ಕನಿಷ್ಠ ಬೆಂಬಲ ಬೆಲೆ ಕಾಯ್ದೆ ಜಾರಿಗೆ ಆಗ್ರಹಿಸಿ ಭೂತ ದಹನ
ರಾಯಚೂರು.ಆ೯:ಕನಿಷ್ಠ ಬೆಂಬಲ ಬೆಲೆ ಜಾರಿಗೆ ರೈತ ವಿರೋಧಿ ಮಸೂದೆಗಳ ವಾಪಸ್ ಆಗ್ರಹಿಸಿ ಕಾರ್ಪೊರೇಟ್ ಕಂಪನಿಗಳ ದೇಶ ಬಿಟ್ಟು ತೊಲಗಿ ಎಂದು ಒತ್ತಾಯಿ ಸಂಯುಕ್ತ ಹೋರಾಟ ಕರ್ನಾಟಕ ಂ॒ದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಕಾರ್ಪೊರೇಟ್ ಕಂಪನಿಗಳ ಭೂತ ದಹನ ಪ್ರತಿಭಟನೆ ನಡೆಸಿತು.
ನಗರದ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಿದ ಸಂಯುಕ್ತ ಹೋರಾಟ ಕರ್ನಾಟಕ ಮುಖಂಡರು ಪದಾಧಿಕಾರಿಗಳು ಕೇಂದ್ರ ಸರ್ಕಾರ ವಿರುದ್ಧ ಘೋಷನೆಗಳನ್ನು ಕೂಗಿ ಕನಿಷ್ಠ ಬೆಂಬಲಬೆಲೆ ಜಾರಿಗೆ ಆಗ್ರಹಿಸಿದರು. ಇಲ್ಲಿಂದ ಜಿಲ್ಲಾಧಿಕಾರಿಗಳ ಕಛೇರಿ ತೆರಳಿ ಕಾರ್ಪೊರೇಟ್ ಸಂಸ್ಥೆಗಳ ಮತ್ತು ರಾಜ್ಯ,ಕೇಂದ್ರ ಸರ್ಕಾರಗಳ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ರೈತ ಕಾರ್ಮಿಕರ ವಿರೋಧಿ ನೀತಿಗಳನ್ನು ವಾಪಸ್ ಪಡೆಯಲು ಒತ್ತಾಯಿಸಲಾಯಿತು.
ಕಾರ್ಪೋರೇಟ್ ಕಂಪನಿಗಳೇ- ಭಾರತ ಬಿಟ್ಟು ತೊಲಗಿ,ಕೃಷಿಯ – ಕಾರ್ಪೋರೇಟಿಕರಣ ನಿಲ್ಲಿಸಿ,ರೈತ ವಿರೋಧಿ – ವಿದ್ಯುತ್ ಖಾಸಗಿಕರಣ ಮಸೂದೆ ಹಿಂಪಡೆಯಿರಿ,ಭಾರತದ ಕೃಷಿ ಉದ್ಪಾದನೆ- ಮಾರುಕಟ್ಟೆ-ಸಂಗ್ರಹಣೆ ಮತ್ತು ವಿತರಣೆ ರೈತರು ಮತ್ತು ಸರಕಾದ ಆಧೀನದಲ್ಲಿಯೇ ಇರುವಂತೆ ಜೋಪಾನ ಮಾಡಬೇಕು,ಕೃಷಿಭೂಮಿ ರೈತರಲ್ಲೇ ಉಳಿಯುವಂತೆ ಸಂರಕ್ಷಿಸಬೇಕು,ಕೈಗಾರಿಕೆ- ರಾಷ್ಟ್ರೀಯ ಹೆದ್ದಾರಿ- ರಾಜ್ಯ ಹೆದ್ದಾರಿ ಹೆಸರಲ್ಲಿ ಫಲವತ್ತಾದ ಕೃಷಿ ಭೂಮಿಯನ್ನು ಕಬಳಿಸುವುದನ್ನು ನಿಲ್ಲಿಸಿ,ಕೃಷಿ ಉತ್ಪಾದನೆಯನ್ನು ವಿಶ್ವ ವಾಣಿಜ್ಯ ಒಪ್ಪಂದದಿಂದ ಹೊರಗಿಡಿ,ಕೃಷಿ ಉತ್ಪನ್ನಗಳಿಗೆ ಡಾ/ ಸ್ವಾಮಿನಾಥನ್ ನೇತೃತ್ವದ ಸಮಿತಿಯ ಶಿಪಾರಸ್ಸಿನಂತೆ ಉತ್ಪಾದನಾ ವೆಚ್ಚ ೫೦% ಬೆಂಬಲ ಬೆಲೆಯನ್ನು ಕಾನೂನಾತ್ಮಕ ಗೊಳಿಸಿ,ಕೃಷಿ ಒಳಸುರಿಗಳ ಮೇಲಿನ ಉSಖಿ ಹಿಂಪಡೆಯಿರಿ,ಕೃಷಿಗೆ ಅಂತರಿಕ ಸಹಾಯಧನವನ್ನು ಹೆಚ್ಚು ನೀಡಲೂ ಸೂಕ್ತ ಕ್ರಮ ಕೈಗೊಳ್ಳಬೇಕು,ಕೃಷಿ ಉತ್ಪನ್ನಗಳ ಸಂರಕ್ಷಣೆಗೆ ಕೋಲ್ಡ್ ಸ್ಟೋರೇಜ್ ಗಳನ್ನು ಸಹಕಾರಿಸಂಘಗಳ ಮೂಲಕ ನಿರ್ಮಿಸಲು ಸಹಾಯಧನ ನೀಡಬೇಕು,ಅಂತರ ರಾಜ್ಯ ನೀರಾವರಿ ಸಮಸ್ಯೆಗಳನ್ನು ಕಾಲಮಿತಿಯೊಳಗಡೆ ಬಗೆಹರಿಸಬೇಕುಅರಣ್ಯ ಸಂಪತ್ತನ್ನು ರಕ್ಷಿಸಲು ಪಶ್ಚಿಮಘಟ್ಟದ ರಕ್ಷಣೆಗಾಗಿ ಮಾಧವ ಗಾಡ್ಗೀಳ್ ವರದಿಯನ್ನು ಅನುಷ್ಠಾನ ಗೊಳಿಸಬೇಕು,ಬರ ಹಾಗೂ ಅತೀವೃಷ್ಠಿಯಿಂದ ಕೃಷಿ ಕ್ಷೇತ್ರಕ್ಕಾದ ನಾಶ ನಷ್ಟಕ್ಜೆ ವೈಜ್ಞಾನಿಕ ಪರಿಹಾರಬನೀಡಬೇಕು,ಕೇರಳದ ವಯನಾಡು ಸೇರಿದಂತೆ ಈ ಬಾರಿಯ ಮೇಘಸ್ಪೋಟವನ್ನು ರಾಷ್ಟ್ರೀಯ ವಿಪತ್ತು ಅಂತ ಘೋಷಿಸಿ ಪುನರ್ವಸತಿ ಕಲ್ಪಿಸಬೇಕು,ಸರಕಾರಗಳ ಕೃಷಿ ವೀರೋಧಿ ನೀತಿಯಿಂದಾಗಿ ಸಾಲಗಾರರಾದ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು,ಫಸಲ್ ಭೀಮಾ ಯೋಜನೆಯಿಂದಾಗಿ ರೈತರಿಗಾದ ಮೋಸ ಹಾಗೂಖಾಸಗಿ ವಿಮಾ ಕಂಪನಿಗಳ ಹಗಲು ದರೋಡೆ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಚಾಮರಸ ಮಾಲಿ ಪಾಟೀಲ. ಕೆ.ಜಿ.ವಿರೇಶ. ಬಸಲಿಂಗಪ್ಪ.ಹೀರೆನೆಗನೂರು.ಅಸ್ಲಂ ಪಾಷ.ಮಾರೆಪ್ಪ.ಹರವಿ.ಡಿ.ಎಸ್.ಶರಣಬಸವ. ಪ್ರಭಾಕರ ಪಾಟೀಲ್. ಬೂದೆಯ್ಯ ಸ್ವಾಮಿ. ಶ್ರೀನಿವಾಸ್ ಕಲವಲದೂಡ್ಡಿ.ವಿ.ಮುದ್ದಕಪ್ಪ.ನಾಯಕ. ಆನಂದ .ಗೋವಿಂದ. ಅಂಜಿನೇಯ್ಯ ಕುರುಬದೂಡ್ಡಿ ಇತರರು ಇದ್ದರು.