ಆ. ೨೨: ರಾಯರ ೩೫೩ನೇ ಆರಾಧನಾ ಮಹೋತ್ಸವ
ಚಿಕ್ಕನಾಯಕನಹಳ್ಳಿ, ಆ. ೧೦- ರಾಯರ ೩೫೩ನೇ ಆರಾಧನಾ ಮಹೋತ್ಸವ ಆ. ೨೨ ರಂದು ಹಳೆಯೂರು ಆಂಜನೇಯಸ್ವಾಮಿ ದೇವಾಲಯದಲ್ಲಿ ಮಧ್ಯಾಹ್ನ ೨ ಗಂಟೆಯಿಂದ ಸಂಜೆ ೮ ಗಂಟೆವರೆಗೂ ರಾಯರ ಪೂಜಾ ಕಾರ್ಯಕ್ರಮಗಳು ನಡೆಯಲಿವೆ ಎಂದು ರಾಯರ ಆರಾಧನ ಸಮಿತಿ ತಿಳಿಸಿದೆ.
ಪಟ್ಟಣದ ಹಳೆಯೂರು ಆಂಜನೇಯಸ್ವಾಮಿ ದೇವಾಲಯದಲ್ಲಿ ನಡೆದ ಸಭೆಯಲ್ಲಿ ಮಾಹಿತಿ ನೀಡಿದ ಸಮಿತಿಯ ತಂಡ, ಆ. ೨೨ ರಂದು ಶ್ರೀ ಗುರು ರಾಘವೇಂದ್ರ ತೀರ್ಥ ಸಾರ್ವಭೌಮರ ಉತ್ತರಾಧನೆ ಪ್ರಯುಕ್ತ ನಡೆಯುವ ಪೂಜೆಯಲ್ಲಿ ಅಷ್ಟಾಕ್ಷರಿ ಹೋಮ ಮತ್ತು ರಥೋತ್ಸವ ನಡೆಯಲಿದೆ.
ಹೋಮ ಹವನಕ್ಕೆ ಎಂಟು ಮಂದಿ ದಂಪತಿಗಳು ಭಾಗಿಯಾಗಲಿದ್ದಾರೆ. ಮಧ್ಯಾಹ್ನ ಆರಂಭವಾಗುವ ಪೂಜೆ ಸಂಜೆ ೫ರವರೆಗೂ ವಿವಿಧ ಕೈಂಕರ್ಯಗಳ ಪೂಜಾ ವಿಧಾನಗಳು ನಡೆಯಲಿವೆ ಎಂದು ತಿಳಿಸಿದೆ.
ಸಂಜೆ ದೇವಸ್ಥಾನದಲ್ಲಿರುವ ರಥದಲ್ಲಿ ರಾಯರನ್ನು ಪ್ರತಿಷ್ಠಾಪಿಸಿ ದೇವಸ್ಥಾನದಲ್ಲಿ ಎಂಟು ಬಾರಿ ಉತ್ವವ ನಡೆಯಲಿದೆ. ಸಂಜೆ ವೇಳೆ ದೇವರ ಸ್ತೋತ್ರ ಹಾಗೂ ರಾಯರ ಹಾಡುಗಳ ಭಜನೆ ನಡೆಯಲಿದೆ ಹಾಗೂ ಇದೇ ವೇಳೆ ಗುರುರಾಯರ ಅಷ್ಟಾಕ್ಷರಿ ಮಂತ್ರ ಬರೆಯುವವರು ಲೇಖನ ಪತ್ರಗಳನ್ನು ಶ್ರೀ ಹಳೆಯೂರು ಆಂಜನೇಯಸ್ವಾಮಿ ದೇವಾಲಯ ಅರ್ಚಕರಲ್ಲಿ ಪಡೆದು ಆರಾಧನಾ ಮಹೋತ್ಸವದ ದಿನ ತಾವೇ ಲೇಖನ ಪತ್ರ ಮತ್ತು ತುಳಸಿಯೊಂದಿಗೆ ಬಂದು ರಾಯರಿಗೆ ಸಮರ್ಪಿಸಬಹುದು. ಹಾಗೂ ಆರಾಧನಾ ಮಹೋತ್ಸವಕ್ಕೆ ಬರುವ ಭಕ್ತಾದಿಗಳಿಗೆ ಮಂತ್ರಾಲಯದ ರಾಯರ ಮಠದಿಂದ ಬಂದಿರುವ ಪ್ರಸಾದ ಹಾಗೂ ಮಂತ್ರಾಕ್ಷತೆ ನೀಡಲಾಗುವುದು ಎಂದು ರಾಯರಿದ್ದಾರೆ ಆರಾಧನಾ ಸಮಿತಿ ತಿಳಿಸಿದೆ.
ಸಭೆಯ ಅಧ್ಯಕ್ಷತೆಯನ್ನು ಧರ್ಮದರ್ಶಿ ಪ್ರಶಾಂತ್ ಶೆಟ್ಟಿ ವಹಿಸಿದ್ದರು.
ಆರಾಧನೆ ಮಹೋತ್ಸವದ ಸಂಚಾಲಕರಾದ ಮಹಾಂತೇಶ್, ಸಮಿತಿ ಸದಸ್ಯರಾದ ಸಿ.ಟಿ ಗುರುಮೂರ್ತಿ, ಡಾ. ಸಿ. ರವಿಕುಮಾರ್, ಮಂಜುನಾಥ್, ರಘು, ನಿರೂಪ್ ರಾವತ್, ನವೀನ್ ರಾವತ್, ಗಂಗಾಧರ್ ಮಗ್ಗದಮನೆ ಗವಿರಂಗ, ಸಂತೋಷ್, ಓಂಕಾರಮೂರ್ತಿ, ಸಿದ್ದರಾಮಯ್ಯ, ವಿನಯ್ ಮತ್ತಿತರರು ಉಪಸ್ಥಿತರಿದ್ದರು.