ಮುಸ್ಲಿಂ ಪ.ಪಂ. ಅದ್ಯಕ್ಷ ಸ್ಥಾನ ನೀಡಲು ಒತ್ತಾಯ
ಸಿರವಾರ.ಅ.೯-
ಮಂಡಲ, ಗ್ರಾಮ ಪಂಚಾಯತಿಯಿಂದ, ಪ.ಪಂಚಾಯತಿ ಆದರೂ ಸಹ ಅನೇಕ ವರ್ಷಗಳಿಂದ ಮುಸ್ಲಿಂ ಸದಸ್ಯರಿಗೆ ಅದ್ಯಕ್ಷ ಸ್ಥಾನ ಲಭಿಸಿಲ, ಈ ಬಾರಿ ಸಾಮಾನ್ಯ ಮಿಸಲಾತಿಯಾಗಿದ್ದೂ, ಮುಸ್ಲಿಂ ಸದಸ್ಯರಿಗೆ ಅದ್ಯಕ್ಷ ಸ್ಥಾನ ನೀಡುವಂತೆ ಒತ್ತಾಯಿಸಿದ್ದಾರೆ. ಸಿರವಾರ ಪಟ್ಟಣ ಪಂಚಾಯತಿಯಲ್ಲಿ ೨೦ ಸದಸ್ಯರನ್ನು ಹೊಂದಿದೆ, ಅದರಲ್ಲಿ ಕಾಂಗ್ರೇಸ್ ೯, ಬಿಜೆಪಿ ೬, ಜೆಡಿಎಸ್ ೩, ಪಕ್ಷೇತರರು ೨ ಸ್ಥಾನ ಹೊಂದಿದೆ. ಕಾಂಗ್ರೇಸ್ ಪಕ್ಷಕ್ಕೆ ಸರಳ ಬಹುಮತ ಇದೇ, ಇದರಲ್ಲಿ ೪ ಜನ ಮುಸ್ಲಿಂರು ಸದಸ್ಯರಾಗಿದ್ದಾರೆ, ವಾರ್ಡ ನಂ ೦೩ ಹಸೇನ ಅಲಿಸಾಬ, ವಾರ್ಡ ನಂ ೦೬ ಹಾಜಿಚೌದ್ರಿ, ವಾರ್ಡ ೧೬ ಮೌಲಾಸಾಬ ವರ್ಚಸ್ ಕಾಂಗ್ರೇಸ್ ನ ಸದ್ಯಸರಾಗಿದ್ದಾರೆ. ಹಸೇನ ಅಲಿಸಾಬ ಅತ್ಯಂತ ಹಿರಿಯ ಸದಸ್ಯರಾಗಿದ್ದಾರೆ, ಮೌಲಾಸಾಬ ವರ್ಚಸ್ ಅವರು ಪ್ರಥಮ ಬಾರಿಗೆ ಸದಸ್ಯರಾಗಿದರೂ ಆಡಳಿತ ಹೇಗೆ ನಡೆಸಬಹುದು ಎಂಬ ಜ್ಞಾನವಿದೆ. ಹಾಜಿ ಚೌದ್ರಿ ಅವರು ಅದಿಕ ಮತಗಳ ಅಂತರದಿಂದ ಗೆದ್ದಿದ್ದಾರೆ, ಯುವಕರಾಗಿದ್ದೂ ಅನೇಕ, ಯೋಜನೆ ಕನಸ್ಸು ಹೊತ್ತುಕೊಂಡಿದ್ದಾರೆ. ಮುಸ್ಲಿಂರು ಅನೇಕ ವರ್ಷಗಳಿಂದ ಎಲ್ಲಾ ಚುನಾವಣೆ ಕಾಂಗ್ರೇಸ್ ಪಕ್ಷಕ್ಕಾಗಿ ದುಡಿದ್ದಿದ್ದಾರೆ, ೨೦೨೩ ರ ವಿಧಾನಸಭೆ, ೨೦೨೪ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ್ದಾರೆ. ಹಿಂದೆಯೂ – ಮುಂದೇಯೀ ಕಾಂಗ್ರೇಸ್ ಪಕ್ಷಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಸಚಿವರಾದ ಎನ್ ಎಸ್ ಬೋಸರಾಜು ಹಾಗೂ ಶಾಸಕರಾದ ಜಿ.ಹಂಪಯ್ಯನಾಯಕ ಅವರು ಇಂತವರನ್ನು ಗುರುತಿಸಿ ಪ.ಪಂ ಅದ್ಯಕ್ಷ ಸ್ಥಾನ ನೀಡದ್ದರೆ, ಪಕ್ಷಕ್ಕಾಗಿ ಇನೂ ದುಡಿಯುವ ಶಕ್ತಿ ನೀಡಿದಂತಾಗುತ್ತದೆ.