ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಬೇಕು: ಎಸ್.ಬಿ. ಸಾವಳಸಂಗ
ಸAಜೆವಾಣಿ ವಾರ್ತೆ,
ವಿಜಯಪುರ,ಆ.೧೦:ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ತಮ್ಮ ಪ್ರತಿಭೆಯನ್ನು ಪ್ರಚುರಪಡಿಸಬೇಕೆಂದು ಉಪನ್ಯಾಸಕ ಹಾಗೂ ಸಾಹಿತಿ ಎಸ್.ಬಿ. ಸಾವಳಸಂಗ ಹೇಳಿದರು.
ಗುರುವಾರ ಜಿಲ್ಲೆಯ ತಿಕೋಟಾದ ಎ.ಬಿ.ಜತ್ತಿ. ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ೨೦೨೪-೨೫ ನೇ ಸಾಲಿನ ಸಾಂಸ್ಕೃತಿಕ, ಕ್ರೀಡಾ, ಪ್ರತಿಭಾ ಪುರಸ್ಕಾರ, ಶಾಲಾ ಸಂಸತ್ತಿನ ರಚನೆ ಹಾಗೂ ಪ್ರಮಾಣ ವಚನ ಬೋಧನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳಲ್ಲಿ ಒಗ್ಗಟ್ಟು, ಸ್ಪರ್ಧಾತ್ಮಕ ಮನೋಭಾವನೆ, ನಾಯಕತ್ವ ಗುಣ, ಸಮಯಪ್ರಜ್ಞೆ , ಧೈರ್ಯ, ಸಾಹಸ ಗುಣ ಹಾಗೂ ಶಿಸ್ತು ಮೂಡುತ್ತದೆಂದು ಹೇಳಿದರು.
ಉಪ ಪ್ರಾಚಾರ್ಯ ಡಿ. ಪಿ. ಬೆಳ್ಳಗಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿ ಮಹೇಶ್ವರಿ ಮಸಳಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಪಾರ್ವತಿ ಹಾದಿಮನಿ ವಂದನಾರ್ಪಣೆ ಮಾಡಿದರು. ದೈಹಿಕ ಶಿಕ್ಷಕ ಎಸ್.ಐ.ಕಲ್ಯಾಣಿ, ಶಾಲೆಯ ಸಿಬ್ಬಂದಿಗಳಾದ ಜಗದೀಶಗೌಡ ಪಾಟೀಲ, ಡಿ.ಬಿ. ಪಾಟೀಲ, ಬಿ.ಸಿ. ನಾವಿ, ಸುನಿತಾ ಮಾಳಿ, ಚೆನ್ನಯ್ಯ ಸಾಲಿಮಠ ಹಾಗೂ ಉಳಿದ ಎಲ್ಲ ಸಿಬ್ಬಂದಿವರ್ಗ ಮತ್ತು ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿದ್ದರು.