ನೂಲಿ ಚಂದಯ್ಯ ಅಂಗವಾಗಿ ಕೊರವ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ಲಿಂಗಸುಗೂರು:ಆ.೦೯-
೨೦೨೩-೨೪ ನೇ ಸಾಲಿನ ನೂಲಿ ಚಂದಯ್ಯ ನವರ ಜಯಂತಿ ಅಂಗವಾಗಿ ಕೊರವ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜದ ಮುಖಂಡ ರಾಜೇಶ ಮಾಣಿಕ್ ತಿಳಿಸಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ನಂತರ ಮಾತನಾಡಿದ ಅವರು, ಶ್ರೀ ಶರಣ ನೂಲಿ ಚಂದಯ್ಯ ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ಇದೇ ತಿಂಗಳಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಎಸ್ ಎಸ್ ಎಲ್ ಸಿ ೮೫ ಕ್ಕಿಂತ ಹೆಚ್ಚು ಗಳಿಸಿದ ವಿದ್ಯಾರ್ಥಿಗಳು ಹಾಗೂ ದ್ವಿತೀಯ ಪಿಯುಸಿ ೯೦ ಕಿಂತ ಹೆಚ್ಚು ಅಂಕಗಳಿಸಿದ ವಿದ್ಯಾಥಿಗಳು ತಮ್ಮ ಅಂಕಪಟ್ಟಿ ಸ್ವ ವಿವರಗಳೊಂದಿಗೆ ದಿನಾಂಕ ೨೦-೮-೨೦೨೪ ರ ಒಳಗಾಗಿ ನೂಲಿ ಚಂದಯ್ಯ ಶಿಕ್ಷಣ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ರೇಣುಕಾ ನಗರ ಜೈಲ್ ರಸ್ತೆ ಹೊಂದಿಕೊಂಡಿರುವ ಕಚೇರಿಯಲ್ಲಿ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಈ ಒಂದು ದೂರವಾಣಿಯನ್ನು ಸಂಪರ್ಕಿಸಬಹುದು ೯೪೮೦೦ ೪೩೭೩೬.
ಈ ಸಂದರ್ಭದಲ್ಲಿ ಸಂಗಣ್ಣ, ಕಾಶಿನಾಥ, ಸಚಿನ್ ಕೊಪ್ಪರಕರ್ ಸೇರಿ ಇತರರು ಸೇರಿದಂತೆ ಇದ್ದರು.