ಗುಂಡಿಕ್ಕಿ ಭೀಕರವಾಗಿ ಹತ್ಯೆ ಮಾಡಿರುವುದನ್ನು ದಲಿತ ಸಂಘರ್ಷ ಸಮಿತಿ ತೀವ್ರವಾಗಿ ಖಂಡನೆ
ಸಂಜೆವಾಣಿ ವಾರ್ತೆ
ತಿ.ನರಸೀಪುರ ಆ 6– ಉತ್ತರ ಪ್ರದೇಶದ ಅಮೇಠಿ ಜಿಲ್ಲೆಯ ಭವಾನಿ ನಗರದಲ್ಲಿ ಗುರುವಾರ ರಾತ್ರಿ, ದಲಿತ ಕುಟುಂಬದ ನಾಲ್ವರನ್ನು ಗುಂಡಿಕ್ಕಿ ಭೀಕರವಾಗಿ ಹತ್ಯೆ ಮಾಡಿರುವುದನ್ನು ದಲಿತ ಸಂಘರ್ಷ ಸಮಿತಿ ತೀವ್ರವಾಗಿ ಖಂಡಿಸುತ್ತದೆ.
ಮೃತರು ಮೂಲತಃ ಉ.ಪ್ರ. ದ ರಾಯಬರೇಲಿಯ ಸುದಾಮಪುರಿ ಗ್ರಾಮದ ಉಂಚಾಹಾರ್ ಪ್ರದೇಶದವರಾಗಿದ್ದು, ಇವರು ಅಮೇಠಿ ಜಿಲ್ಲೆಯ ಪನ್ ಹೌನಾ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿರುವ ಸುನೀಲ್ ಕುಮಾರ್ (35) , ಅವರ ಪತ್ನಿ ಪೂನಂ (32), ಲಾಡೂ (6), ಸೃಷ್ಟಿ (2), ಎಂದು ಗುರುತಿಸಲಾಗಿದೆ.
ಪ್ರತಿಭಟನೆ ನೇತೃತ್ವ ವಹಿಸಿದ್ದ ದಸಂಸ ಜಿಲ್ಲಾ ಸಂಚಾಲಕ ಆಲಗೂಡುಶಿವಕುಮಾರ್ ಮಾತನಾಡಿ , ತನ್ನನ್ನು ಚುಡಾಯಿಸಿದ ಕಾರಣಕ್ಕಾಗಿ ಕಳೆದ ತಿಂಗಳು ಆಗಸ್ಟ್ 18 ರಂದು ರಾಯ್ ಬರೇಲಿ ಮೂಲದ ಚಂದನ್ ವರ್ಮಾ ವಿರುದ್ದ ಶಿಕ್ಷಕ ಸುನಿಲ್ ಪತ್ನಿ ಪೂನಂ ಅವರು ಎಸ್ಸಿ ಎಸ್ಟಿ ಕಾಯ್ದೆ ಅಡಿಯಲ್ಲಿ ಮತ್ತು ತಮ್ಮ ಕುಟುಂಬಕ್ಕೆ ಏನೇ ಅಪಾಯ ಆದರೂ ವರ್ಮಾ ನೇ ಕಾರಣ ಎಂದು ಪೆÇಲೀಸರಿಗೆ ದೂರು ನೀಡಿದ್ದರು. ಆ ಹಿನ್ನೆಲೆಯಲ್ಲಿಯೇ ಇಬ್ಬರು ಸಣ್ಣ ಮಕ್ಕಳೂ ಸೇರಿದಂತೆ ಇಡೀ ಕುಟುಂಬವನ್ನು ಗುಂಡಿಕ್ಕಿ ಕೊಂದಿರುವುದು ಆಘಾತಕಾರಿಯಾದುದಾಗಿದೆ.
ಉತ್ತರ ಭಾರತದ ಬಹುತೇಕ ರಾಜ್ಯಗಳಲ್ಲಿ ದಲಿತರ ಮೇಲೆ ನಿರಂತರವಾಗಿ ಹಲ್ಲೆ, ಕೊಲೆ-ಸುಲಿಗೆ, ಅತ್ಯಾಚಾರ ,ದೌರ್ಜನ್ಯದಂತ ಪ್ರಕರಣಗಳು ಮೇಲಿಂದ ಮೇಲೆ ಘಟಿಸುತ್ತಿರುವುದು ಆತಂಕಕಾರಿ. ಅದರಲ್ಲಿಯೂ ಉತ್ತರ ಪ್ರದೇಶದಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ಕ್ಷುಲ್ಲಕ ಕಾರಣಗಳಿಗಾಗಿ ದಲಿತರ ಹತ್ಯೆಗಳು ನಡೆಯುತ್ತಿರುವುದು, ದಲಿತರ ರಕ್ಷಣೆಯಲ್ಲಿ ಅಲ್ಲಿನ ಸರ್ಕಾರದ ವೈಫಲ್ಯವನ್ನು ಎತ್ತಿ ತೋರಿಸುತ್ತದೆ.
ಸಬ್ ಕಾ ಸಾಥ್, ಸಬ್ ಕ ವಿಕಾಶ್, ಬೇಟಿ ಬಚಾವ್,ಬೇಟಿ ಪಡಾವ್ ಎನ್ನುವ ಪ್ರಭುತ್ವದ ನಾಯಕರಿರುವ ದೇಶದಲ್ಲಿ ದಲಿತರು, ಮಹಿಳೆಯರು ಪ್ರಾಣವನ್ನು ಕೈಯಲ್ಲಿ ಹಿಡಿದು ಜೀವಿಸುವ ಸ್ಥಿತಿ ಕಳೆದ ಹತ್ತು ವರ್ಷಗಳಲ್ಲಿ ದುಪ್ಪಟ್ಟಾಗಿದೆ. ಅದರಲ್ಲಿಯೂ ಮೂರನೇಯ ಭಾರಿ ಅಧಿಕಾರಕ್ಕೆ ಬಂದ ಮೇಲಂತೂ ಮತ್ತಷ್ಟು ಹೆಚ್ಚಾಗಿದೆ.
ದೇಶದಲ್ಲಿ ಎಲ್ಲಿ ದಲಿತರ ಮೇಲೆ ದೌರ್ಜನ್ಯ ಮತ್ತು ಹತ್ಯೆಗಳನ್ನು ನಡೆಯತ್ತವೆ, ಆ ಕಡೆಗಳಲ್ಲಿ ಅದನ್ನು ತಡೆಯಲಾಗದ ಅಲ್ಲಿನ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಿ ಅವರನ್ನು ಸೇವೆಯಿಂದ ವಜಾಗೊಳಿಸುವ ಕಾನೂನು ದೇಶಾದ್ಯಂತ ಜಾರಿಗೊಳಿಸಬೇಕು.
ದಲಿತರ ಹತ್ಯೆಗೈಯುವ ದುರುಳರಿಗೆ ಕಾನೂನಿನ ಕಠಿಣ ಶಿಕ್ಷೆಯನ್ನು ಜಾರಿಗೊಳಿಸಬೇಕು. ಮೃತರ ಕುಟುಂಬಗಳಿಗೆ ಸರ್ಕಾರಿ ನೌಕರಿ ನೇಮಕ ಕಡ್ಡಾಯಗೊಳಿಸಬೇಕು ಮೃತರ ಕುಟುಂಬಗಳಿಗೆ ನೀಡುವ ಪರಿಹಾರವನ್ನು ದುಪ್ಪಟ್ಟು ಮಾಡಬೇಕು ಎಂದು ದಸಂಸ ಆಗ್ರಹಿಸುತ್ತ.
ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು, ತಿ.ನರಸೀಪುರ ಖಾಸಗಿ ಬಸ್ ನಿಲ್ದಾಣದಿಂದ – ತಾಲ್ಲೂಕು ಆಡಳಿತ ಸೌಧ ಮುಂಭಾಗ ಇರುವ ಡಾ.ಬಿ.ಆರ್ ಅಂಬೇಡ್ಕರ್ ಪ್ರತಿಮೆ ವರೆಗೆ ಪಂಜಿನ ಮೆರವಣಿಗೆ ನಡೆಸಿ ಪ್ರತಿಭಟಿಸಲಾಯಿತು.
ಪ್ರತಿಭಟನೆಯಲ್ಲಿ ದಸಂಸ ತಾಲ್ಲೂಕು ಸಂಚಾಲಕ ಯಾಚೇನಹಳ್ಳಿ ಸೋಮಶೇಖರ್,ಕುಕ್ಕೂರುರಾಜು, ಕಿರಗಸೂರು ರಜನಿ, ಹಿರಿಯೂರು ಸೋಮಣ್ಣ,ಯಡದೊರೆ ನಾರಾಯಣ್, ಶಿವರಾಜು, ಸುಜ್ಜುಲೂರು ಶಿವಯ್ಯ, ಬನ್ನಹಳ್ಳಿಹುಂಡಿ ಉಮೇಶ್, ಆಲಗೂಡು ನಾಗರಾಜ್ ಮೂರ್ತಿ,ರವಿ, ಅರುಣ್ ಪ್ರಸಾದ್, ಸಂಜಯ್,ಆನಂದ, ಉಕ್ಕಲಗೆರೆ ರಾಜು,ರವಿ, ಮೂರ್ತಿ, ಕುರುಬೂರು ನಾರಾಯಣ್,ಇಂಡವಾಳುಹೊನ್ನಯ್ಯ, ನಾಗರಾಜು, ಕೇತುಪುರ ಶಿವನಂಜ, ಡಣಾಯಕನಪುರ ವಸಂತ, ವಾಟಾಳ್ ಸಿದ್ದೇಶ್, ಪ್ರಭು, ಮನು,ಮಾದೇಶ, ಮುತ್ತತ್ತಿನಾಗರಾಜು, ದಾವಣಗೆರೆ ಕಾಲೋನಿ ರಾಜು, ಬಿಲಗೆರೆಹುಂಡಿ ಸಿದ್ದರಾಜು,ಚೌಹಳ್ಳಿಕೃಷ್ಣ,ಗ್ರಾಮ ರಂಗಸ್ವಾಮಿ ಇತರರು ಇದ್ದರು.