ನಾಳೆ ಸಾರ್ವಜನಿಕ ಸಭೆ ಯಶಸ್ವಿಗೆ ಮನವಿ
ರಾಯಚೂರು, ಆ.೯ –
ನಾರದಗಡ್ಡಿ ಚನ್ನಬಸವೇಶ್ವರ ಸ್ವಾಮಿ ಸಂಸ್ಥಾನಮಠ ಬುರ್ದಿಪಾಡು ಆಸ್ತಿ-ಸ್ಥಿರಾಸ್ತಿ ಪೀಠಾಧಿಪತಿ ಕುರಿತು ಚರ್ಚಿಸಲು ಆಗಸ್ಟ್ ೧೦ ರಂದು ಬೆಳಿಗ್ಗೆ ೧೧ ಗಂಟೆಗೆ ಸಾರ್ವಜನಿಕ ಹಾಗೂ ಅಧಿಕಾರಿಗಳ ನಿಯೋಗದಲ್ಲಿ ಸಭೆಯನ್ನು ಹಮ್ಮಿಕೊಳ್ಳಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾಧ್ಯಕ್ಷ ನರಸಿಂಹನಾಯಕ ಮನವಿ ಮಾಡಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ೧೯೮೪ – ೮೫ ರಲ್ಲಿ ನಾರದಗಡ್ಡಿ ಸಂಸ್ಥಾನಮಠ ಪೀಠಾಧಿಪತಿ ಶ್ರೀ ಬಸವರಾಜ ಸ್ವಾಮಿಗಳನ್ನು ಉಚ್ಛ ನ್ಯಾಯಾಲಯ ವಜಾ ಮಾಡಿದ ದಿನದಿಂದ ಇಲ್ಲಿಯವರೆಗೂ ಯಾವ ಪೀಠಾಧಿಪತಿಗಳು ಇಲ್ಲ. ಕೊಡೇಕಲ್ ಶಿವಕುಮಾರ ಸ್ವಾಮಿ ಅವರಿಗೆ ಯಾರು ಅಧಿಕಾರ ಕೊಟ್ಟರು. ಅವರು ನಾರದಗಡ್ಡೆ ಆಸ್ತಿಯನ್ನು ಮಾರಾಟ ಮಾಡಬಹುದೆಂದು ಅಲ್ಲಲ್ಲಿ ನಮ್ಮ ಗಮನಕ್ಕೆ ಬಂದಿದೆ ಎಂದು ಸಂಶಯ ವ್ಯಕ್ತಪಡಿಸಿದರಲ್ಲದೆ, ಅವರು ನಮ್ಮ ಮಠಕ್ಕೆ ಯೋಗ್ಯರಲ್ಲ ಎಂದ ಅವರು ಉರುವಕೊಂಡದವರಿಗೆ ಸಂಪ್ರದಾಯದ ಪ್ರಕಾರ ಅಧಿಕಾರ ಇರುತ್ತದೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆ.೧೦ ರಂದು ನಾರದಗಡ್ಡೆಯಲ್ಲಿ ಇರಬೇಕೆಂದು ಮನವಿ ಮಾಡಿದರು.