ಶಾಲೆಗೆ ಹೋದ ವಿದ್ಯಾರ್ಥಿ ನಾಪತ್ತೆ
ತಿಪಟೂರು, ಆ. ೧೦- ತಾಲ್ಲೂಕಿನ ಕೆ.ಬಿ ಕ್ರಾಸ್ ಹೋಬಳಿ ಜಕ್ಕನಹಳ್ಳಿ ಗ್ರಾಮದ ವಾಸಿ ರಾಮಚಂದ್ರಯ್ಯ ರವರ ಮಗ ಶಾಲೆಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೊರ ಹೋದವನು ವಾಪಸ್ ಬಂದಿಲ್ಲ ಎಂದು ವಿದ್ಯಾರ್ಥಿ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ.
ಕೆ.ಬಿ. ಕ್ರಾಸ್‌ನಲ್ಲಿರುವ ಶ್ರೀ ಗುರು ಕಾನ್ವೆಂಟ್‌ನಲ್ಲಿ ೧೦ ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಈತ ಶಾಲೆಗೆ ಹೋಗಿ ಬರುವುದಾಗಿ ಹೇಳಿ, ಶಾಲೆಯ ಸಮವಸ್ತ್ರ ಧರಿಸಿ ಹೋದವನು ವಾಪಸ್ ಬಂದಿಲ್ಲ. ಕಪ್ಪು ಮೈ ಬಣ್ಣ, ೪ ಅಡಿ ಎತ್ತರ, ಸಾಧಾರಣ ಮೈಕಟ್ಟು ಹೊಂದಿದ್ದಾನೆ. ಮನೆಯಿಂದ ಹೋಗುವಾಗ ಬಿಸ್ಕೆಟರ್ ಕಲರ್ ಶರ್ಟ್ ಹಾಗೂ ಹಸಿರು ಕಲರ್ ಪ್ಯಾಂಟ್ ಧರಿಸಿದ್ದ.
ಈತನ ಸುಳಿವು ಸಿಕ್ಕಲ್ಲಿ ಕೆ.ಬಿ. ಕ್ರಾಸ್ ಪೊಲೀಸ್ ಠಾಣೆ ಮೊಬೈಲ್ ನಂ. ೯೪೪೮೦೮೦೨೯೮೯ ಹಾಗೂ
ವಿದ್ಯಾರ್ಥಿಯ ತಂದೆ ರವಿ ಅವರ ನಂಬರ್ ೯೪೪೮೦೪೪೮೧೧. ೯೪೪೮೦೪೬೦೦೧, ಕರೆ ಮಾಡಿ ತಿಳಿಸಬೇಕೆಂದು ಕೆ. ಬಿ. ಕ್ರಾಸ್ ಪೊಲೀಸ್ ಠಾಣೆಯ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.