ಅಹಂಕಾರದಿಂದ ಮಾನವೀಯತೆ ನಾಶ
ಮಧುಗಿರಿ, ಆ. ೧೦- ಅಕ್ಷರ ಜ್ಞಾನ ಜ್ಯೋತಿಯಾಗಿ ವಿದ್ಯಾರ್ಥಿಗಳ ಬಾಳನ್ನು ಬೆಳಗಿಸಲಿ. ಅತಿಯಾದ ನಾಗರಿಕತೆ ಚಿಂತನೆಗಳನ್ನು ತಡೆಯುತ್ತದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ.ನೀ.ಹ ರವಿಕುಮಾರ್ ಹೇಳಿದರು.
ಪಟ್ಟಣದ ಶ್ರೀ ಟಿವಿ ವೆಂಕಟಸ್ವಾಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ತಳ ಪದವೀದವರಿಗೆ ಶಿಕ್ಷಣ ನೀಡಿ ಸ್ಥಳೀಯ ನೆಲೆಯಿಂದ ವಿಶ್ವ ನೋಡುವ ಅವಕಾಶ ಕಲ್ಪಿಸಬೇಕು. ಅಹಂಕಾರ ಮಾನವೀಯತೆಯನ್ನು ನಾಶ ಮಾಡುತ್ತದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಮಧುಗಿರಿ ವಿದ್ಯಾಸಂಸ್ಥೆಯ ಅಧ್ಯಕ್ಷ ಎಂ.ವಿ ಶ್ರೀನಿವಾಸ್ ಮಾತನಾಡಿ,
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಡಾ ಟಿ.ಹೆಚ್ ಮಂಜುನಾಥ್ ಮಾತನಾಡಿ, ಎಲ್ಲರೊಳಗೊಂದಾಗುವ ಮನೋಭಾವ ಬೆಳಸಿಕೊಳ್ಳಿ. ಹಿಂದೆ ಗುರು, ಮುಂದೆ ಗುರಿ ಇರಲಿ. ಪ್ರಾಮಾಣಿಕತೆ ಮನುಷ್ಯತ್ವ ಬೆಳೆಸುತ್ತದೆ. ಪ್ರಯತ್ನವಿಲ್ಲದೆ ಏನೂ ಸಾಧಿಸಲಾಗದು ಎಂದರು.
ಹಿರಿಯ ಸಾಹಿತಿ ಪ್ರೊ.ಮ.ಲ.ನ ಮೂರ್ತಿ ಮಾತನಾಡಿ, ನಡೆ, ನುಡಿ, ನೋಟ ಶುದ್ಧವಿದ್ದರೆ ಅವಕಾಶಗಳು ದಾರಿ ತೆರೆಯುತ್ತವೆ ಎಂದರು.
ಇದೇ ಸಂದರ್ಭದಲ್ಲಿ ವಿವಿಧ ಆಟೋಟಗಳಲ್ಲಿ ವಿಜೇತರಾದವರಿಗೆ ಮಧುಗಿರಿ ವಿದ್ಯಾಸಂಸ್ಥೆಯ ಸದಸ್ಯ ಡಿ.ಜಿ ಶಂಕರನಾರಯಣ ಶ್ರೇಷ್ಠಿ ಬಹುಮಾನ ವಿತರಿಸಿದರು.
ಕಾರ್ಯಕ್ರಮವನ್ನು ಮಧುಗಿರಿ ವಿದ್ಯಾಸಂಸ್ಥೆಯ ಅಧ್ಯಕ್ಷ ಎಂ.ವಿ. ಶ್ರೀನಿವಾಸ್ ವಹಿಸಿದ್ದರು. ಪ್ರಾಚಾರ್ಯ ಎಂ.ವೈ. ಹೊಸಮನಿ ಆದ್ಯಕ್ಷತೆ ವಹಿಸಿದ್ದರು.
ಶ್ವೇತಾ ಪ್ರಾರ್ಥಿಸಿದರು, ಮಂಜುನಾಥ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿದ್ಯಾಶ್ರೀ ಸ್ವಾಗತಿಸಿದರು, ರಂಗಸ್ವಾಮಿ ಕಾರ್ಯಕ್ರಮ ನಿರೂಪಿಸಿದರು, ಮಣಿಕಂಠ ವಂದಿಸಿದರು.