ನಗರಸಭೆಯಿಂದ ಪುಟ್ ಪಾತ್ ಅಂಗಡಿ ತೆರವು
ಕೆಜಿಎಫ್. ಆ. ೧೦. ನಗರಸಭೆ ಆರೋಗ್ಯ ಅಧಿಕಾರಿಗಳ ನೇತೃತ್ವದಲ್ಲಿ ನಗರಸಭೆ ಪೌರಕಾರ್ಮಿಕರು ನಗರಸಭೆ ಮುಂಭಾಗದಲ್ಲಿ ರುವ ಪುಟ್ ಪಾತ್ ಅಂಗಡಿಗಳನ್ನು ತೆರವುಗೊಳಿಸಿ ದರು.
ಪುಟ್ ಪಾತ್‌ನಲ್ಲಿ ಬೀದಿ ಬದಿ ವ್ಯಾಪಾರ ಮಾಡುತ್ತಿರುವವರು ಪುಟ್ ಪಾತ್ ಆಕ್ರಮಿಸಿಕೊಂಡು ಅಂಗಡಿ ಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುವುದರಿಂದ ಸಾವ೯ಜನಿಕ ಒಡಾಟಕ್ಕೆ ತೊಂದರೆ ಯಾಗುತ್ತದೆ ಮತ್ತು ನಗರಸಭೆ ಮುಂಭಾಗದ ಲ್ಲಿರುವ ಪುಟ್ ಪಾತ್ ಅಂಗಡಿ ಗಳಿಂದ ಪಾಕ್೯ನಲ್ಲಿ ಅನೈತಿಕ ಚಟುವಟಿಕೆ ಗಳು ತಿಳಿದು ಬರದಿರುವುದರಿಂದ ಅಂಗಡಿ ಗಳನ್ನು ತೆರವುಗೊಳಿಸಿ ಎಂದು ದೂರು ಬಂದ ಹಿನ್ನೆಲೆಯಲ್ಲಿ ಪುಟ್ ಪಾತ್ ನಲ್ಲಿರುವ ಅಂಗಡಿ ಗಳನ್ನು ತೆರವುಗೊಳಿಸಲಾಗಿದ್ದು ಮುಂದಿನ ದಿನಗಳಲ್ಲಿ ನಗರಾದ್ಯಂತ ಬೀದಿ ಬದಿಯಲ್ಲಿ ವ್ಯಾಪಾರ ಮಾಡುತ್ತಿರುವ ಅಂಗಡಿ ಗಳನ್ನು ತೆರವುಗೊಳಿಸಲಾಗಿವುದು ಎಂದು ನಗರಸಭೆ ಆರೋಗ್ಯ ನಿರೀಕ್ಷಕಿ ಸರಸ್ವತಿ ಹೇಳಿದರು. ಈ ವೇಳೆ ಬೀಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಆರೋಗ್ಯ ನಿರೀಕ್ಷಕರಾದ ಗೌರಿ, ಪ್ರದೀಪ್ ಹಾಗೂ ಇತರರು ಹಾಜರಿದ್ದರು.