್ಪ ಸ್ವಲ್ಪ ಉಳಿದ ಎಲ್ಲ ರೀತಿಯ ಟ್ಯಾಕ್ಸ್ನ್ನು ಕೂಡಾ ಪುರಸಭೆಗೆ ಬರಣಾ ಮಾಡಿಸಿಕೊಳ್ಳಲು ಸೂಚಿಸಿದ್ದೇನೆಂದರು.
ಪಟ್ಟಣದ ಜನರಿಗೆ ಕುಡಿಯುವ ನೀರು ಪೂರೈಕೆ ಮಾಡುವ ಮಾಳನೂರ ಕೇರೆಯ ಅಭಿವೃದ್ದಿಗೆ ಸರ್ಕಾರದಿಂದ ಎಸ್‌ಎಫ್‌ಸಿ ಅನುದಾನದಲ್ಲಿ ಪಂಡ್ ಕೇಳಿದ್ದೇನೆ ಈ ಮೊದಲು ನಗರೋತ್ತಾರ ಯೋಜನೆಯಡಿ ನೀಡುತ್ತಿದ್ದ ಹಣ ಬಂದ್ ಆಗಿದೆ ಈಗ ಇರುವ ದಾರಿ ಎಸ್‌ಎಫ್‌ಸಿಯಾಗಿರುವದರಿಂದ ಅದರಿಂದಲೇ ಹಣ ತರುವ ಪ್ರಯತ್ನ ಮಾಡುತ್ತೇನೆಂದ ಅವರು ಪಟ್ಟಣದಲ್ಲಿ ಸಾಕಷ್ಟು ಗಾರ್ಡನ್ ಜಾಗೆಗಳಿಗೆ ಅವುಗಳನ್ನು ಅತೀಕ್ರಮಿಸಿದ್ದರ ಬಗ್ಗೆ ದೂರುಗಳಿಗೆ ಅದಕ್ಕಾಗಿ ತಾಳಿಕೋಟೆ ಪಟ್ಟಣದಲ್ಲಿ ಎಷ್ಟು ಗಾರ್ಡ ಜಾಗೆಗಳಿಗೆ ಅವುಗಳನ್ನು ಪಟ್ಟಿ ಮಾಡಿ ನನಗೆ ಮಾಹಿತಿ ನೀಡಲು ಪುರಸಭೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಅತೀಕ್ರಮಿಸಿದ್ದರೆ ಅಂತವುಗಳನ್ನು ತೆರವುಗೊಳಿಸಲು ಸೂಚಿಸಿದ್ದೇನೆ ಕೆಲವು ಗಾರ್ಡನ್ ಜಾಗೆಗಳನ್ನು ಕೈಬರಹದ ಉತ್ತಾರೆ ಮೇಲೆ ತಮ್ಮ ಹೆಸರಿಗೆ ಮಾಡಿ ಕೊಂಡಿದ್ದಾರೆAಬ ಮಾಹಿತಿ ಇದೆ ಅಂತವುಗಳನ್ನು ಮರಳಿ ಪುರಸಭೆಯ ವಶಕ್ಕೆ ಪಡೆಯಲು ಅವಕಾಶವಿದ್ದು ಅವುಗಳನ್ನು ಸಹ ಸೀಘ್ರದಲ್ಲಿ ಪುರಸಭೆಯ ವಶಕ್ಕೆ ಸೇರಲಿವೆ ಇನ್ನುಮುಂದೆ ಕೈಬರಹ ಉತ್ತಾರೆ ನೀಡುವದಾಗಲಿ ಅದನ್ನು ಬಳಕೆ ಮಾಡುವದಾಗಲಿ ಯಾರೇ ಮಾಡಿದರೂ ಅವರ ಮೇಲೆ ಕ್ರೀಮಿನಲ್ ಕೇಸ್ ದಾಖಲಾಗಲಿದೆ ಸರ್ಕಾರದ ಆಸ್ತಿಗೆ ಕೈ ಹಾಕುವವರಿಗೆ ಇನ್ನುಮುಂದೆ ಎಚ್ಚರಿಕೆ ಘಂಟೆಯಾಗಲಿದೆ ಎಂದ ಶಾಸಕ ನಾಡಗೌಡ ಅವರು ಪಟ್ಟಣದ ಜನರಿಗೆ ಅವಶ್ಯವಿರುವ ಕುಡಿಯುವ ನೀರು, ಬೀದಿ ದೀಪ, ಸ್ವಚ್ಚತೆ ಯೊಳಗೊಂಡAತೆ ಇನ್ನಿತರ ಕೆಲಸದಲ್ಲಿ ವೇಗ ತೋರಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
ಕೆಲಸ ಮಾಡದೇ ೩.೧೭ ಕೋಟಿ ಬಿಲ್ ಪಾಸ್
ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಪಟ್ಟಣದ ಅಭಿವೃದ್ದಿ ಕಾಮಗಾರಿಗಳಲ್ಲಿ ಗುತ್ತಿಗೆದಾರರು ಅರ್ದ ಮರ್ದ ಕೆಲಸ ಮಾಡಿ ಇನ್ನೂ ಕೆಲವು ಕೆಲಸಗಳು ಹಾಗೆ ಭಾಕಿ ಇಟ್ಟು ೩ ಕೋಟಿ ೧೭ ಲಕ್ಷ ರೂ. ಸಂಪೂರ್ಣ ಬಿಲ್ ತೆಗೆಸಿಕೊಂಡು ಹೋಗಿದ್ದಾರೆ ಸರಿಯಾಗಿ ಕೆಲಸವೇ ಮಾಡಿಲ್ಲಾ ಅಂತಹ ಗುತ್ತಿಗೆದಾರರನ್ನು ಬ್ಲಾಕ್ ಲಿಸ್ಟಿಗೆ ಸೇರಿಸಲು ವರಧಿ ತಯಾರಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಅದರ ಬಗ್ಗೆ ನನಗೆ ಮಾಹಿತಿ ಸಲ್ಲಿಸಲು ತಿಳಿಸಿದ್ದೇನೆ ಸಮಗ್ರ ವರಧಿಯೊಂದಿಗೆ ಲೋಕಾಯುಕ್ತರಿಗೆ ನಾನೇ ದೂರು ಸಲ್ಲಿಸುತ್ತೇನೆ ಸೂಕ್ತ ತನಿಖೆಯಾಗಲಿ ಅದರಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆಯಾಗಲಿದೆ.
ಸಿ.ಎಸ್.ನಾಡಗೌಡ(ಅಪ್ಪಾಜಿ)
ಶಾಸಕರು ಮುದ್ದೇಬಿಹಾಳ ಕ್ಷೇತ್ರ