ಆ.೧೨ ಕ್ಕೆ ಬೃಹತ್ ಪ್ರತಿಭಟನೆ
ಸಿಂಧನೂರು ಆ.೯-ಪ್ರಾಥಮಿಕ ಶಾಲಾ ಶಿಕ್ಷಕರಿಂದ ಆಗಸ್ಟ್ ೧೨ ಕ್ಕೆ ವಿವಿಧ ಬೇಡಿಕೆಗಳನ್ನು ಈಡೇರಿಕೆಗೆ ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಂದು ಸಿಂಧನೂರು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಮಾನಮ್ಮ ನಾಯಕ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿ ಗೋಷ್ಟಿ ನಡೆಸಿ ಮಾತನಾಡಿದರು.೨೦೧೭ ರವರೆಗೆ ನೇಮಕವಾದ ಶಿಕ್ಷಕರನ್ನು ೧ ರಿಂದ ೭ ಕ್ಕೆ ಸಿಮಿತಗೊಳಿಸಬೇಕು ,೧ ರಿಂದ ೫ ಕ್ಕೆ ಪರಿಗಣಿಸಬೇಕು ,ಜೆಷ್ಟತೆ ಆಧಾರದ ಮೇಲೆ ಬಡ್ತಿ ನೀಡಬೇಕು ,ಸಿ ಆ?ಯಂಡ್ ರೂಲ್ ಅವೈಜ್ಞಾನಿಕ ವಾಗಿದ್ದು ಅದನ್ನು ಕೈ ಬಿಡಬೇಕು ಎಂಬ ಹಲವಾರು ಬೇಡಿಕೆಗಳನ್ನು ಇಟ್ಟುಕೊಂಡು ಪ್ರತಿಭಟನೆ ಹಮ್ಮಿಕೊಂಡಿದ್ದೆವೆಂದರು.
ರಾಜ್ಯದಾದ್ಯಂತ ಪ್ರತಿ ಜಿಲ್ಲಾ ,ತಾಲೂಕಿನಿಂದ ಪ್ರತಿಭಟನೆ ಮಾಡುತ್ತಿದ್ದು ,ಸಿಂಧನೂರು ತಾಲೂಕಿನಿಂದ ೬೭೨ ಶಿಕ್ಷಕರು ಪ್ರತಿಭಟನೆ ಯಲ್ಲಿ ಪಾಲ್ಗೊಳ್ಳಲಿವೆ ಈ ಕುರಿತು ಬಿಇಒ ಹಾಗೂ ತಹಶಿಲ್ದಾರರಿಗೆ ಮನವಿ ಸಲ್ಲಿಸಿ ತಿಳಿಸಿದ್ದೆವೆ .ರಾಜ್ಯದಲ್ಲಿ ಸುಮಾರು ಒಂದು ಲಕ್ಷ ಶಿಕ್ಷಕರು ಸರ್ಕಾರವನ್ನು ಒತ್ತಾಯಿಸಲಿದ್ದೆವೆ ಎಂದು ಸಂಘಟನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದಲಿಂಗಪ್ಪ ಮುರಡಿ ತಿಳಿಸಿದರು.
ಸಂಘಟನೆ ಪ್ರಧಾನ ಕಾರ್ಯದರ್ಶಿ ಪ್ರಭಾಕರ್ ಕುಲಕರ್ಣಿ,ಅಂಬಮ್ಮ ,ಹುಸೇನ್ ಭಾಷಾ ,ತಿರ್ಥನಗೌಡ ,ಸುಧಾ ,ಅಶೋಕ ಗಾಜಿ ,ಜ್ಯೋತಿಲಕ್ಷ್ಮಿ ,ವಿರೇಶ ಮಲ್ಕಾಪುರ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.