ನಿಂಬರ್ಗಾ ಗ್ರಾಪಂ ವಿಸರ್ಜನೆಗೆ ಪ್ರತಿಭಟನಾಕಾರರ ಒತ್ತಾಯ
ಆಳಂದ:ಆ.೧೦: ನಿಂಬರಗಾ ಗ್ರಾಪಂನಲ್ಲಿ ೧೫ನೇ ಹಣಕಾಸು ಅನುದಾನ ದೊಡ್ಡ ಪ್ರಮಾಣದಲ್ಲಿ ದುರುಪಯೊಗವಾಗಿದ್ದು ಇದಲ್ಲಿ ೯ ಜನ ಸದಸ್ಯರ ಹೆಸರಿನಲ್ಲಿ ಕಾನೂನು ಬಾಹೀರವಾಗಿ ಚೆಕ್ ನೀಡಲಾಗಿದೆ. ಹೀಗಾಗಿ ಇಡಿ ಪಂಚಾಯತಿ ಭ್ರಷ್ಟಾಚಾರದಿಂದ ಕೂಡಿದ್ದು ಈ ಕೂಡಲೇ ಗ್ರಾಮ ಪಂಚಾಯತಿಯನ್ನು ವಿಸರ್ಜನೆ ಮಾಡಬೇಕೆಂದು ಸರ್ವ ಸಮಾಜ ಕಲ್ಯಾಣ ಸಮೀತಿಯಿಂದ ಪ್ರತಿಭಟನೆ ಕೈಗೊಂಡು ಅಧಿಕಾರಿಗಳಿಗೆ ಒತ್ತಾಯಿಸಲಾಯಿತು.
ನಿಂಬರಗಾ ಗ್ರಾಪಂ ಕಚೇರಿ ಮುಂದೆ ಸರ್ವ ಸಮಾಜ ಕಲ್ಯಾಣ ಸಮಿತಿ ನೇತೃತ್ವದಲ್ಲಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಸಮಾಜದ ಅಧ್ಯಕ್ಷ ವಿಠ್ಠಲ್ ಕೋಣೆಕರ್ ಬೇಡಿಕೆಗೆ ಆಗ್ರಹಿಸಿದರು.
ನಿಂಬರಗಾ ಧಾನೇಶ್ವರ ನಗರದಲ್ಲಿ ಕುಡಿಯಲು ನೀರಿಲ್ಲ. ಮತ್ತು ಸೂಕ್ತ ಸಿಸಿ ರಸ್ತೆ ನಿರ್ಮಿಸಿಲ್ಲ. ಮೌಲ್ಲಾ ನಗರದಲ್ಲಿ ಕೂಡ ಇದೇ ಪ್ರಸ್ಥಿತಿಯಿದೆ. ಅನಾವಶ್ಯಕವಾಗಿ ಗ್ರಾಪಂನ್ನಲ್ಲಿ ಸುಮಾರು ೨೭ ಲಕ್ಷö್ಯ ಹಣ ಎತ್ತಿ ಹಾಕಲಾಗಿದೆ. ಆದರೇ ಅಭೀವೃದ್ಧಿ ಮಾತ್ರ ಶೂನ್ಯವಾಗಿದೆ. ಅಧಿಕಾರಿಗಳು ಇದನ್ನು ಪರಿಶೀಲನೆ ಮಾಡಿ ತಪ್ಪಿಸ್ಥರ ಮೇಲೆ ಕಾನುನೂ ಕ್ರಮ ಜರುಗಿಸಬೇಕು. ಹಾಗೂ ೨೦೨೧ರಿಂದ ೨೦೨೪ನೇ ಸಾಲಿನವರೆಗಿನ ೧೫ನೇ ಹಣಕಾಸಿನ ತನಿಖೆ ಮಾಡಬೇಕು ಎಂದು ಪ್ರತಿಭಟನಾ ನಿರತರು ಸ್ಥಳಕ್ಕೆ ಆಗಮಿಸಿದ್ದ ತಾಪಂ ಇಒ ಮಾನಪ್ಪ ಕಟ್ಟಿಮನಿ ಅವರನ್ನು ಮನವಿ ಸಲ್ಲಿಸಿ ಒತ್ತಾಯಿಸಿದರು.
೨೫ ಹಳ್ಳಿಗಳಿಗೆ ಸೇವೆ ನೀಡುವ ಸಮುದಾಯ ಆರೋಗ್ಯ ಕೇಂದ್ರ ಸಮಸ್ಯೆ ಯಾವೊಬ್ಬ ಸದಸ್ಯರು ಆಲಿಸಿಲ್ಲ ಹಾಗೂ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿರುವ ೨೮ ಲಕ್ಷö್ಯ ವೆಚ್ಚದಲ್ಲಿ ನಿರ್ಮಾಣವಾಗು ಗ್ರಾಪಂ ಕಟ್ಟಡ, ೧೯ ಲಕ್ಷö್ಯ ರೂ.ವೆಚ್ಚದ ಕಸವಿಲೇವಾರಿ ಘಟಕ ಮತ್ತು೨.೫೦ಕೋಟಿ ವೆಚ್ಚದ ಕೆರೆ ನಿರ್ಮಾಣ ಕಾರ್ಯ ಕೂಡ ಪೂರ್ಣಗೊಂಡಿಲ್ಲ ಇವುಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಉಪತಹಶೀಲ್ದಾರ ಮಹೇಶ ಡಿ, ಸಣ್ಣ ನೀರಾವರಿ ಇಲಾಖೆಯ ಜೆಇ ಅನೀಲ್, ಪಿಡಿಒ ಸುಕನ್ಯಾ ಹಾಜರಿದ್ದರು.
ಪ್ರತಿಭಟನೆಯಲ್ಲಿ ಪ್ರಮುಖ ಚಂದ್ರಕಾAತ ದುಗೊಂಡ, ಪರಮೇಶ್ವರ ಶಿವಗೊಂಡಗೋಳ್, ಪ್ರಕಾಶ ಸರ್ವೋದಯ, ಸುರ್ಯಕಾಂತ ಕರಣಾಕರ್, ರಾಮು ದೇವಕರ್, ವಿಠ್ಟಲ್ ಕಟ್ಟಿಮನಿ, ಮಹೇಂದ್ರ ನಿರ್ಮಲಕರ್, ಕಲಾವತಿ ಮಂಟಗಿ, ಖಾದರಸಾಬ್ ಲಧಾಪ, ಮಲ್ಲಮ್ಮ ಹೇಬಳಿ, ದೂಳಮ್ಮ, ಶಿವಲೀಲಾ ಮಠಪತಿ, ಭೌರಮ್ಮ ಹೀರೆಮಠ, ಸರಸ್ವತಿ ಮಡಿವಾಳ, ಈರಮ್ಮ ದೂಗೊಂಡ, ಧರ್ಮರಾಯ ಕಾಮಣಗೊಳ, ಜಗು ಮಾಳಗಿ, ಲಕ್ಷಿö್ಮÃಕಾಂತ ಕಾಮಣಗೋಳ್, ಶಿವುಕುಮಾರ ನಾಗೂರ, ವೆಂಕಟೆಶ ಭೋವಿ, ಶರಣು ಬಿರಾದಾರ, ಚಂದ್ರಕಾAತ ಬಿಲಗುಂದಿ, ಮಲ್ಲಕ್ಕಣಾ ಸಿಂಗೆ, ಬಸವರಾಜ ಟಪ್ಪಾ, ವಿಠ್ಠಲ್ ಜಮಾದಾರ, ಮರೇಪ್ಪ ಹಾದಿಮನಿ, ಇಮಾಮಸಾಬ್ ಪಟೇಲ್, ರಾಜು ಬಮ್ಮನಹಳ್ಳಿ,ರುತ್ತೇಶ ನಿರ್ಮಾಲಕರ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ನಿಂಬರಗಾ ಠಾಣೆ ಪೊಲೀಸರಿಂದ ಸೂಕ್ತ ಬಂದೊಬಸ್ತ ಮಾಡಿದರು.
ಠಾಣೆಗೆ ಸದಸ್ಯನ ವಿರುದ್ಧ ದೂರು:
ನಿಂಬರಗಾ ಗ್ರಾಪಂ ಮುಂದೆ ಸರ್ವ ಸಮಾಜ ಕಲ್ಯಾಣ ಸಮೀತಿ ಕೈಗೊಂಡ ಪ್ರತಿಭಟನೆ ಗ್ರಾಮ ಪಂಚಾಯತಿ ತಲುಪುತಿದಂತೆ ಪ್ರತಿಭಟನಾಕಾರರು ಗ್ರಾಪಂ ಕಚೇರಿ ಒಳಗಡೆ ಇದ್ದ ಪಿಡಿಒ, ಸದಸ್ಯರನ್ನು ಹೊರ ಹಾಕಿ ಬೀಗ್ ಹಾಕುವಾಗ ಗ್ರಾಪಂ ಪಂಚಾಯತ ಸದಸ್ಯ ರಾಜು ಚವ್ಹಾಣ್ ಮತ್ತು ಪ್ರತಿಭಟನೆಕಾರರ ಮಧ್ಯೆ ಮಾತಿನ ಚಕಮುಕಿ ನಡೆದು ಕೈ ಕೈ ಮೀಲಾಯಿಸುವ ಹಂತಕ್ಕೆ ಪರಿಸ್ಥಿತಿ ಹೋಗಿತ್ತಾದರು. ಈ ಪರಿಸ್ಥಿತಿ ವಿಕೋಪಕ್ಕೆ ಹೋಗುವ ಮುಂಚೆ ಸ್ಥಳದಲ್ಲಿಯೇ ಇದ್ದ ಪೊಲೀಸರು ಮಧ್ಯ ಪ್ರವೇಶಿಸಿದರಿಂದ ದೊಡ್ಡ ಮಟ್ಟದ ಜಗಳವನ್ನು ತಿಳಿಗೊಳಿಸಿದರು.
ನಂತರ ಪ್ರತಿಭನಾಕಾರರು ಠಾಣೆಗೆ ತೆರೆಳಿ ಗ್ರಾಪಂ ಸದಸ್ಯನ ಮೇಲೆ ಪ್ರತಿಭಟನಾಕಾರ ಮಹೇಂದ್ರ ಚಂದಪ್ಪ ನಿರ್ಮಲಕರ್ ಅವರು ದೂರು ನೀಡಿದ ಪ್ರಸಂಗ ನಡೆದಿದೆ.