ಸೆಪ್ಟೆಂಬರ್ ೩ಕ್ಕೆ ಮಾದಿಗ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
(ಸಂಜೆವಾಣಿ ಪ್ರತಿನಿಧಿಯಿಂದ)
ಮಾನವಿ,ಆ. ೯- ಸಮುದಾಯದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ನಮ್ಮ ಸಮುದಾಯದ ಯುವಕರು, ಮಹಿಳೆಯರು ಹಾಗೂ ರಾಜಕಾರಣಿಗಳು ಪಕ್ಷಾತೀತವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅದ್ದೂರಿಯಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಯಲ್ಲಪ್ಪ ಹಿರೇ ಬಾದರದಿನ್ನಿ ಹೇಳಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಠಿಯನ್ನು ನಡೆಸಿ ಮಾತನಾಡಿದ ಮಾದಿಗ ಜಾಗೃತಿ ಯುವ ವೇದಿಕೆಯ ಮುಖಂಡ ಯಲ್ಲಪ್ಪ ಹಿರೇ ಬಾದರದಿನ್ನಿ ಅವರು ಮಾನವಿ ಹಾಗೂ ಸಿರವಾರ ತಾಲೂಕಗಳಲ್ಲಿ ೨೦೨೩-೨೪ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಮತ್ತು ದ್ವೀತಿಯ ಪಿ.ಯು.ಸಿ. ಯಲ್ಲಿ ೮೦% ಕ್ಕೂ ಅಧಿಕ ಅಂಕ ಪಡೆದಿರುವ ಮಾದಿದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವದು ಹಾಗೂ ನೂತನವಾಗಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ನಮ್ಮ ಸಮುದಾಯದ ಎ.ವಸಂತ ಕುಮಾರ ರವರಿಗೆ ಸನ್ಮಾನ ಸಮಾರಂಭವನ್ನು ಸೆಪ್ಟೆಂಬರ್ ೩ ರಂದು ಪಟ್ಟಣದ ಖಾದ್ರಿ ಫಂಕ್ಷನ್ ಹಾಲ್‌ನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಮಾನವಿ ಹಾಗೂ ಸಿರವಾರ ತಾಲೂಕಿನಲ್ಲಿ ಮಾದಿಗ ಸಮುದಾಯದ ಎಸ್.ಎಸ್.ಎಲ್.ಸಿ ಮತ್ತು ದ್ವೀತಿಯ ಪಿ.ಯು.ಸಿ. ಯಲ್ಲಿ ೮೦% ಕ್ಕೂ ಅಧಿಕ ಅಂಕ ಪಡೆದಿರುವ ವಿದ್ಯಾರ್ಥಿಗಳು ಕೆಳಕಂಡ ದಾಖಲಾತಿಗಳೊಂದಿಗೆ ಆಗಸ್ಟ್ ೨೦ ರ ಒಳಗಾಗಿ ತಮ್ಮ ಹೆಸರುಗಳನ್ನು ನೊಂದಾಯಿಸಿ ಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ರವೀಂದ್ರ ಜಾನೇಕಲ್, ಪಿ.ರವಿಕುಮಾರ ವಕೀಲರು,ಬಸವರಾಜ ನಕ್ಕುಂದಿ, ಪ್ರಭುರಾಜ ಕೊಡ್ಲಿ,
ಹನುಮಂತ ಕೋಟೆ,ಗಣೇಶ ಸಂಗಾಪೂರು,ವಿನಯಕುಮಾರ ಹೊಸೂರು,ಸಂಪತ ಕುಮಾರ ಪನ್ನೂರು, ಅಶೋಕ ತಡಕಲ್,ಜೆ.ಹೆಚ್.ದೇವರಾಜ್,ಜಯಪ್ರಕಾಶ,ಯಮುನಪ್ಪ ಪನ್ನೂರ್, ಸುದರ್ಶನ್, ಪರಶುರಾಮ್ ಬಾಗಲವಾಡ ಉಪಸ್ಥಿತರಿದ್ದರು.