ಶರಣಬಸವೇಶ್ವರ ಭಕ್ತಿ ದಾಸೋಹ ವಿಶ್ವದೆಲ್ಲೆಡೆ ಬೆಳಗುತ್ತಿದೆ
ಕಲಬುರಗಿ:ಅ.09:ಶರಣಬಸವೇಶ್ವರ ಭಕ್ತಿ ದಾಸೋಹ ವಿಶ್ವದ ಲೋಕದಲ್ಲಿ ಗಗನಕ್ಕೇತ್ತರದಲ್ಲಿ ಬೆಳಗುತ್ತಿದೆ ಎಂದು ಗುಲಬಗಾ೯ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಡಾ.ಎಸ್.ಎಂ.ಹಿರೇಮಠ ಅವರು ಹೇಳಿದರು.
ಶರಣಬಸವೇಶ್ವರ ದೇವಸ್ಥಾನದಲ್ಲಿ ಶ್ರಾವಣಮಾಸ ಸಾಂಸ್ಕøತಿಕ ಕಾಯ೯ಕ್ರಮಗಳ ಉಪನ್ಯಾಸ ಮಾಲಿಕೆಯಲ್ಲಿ ಶರಣಬಸವೇಶ್ವರ ಸಂಸ್ಥಾನದ ಭಕ್ತಿ ದಾಸೋಹ ಪರಂಪರೆ ಕುರಿತು ಶುಕ್ರವಾರ ಮಾತನಾಡಿದರು.
ಶರಣಬಸವರು ತ್ರಿವಿಧ ದಾಸೋಹ ಮಾಡಿದರು. ಗುರು ಶಿಷ್ಯರ ಅವಿನಾಭಾವ ಸಂಬಂಧ ಹಾಗೂ ಸಾಮರಸ್ಯಗಳನ್ನು ಸೂಚಿಸುತ್ತದೆ. ಶರಣಬಸವರು ನಲವತ್ತು ವಷ೯ಗಳವರೆಗೆ ಭಕ್ತಿ ದಾಸೋಹ ಮಾಡಿ ಈ ಭಾಗವನ್ನು ಕಲ್ಯಾಣವಾಗಿಸಿದ್ದಾರೆ. ಆದಿದೊಡ್ಡಪ್ಪ ಗೌಡರ ಮಗನನ್ನೇ ದಾಸೋಹ ಮಾಡಿದ ಶರಣಬಸವರು ಸೂರ್ಯ ಚಂದ್ರರು ಇರುವವರೆಗೆ ಭಕ್ತಿ ದಾಸೋಹ ಮಾಡುತ್ತಾರೆ. ಶರಣರ ಶಿವಭಾವ, ದಾಸೋಹ ಭಾವ, ಅಂದು ಶರಣಬಸವರು ಹಚ್ಚಿದ ಭಕ್ತಿ ದಾಸೋಹ ಇಂದು ಪೂಜ್ಯ ಡಾ,ಶರಣಬಸವಪ್ಪ ಅಪ್ಪ ಅವರು ವಿಶ್ವದಲ್ಲೇಡೆ ಕೊಂಡೋಯಿದಿದ್ದಾರೆ. ಶರಣಬಸವರ ನಂತರ ಬಂದ ಎಲ್ಲ ಶರಣಬಸವರು ಭಕ್ತಿ ದಾಸೋಹವನ್ನು ಪ್ರಮುಖವಾಗಿಸಿಕೊಂಡಿದ್ದರು. ಶರಣಬಸವರು ದಾಸೋಹ ಪರಂಪರೆಯನ್ನು ಹಚ್ಚಿದ್ದರೆ, ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಅವರು ದಾಸೋಹ ಜೊತೆಗೆ ಶಿಕ್ಷಣ ದಾಸೋಹ ಬೆಳೆಸುತ್ತಿದ್ದಾರೆ. ಲಿಂ.ದೊಡ್ಡಪ್ಪ ಅಪ್ಪ ಅವರು ಶಿಕ್ಷಣ ದಾಸೋಹದ ಗಿಡ ಬಿತ್ತಿದ್ದರೆ ಪೂಜ್ಯ ಡಾ.ಅಪ್ಪ ಅವರು ಅದನ್ನು ಹೆಮ್ಮರವಾಗಿ ಬೆಳೆಸಿದ್ದಾರೆ. ಶರಣಬಸವೇಶ್ವರ ವಿದ್ಯಾವಧ೯ಕ ಸಂಘ ಮತ್ತು ಶರಣಬಸವ ವಿಶ್ವವಿದ್ಯಾಲಯ ಜಗತ್ತಿನಾದ್ಯಾಂತ ಹೆಸರು ಮಾಡಿದೆ. ಅಂದು ಶರಣ ಹಚ್ಚಿದ ಭಕ್ತಿ ದಾಸೋಹದ ಬೆಳಕು ಈ ಭಾಗದ ಕತ್ತಲೆಯನ್ನು ಹೋಗಲಾಡಿಸುತ್ತಿದೆ. ಪೂಜ್ಯ ಡಾ.ಅಪ್ಪಾಜಿಯವರು ತಮ್ಮ ದಾಸೋಹ ಸೂತ್ರದಲ್ಲಿ ಭಕ್ತಿ ದಾಸೋಹ ಕುರಿತು ಹೇಳಿದ್ದಾರೆ. ಮಹಾದಾಸೋಹಿ ಶರಣಬಸವರ ಜಾತ್ರೆ ಸಂದಭ9ದಲ್ಲಿ ಲಕ್ಷ ಲಕ್ಷ ಭಕ್ತರು ಪಾಲ್ಗೊಳ್ಳುತ್ತಾರೆ. ಭಕ್ತರಿಗೆ ನಿರಂತರ ಅನ್ನದಾಸೋಹ ವ್ಯವಸ್ಥೆ ಮಾಡಲಾಗಿರುತ್ತದೆ ಅದರಂತೆ ಶ್ರಾವಣ ಮಾಸದಲ್ಲಿ ಭಕ್ತರ ದಾಸೋಹ ಸಂಖ್ಯೆ ಹೆಚ್ಚಿರುತ್ತದೆ. ಶರಣಬಸವರು ಸಕಲ ಜೀವಾತ್ಮರಲ್ಲಿ ಶಿವಾಂಶವನ್ನು ಕಂಡವರು ಅವರು ಭಕ್ತರಲ್ಲಿ ಶಿವನ ರೂಪ ಕಂಡವರಾಗಿದ್ದರು, ಪೂಜ್ಯ ಡಾ.ದಾಕ್ಷಾಯಣಿ ಅಪ್ಪ ಅವರು ಮತ್ತು ಚಿ,ದೊಡ್ಡಪ್ಪ ಅಪ್ಪ ಅವರು ಸಹ ಶರಣರ ಭಕ್ತಿ ದಾಸೋಹ ಪರಂಪರೆಯನ್ನು ಬೆಳೆಸುವ ಕಾಯ೯ದಲ್ಲಿ ನಿರಂತರವಾಗಿ ಸೇವೆಗೈಯುತ್ತಿದ್ದಾರೆ ಎಂದು ಹೇಳಿದರು.