ಆ.೧೧ ಚಾಗಿ ಹಿರೇಮಠ ಚನ್ನಬಸವ ಶಾಸ್ತ್ರಿ ದರ್ಶನ ಕೃತಿ ಲೋಕಾರ್ಪಣೆ
ರಾಯಚೂರು,ಆ.೯- ಜಿಲ್ಲಾ, ತಾಲ್ಲೂಕು ಕನ್ನಡ ಸಾಹಿತ್ಯ ವತಿಯಿಂದ ಹಿರಿಯ ಸಾಹಿತಿ ಲಕ್ಷ್ಮೀದೇವಿ ಶಾಸ್ತ್ರಿರವರ ಚಾಗಿ ಹಿರೇಮಠದ ಚನ್ನಬಸವ ಶಾಸ್ತ್ರಿಗಳ ದರ್ಶನ ಕೃತಿ ಲೋಕಾರ್ಪಣೆ ಕಾರ್ಯಕ್ರಮವನ್ನು ಆಗಸ್ಟ್ ೧೧ರಂದು ಹಮ್ಮಿಕೊಳ್ಳಲಾಗಿದೆ ಎಂದು ಬೆಂಗಳೂರಿನ ಇನ್ಪೋಸಿಸ್ ಅಭಿಯಂತರ ವಿಶ್ವನಾಥ ಶಾಸ್ತ್ರಿ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಕಾರ್ಯಕ್ರಮವು ನಗರದ ಕನ್ನಡ ಭವನದಲ್ಲಿ ಬೆಳಿಗ್ಗೆ ೧೧ – ೩೦ಕ್ಕೆ ಜರುಗಲಿದೆ. ಕಾರ್ಯಕ್ರಮದ ದಿವ್ಯ ಸಾನಿಧ್ಯ ಹಾಗೂ ಪುಸ್ತಕ ಲೋಕಾರ್ಪಣೆಯನ್ನು ಕಿಲ್ಲೇ ಬೃಹ್ಮಮಠ ಸ್ವಾಮೀಜಿ ಶಾಂತ ಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಲಿದ್ದಾರೆ. ಕೃತಿ ಪರಿಚಯವನ್ನು ಹಿರಿಯ ಸಾಹಿತಿ ಅಯ್ಯಪ್ಪ ಹುಡಾ ಅವರು ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಲಬುರ್ಗಿಯ ಗುರಪ್ಪಾ ನಾಗಪ್ಪ ಪಾಟೀಲ್ ಹಿರೇನಂದೂರು ಆಗಮಿಸಲಿದ್ದಾರೆ. ಅಧ್ಯಕ್ಷತೆಯನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ವೆಂಕಟೇಶ್ ಬೇವಿನಬೆಂಚಿ ಅವರು ವಹಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪ್ರತಿಭಾ ಪಾಟೀಲ್, ರಾವುತರಾವ್ ಬರೂರು, ಲಕ್ಷ್ಮೀದೇವಿ ಶಾಸ್ತ್ರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.