ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಿ, ನೀರನ್ನು ಮಿತವಾಗಿ ಬಳಸಿ : ಡಾ.ಪಾಟೀಲ
ಸಂಜೆವಾಣಿ ವಾರ್ತೆ
ಬೀದರ : ಆ.೧೦:ಅಭಿವೃದ್ಧಿಯ ಹೆಸರಿನಲ್ಲಿ ಪರಿಸರ ಹಾನಿಯಾದರೆ ಜನ ಜೀವನ ಸಂಕಷ್ಟ ದಲ್ಲಿ ಬರುತ್ತದೆ ಅದಕ್ಕಾಗಿ ಪರಿಸರ ಸಂರಕ್ಷಿಸಿ, ಗಿಡ ಮರಗಳನ್ನು ನೆಟ್ಟು, ನೀರಿನ ಮಹತ್ವ ಅರಿತು, ಹಿತ -ಮಿತವಾಗಿ ಬಳಸಬೇಕು ಎಂದು ಬೀದರ್ ತೋಟಗಾರಿಕೆ ವಿಶ್ವ ವಿದ್ಯಾಲಯದ ಡೀನ್ ಡಾ.ಎಸ್.ವಿ.ಪಾಟೀಲ ಹೇಳಿದರು.
ರಿಲಯನ್ಸ್ ಫೌಂಡೇಶನ್ ಬೀದರ,ತೋಟಗಾರಿಕೆ ಮಹಾವಿದ್ಯಾಲಯ ಬೀದರ ಹಾಗೂ ಔಟರೀಚ್ ಸಂಸ್ಥೆ ಬೀದರ ಇವರುಗಳ ಸಹಯೋಗದಲ್ಲಿ ಸ್ಥಳೀಯ ತೋಟಗಾರಿಕೆ ವಿಶ್ವ ವಿದ್ಯಾಲಯದಲ್ಲಿ ಗುರುವಾರ ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಸದಸ್ಯರು ಮತ್ತು ಎನ್ ಆರ್ ಎಲ್ ಎಂ ಸದಸ್ಯರಿಗೆ ಹವಾಮಾನ ಹೊಂದಾಣಿಕೆ ಕುರಿತು ಏರ್ಪಡಿಸಿದ ಕಾರ್ಯಕ್ರಮಕ್ಕೆ ಉದ್ಘಾಟಿಸಿ ಮಾತನಾಡಿದರು.
ಹವಾಮಾನ ಬದಲಾವಣೆಯ ದುಷ್ಪರಿಣಾಮಗಳು ನಮ್ಮ ಜೀವನದ ಪ್ರತಿಯೊಂದು ಹಂತದಲ್ಲೂ ಆತಂಕಕಾರಿಯಾಗಿವೆ. ಮೊನ್ನೆ ತಾನೇ ಹವಾಮಾನ ಹೊಂದಾಣಿಕೆಯ ದುಷ್ಪರಿಣಾಮದಿಂದ ಕೇರಳದ ವೈನಾಡಿನಲ್ಲಿ ಘಟಿಸಿದ ಘಟನೆಯೇ ತಾಜಾ ಉದಾಹರಣೆ ಯಾಗಿದೆ. ರೈತರು ಪರಿಸರದ ಸುರಕ್ಷತೆ ಬಗ್ಗೆ ಜಾಗ್ರತಿ ವಹಿಸಬೇಕು. ಎಲ್ಲ ರೈತರು ತೋಟಗಾರಿಕೆ ಬೆಳೆ ಗಳನ್ನು ಬೆಳೆಯಲು ಮುಂದೆ ಬರಬೇಕು ಎಂದು ಸಲಹೆ ನೀಡಿದರು.
ಇದೆ ವೇಳೆ ತೋಟಗಾರಿಕೆ ಸಹ ಪ್ರಾಧ್ಯಾಪಕ ಡಾ. ವಿಜಯ ಮಹಾoತೇಶ್ ಸುಸ್ಥಿರ ಕೃಷಿಯಲ್ಲಿ ಸಾವಯವ ಗೊಬ್ಬರ ಪಾತ್ರ, ಡಾ.ಅನುರಾಧಾ ಅವರು ಹವಾಮಾನ ವೈಪರೀತ್ಯಾ ಅನುಗುಣವಾಗಿ ಹೂವಿನ ಬೇಸಯ ಕ್ರಮಗಳು, ಡಾ. ಅಂಬ್ರೆಶ ತರಕಾರಿ ಬೇಸಯ, ಡಾ. ಪ್ರಶಾಂತ ಕೀಟಗಳ ನಿರ್ವಹಣೆಯಲ್ಲಿ ಹವಾಮಾನ ವೈಪರೀತ್ಯಾ ಪ್ರಭಾವ ಮತ್ತು ಪರಿಹಾರ, ಡಾ. ಅಬ್ದುಲ್ ಕರೀಂ ಸಸ್ಯ ರೋಗಗಳ ನಿರ್ವಹಣೆ ಬಗ್ಗೆ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಡಾ.ವಿಪಿ ಸಿಂಗ್, , ಕಾರ್ಯಕ್ರಮ ಸಂಯೋಜಕ ಡಾ. ಅಶೋಕ ಸೂರ್ಯವಂಶಿ, ಡಾ. ಪ್ರವೀಣ ಜೋಳಗಿಕರ್, ಔಟ್ ರಿಚ್ ಕಾರ್ಯಕ್ರಮ ಅಧಿಕಾರಿ ಕೃಷ್ಣ ವೈ. ಟಿ., ಧನರಾಜ್, ಸಮುದಾಯ ಸಂಪನ್ಮೂಲ ವ್ಯಕ್ತಿ ಮಧುಕರ ಮಳ್ಳಾನೋರ, ಮಲ್ಲಪ್ಪ ಗೌಡ, ಅಭಂಗರಾವ ಪಾಟೀಲ್, ಸಿದ್ದಯ್ಯ ಸ್ವಾಮಿ, ಸೇರಿದಂತೆ ಇತರರಿದ್ದರು