ಮರದ ಕೆಳಗೆ ನಿಂತಿದ್ದವರ ಮೇಲೆ ಹರಿದ ಬಸ್ಸ್; ಕೂದಲೆಳೆ ಅಂತರದಲ್ಲಿ ಪಾರಾದ ಐವರು
ಸಂಜೆವಾಣಿ ವಾರ್ತೆ
ದಾವಣಗೆರೆ.ಆ.೧೦; ಅವರೆಲ್ಲಾ ಮಳೆ ಬರ್ತಾ ಇದೇ ಎಂಬ ಕಾರಣಕ್ಕೇ ಬೈಕ್ ಗಳನ್ನು ಮರದ ಕೆಳಗೆ ನಿಲ್ಲಿಕೊಂಡು ನಿಂತಿದ್ದರು. ಆದೆರೆ ಹಂಪ್ಸ್ ತಪ್ಪಿಸಲು ಹೋದ ಬಸ್ಸು ಮರದ ಕೆಳಗೆ ನಿಂತಿದ್ದವರ ಮೇಲೆ ನುಗ್ಗಿದ್ದು, ಕೂದಲೆಳೆ ಅಂತರದಲ್ಲಿ ಬೈಕ್ ಸವಾರರು ಪರಾಗಿದ್ದಾರೆ. ಘಟನೆಯಲ್ಲಿ ಬೈಕ್ ಗಳು ಸಂಪೂರ್ಣವಾಗಿ ಜಖಂಗೊಂಡಿವೆ ಈ ಘಟನೆ ಬಾತಿ ಕೆರೆ ಸಮೀಪದಲ್ಲಿ ನಡೆದಿದೆ. ಮಳೆ ಬರ್ತಾ ಇದ್ದ ಕಾರಣ ಬೈಕ್ ಸವಾರರು ಬೈಕ್ ಗಳನ್ನು ಬಾತಿ ಕೆರೆ ಸಮೀಪ ಮರದ ಕೆಳೆಗೆ ನಿಲ್ಲಿಸಿಕೊಂಡು ನಿಂತಿದ್ದರು. ಆದರೆ ದಾವಣಗೆರೆಯಿಂದ ಹರಿಹರ ಮಾರ್ಗವಾಗಿ ಹುಬ್ಬಳ್ಳಿ ಕಡೆ ಹೊರಟ್ಟಿದ್ದ ಕೆ ಎಸ್ ಆರ್ ಟಿ ಸಿ ಬಸ್ ನ ಚಾಲಕ ಬಾತಿ ಕೆರೆ ಬಳಿ ಇದ್ದ ಹಂಪ್ಸ್  ಗಳನ್ನು ತಪ್ಪಿಸಲು ಹೋಗಿದ್ದಾನೆ. ಆಗ ಬಸ್ ಚಾಲಕನ ನಿಯಂತ್ರಣ ತಪ್ಪಿ ಮರದ ಕೆಳಗೆ ನಿಂತಿದ್ದವರ ಮೇಲೆ ನುಗ್ಗಿದೆ. ಅದೃಷ್ಟ ವಶಾತ್ ಮರದ ಕೆಳಗೆ ನಿಂತಿದ್ದವರು ಕೂದಲೆಳೆ ಅಂತರದಿಂದ ಪರಾಗಿದ್ದಾರೆ. ಆದರೆ ಬಸ್ ಬೈಕ್ ಗಳ ಮೇಲೆ ನುಗ್ಗಿದ ಪರಿಣಾಮ ಮೂರು ಬೈಕ್ ಗಳು ಸಂಪೂರ್ಣವಾಗಿ ಜಖಂ ಗೊಂಡಿವೆ ಬಸ್ಸು ನುಗ್ಗಿದ ರಭಸಕ್ಕೆ ಮೂರು ಬೈಕ್ ಗಳು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಐವರು ಗಾಯಗೊಂಡಿದ್ದು ಗಾಯಾಳುಗಳು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಬಾತಿ ಕೆರೆಯ ಬಳಿ ವಾಹನಗಳು ವೇಗವಾಗಿ ಚಲಿಸ ಬಾರದೆಂದು ಹಂಪ್ಸ್ ಗಳನ್ನು ಹಾಕಲಾಗಿದೆ. ಆದರೆ ಬಸ್ಸು ಹಂಪ್ಸ್ ಗಳನ್ನು ತಪ್ಪಿಸಲು ಹೋಗಿ ಈ ಘಟನೆ ನಡೆದಿದ್ದು ಕೂದಲೆಳೆ ಅಂತರದಲ್ಲಿ ಬೈಕ್ ಸವಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪದೇ ಪದೇ ಈ ಪ್ರದೇಶದಲ್ಲಿ ಅಪಘಾತಗಳು ನಡೆಯುತ್ತಿದ್ದು ಇದಕ್ಕೆ ಕಡಿವಾಣ ಹಾಕ ಬೇಕಿದೆ. ಒಟ್ಟಿನಲ್ಲಿ ವಾಹನಗಳನ್ನು ವೇಗ ನಿಯಂತ್ರಿಸುವ ಹಂಪ್ಸ್ ನಿಂದಲೇ ಇದೀಗ ಅಪಘಾತವಾಗಿರೋದು ವಿಪರ್ಯಾಸ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ….