ಕುಸ್ತಿಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ
ತಾಳಿಕೋಟೆ :ಅ.೬: ಪಟ್ಟಣದ ಶ್ರೀ ಎಸ್. ಎಸ್. ವಿದ್ಯಾ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಶ್ರೀ ಸಂಗಮೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿ ಕುಮಾರ ಯಂಕಣ್ಣ. ಎಸ್. ಭಂಗಿ ಜಿಲ್ಲಾ ಮಟ್ಟದ ಕುಸ್ತಿ ಕ್ರೀಡೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾನೆ.
ಜಿಲ್ಲಾ ಪಂಚಾಯತ ವಿಜಯಪುರ, ಉಪನಿರ್ದೇಶಕರ ಕಛೇರಿ (ಆಡಳಿತ), ಶಾಲಾ ಶಿಕ್ಷಣ ಇಲಾಖೆ, ವಿಜಯಪುರ ಸಹಯೋಗದಲ್ಲಿ ನಡೆದ ವಿಜಯಪುರದಲ್ಲಿ ನಡೆದ ವಿಜಯಪುರ ಜಿಲ್ಲೆಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ ಕುಮಾರ ಯಂಕಣ್ಣ ಎಸ್ ಭಂಗಿ ಪ್ರಥಮ ಸ್ಥಾನ ಪಡೆಯುವದರೊಂದಿಗೆ ರಾಜ್ಯಮಟ್ಟದ ಕ್ರೀಡೆಗೆ ಆಯ್ಕೆಯಾಗಿ ತಾಲೂಕಿನ ಹಿರಿಮೆಯನ್ನು ಹೆಚ್ಚಿಸಿದ್ದಾನೆ.
ವಿಧ್ಯಾರ್ಥಿ ಯಂಕಣ್ಣ ಭಂಗಿ ಅವರ ಸಾಧನೆಗೆ ಶ್ರೀ ಎಸ್.ಎಸ್.ವಿದ್ಯಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಎಚ್.ಎಸ್.ಪಾಟೀಲ. (ಬಾವೂರ), ಕಾರ್ಯದರ್ಶಿಗಳಾದ ಸಚಿನ. ಎಚ್. ಪಾಟೀಲ, ಆಡಳಿತಾಧಿಕಾರಿಗಳಾದ ಕಿರಣ. ಎಚ್. ಪಾಟೀಲ, ರವಿ. ಬಿ. ಪಾಟೀಲ, ಎಚ್.ಎಸ್.ಪಾಟೀಲ ಬಿಪಿಎಡ್ ಕಾಲೇಜಿನ ಪ್ರಾಚಾರ್ಯರಾದ ಶಿವುಕುಮಾರ ನಾಯಕ, ಎಚ್ ಎಸ್ ಪಾಟೀಲ ಪಿ. ಯು.ಕಾಲೇಜಿನ ದೈಹಿಕ ಶಿಕ್ಷಕ ಎಸ್.ಬಿ.ಮಂಗ್ಯಾಳ, ಪ್ರೌಢಶಾಲೆಯ ದೈಹಿಕ ಶಿಕ್ಷಕರಾದ ಎಮ್.ಎಸ್. ರಾಯಗೊಂಡ, ಸಿಬ್ಬಂದಿಗಳಾದ ಬಿ.ಆಯ್.ಹಿರೇಹೊಳಿ, ಎಸ್.ವಿ.ಜಾಮಗೊಂಡಿ, ಎಸ್.ಸಿ.ಗುಡಗುಂಟಿ, ಎಚ್.ಬಿ.ಪಾಟೀಲ, ಯು.ಎಚ್.ಗಟನೂರ, ಪ್ರಕಾಶ. ಪಾಟೀಲ, ವಿಶ್ವನಾಥ. ಬಿರಾದಾರ, ವಾಗೇಶ ಕೊಡಗಾನೂರ, ಶೀಮತಿ ಗಾಯತ್ರಿ ಪತ್ತಾರ, ಶ್ರೀಮತಿ ಎ.ಸಿ.ಗುಮಶೆಟ್ಟಿ, ಹಾಗೂ ಸಂಸ್ಥೆಯ ಸಮಸ್ತ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಸಾಧನೆಗೈದ ಕ್ರೀಡಾಪಟುವಿಗೆ ಅಭಿನಂದನೆ ತಿಳಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.