ಹೂಳು ತೆರವು ಕಾರ್ಯ ಸ್ಥಳಕ್ಕೆ ಶಾಸಕಿ ಕರೆಮ್ಮ ನಾಯಕ ಭೇಟಿ
ದೇವದುರ್ಗ:ಆ.೦೯- ಎನ್ ಆರ್ ಬಿ ಸಿ ಅರಕೇರಾ ಬ್ರಾಂಚ್ -೯ಎ ಕಾಲುವೆಯಲ್ಲಿ ಬಹುದಿನಗಳಿಂದ ಹೂಳು ತುಂಬಿ ರೈತರ ಜಮೀನುಗಳಿಗೆ ನೀರು ಹರಿಸಲು ತುಂಬಾ ತೊಂದರೆಯಾಗಿದ್ದು, ಸುಮಾರು ೩.೫ ಕೀ. ಮೀ. ವರೆಗೆ ಕಾಲುವೆಯಲ್ಲಿ ಮಣ್ಣು ಕುಸಿದು ಬಿದ್ದಿದ್ದರ ಪರಿಣಾಮವಾಗಿ ಕಾಲುವೆಯ ಸಮರ್ಪಕ ನಿರ್ವಹಣೆಯ ಕೊರತೆಯಿಂದ ಕಾಲುವೆಯಲ್ಲಿ ಹೊಂಡು ಸೇರಿಕೊಂಡು ನಾಲೆಗೆ ನೀರು ಹರಿಸಿದರು ಕೂಡಾ ನೀರು ಮುಂದೆ ಹೋಗದ ಪರಿಸ್ಥಿತಿ ಇತ್ತು ಕಾಲುವೆ ವ್ಯಾಪ್ತಿಗೆ ಬರುವ ಅನ್ವರ್, ಅಡಕಲಗುಡ್ಡ, ಆಲ್ಕೋಡ್, ಭೂಮನಗುಂಡ, ಹಾಗೂ ಇತರೇ ಗ್ರಾಮಗಳ ರೈತರು ಕ್ಷೇತ್ರದ ಶಾಸಕರಿಗೆ ಮನವಿ ಪತ್ರ ಸಲ್ಲಿಸಿದರು,ತಕ್ಷಣ ಸ್ಪಂದಿಸಿದ ಶಾಸಕಿ : ಅನ್ವರ್, ಅಡಕಲಗುಡ್ಡ, ಆಲ್ಕೋಡ್, ಭೂಮನಗುಂಡ, ಹಾಗೂ ಇತರೇ ಗ್ರಾಮಗಳ ರೈತರು ಶಾಸಕಿ ಕರೆಮ್ಮ ನಾಯಕರಿಗೆ ಮನವಿ ಸಲ್ಲಿಸಿದ ಬಳಿಕ, ಸಂಬಂಧಪಟ್ಟ ನೀರಾವರಿ ಇಲಾಖೆ ಕೆ.ಬಿ. ಜೆ.ಎನ್. ಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಕ್ಷೇತ್ರದ ಶಾಸಕಿ ಕರೆಮ್ಮನಾಯಕ್ ಪತ್ರ ಬರೆದು ಗ್ರಾಮಗಳ ರೈತರ ಸಮಸ್ಯೆಯನ್ನು ತಿಳಿಸಿ. ಸುಮಾರು ೪/೫ ವರ್ಷಗಳಿಂದ ಹೂಳು ತೆಗೆಯದೆ ಸುಮಾರು ೧೭ ಮೀಟರ್ ಒಳಂತರ ಇದ್ದು, ಇದನ್ನು ತಕ್ಷಣವೇ ಹೂಳು ಎತ್ತುವ ಕಾಮಗಾರಿ ಕೈಗೊಂಡು ದೇವದುರ್ಗ ತಾಲೂಕು, ಸಿರವಾರ ಮತ್ತು ಮಾನ್ವಿ ತಾಲೂಕಿನ ಕೆಳಮಟ್ಟದ ರೈತರಿಗೆ ನೀರು ಪೋರೈಸಲು ಶಾಸಕರು ಹೆಚ್ಚಿನ ಕಾಳಜಿಯಿಂದ ಇಲಾಖೆಯ ಮೇಲಾಧಿಕಾರಿಗಳಿಗೆ ಮನವಿ ಮಾಡಿಕೊಂಡಾಗ ತಕ್ಷಣ ಸ್ಪಂದಿಸಿ ನೀರಾವರಿ ಇಲಾಖೆಯ ಅಧಿಕಾರಿಗಳಿಂದ, ಹೂಳು ತೆಗೆಯುವ ಕಾರ್ಯ ಭರದಿಂದ ಸಾಗಿದೆ.
ಶಾಸಕಿ ಭೇಟಿ :-ಕರೆಮ್ಮ ಜಿ ನಾಯಕ ಅರಕೇರಾ ೯ಎ ಬ್ರಾಂಚ್ ಕಾಲುವೆಗೆ ಭೇಟಿ ನೀಡಿ, ಭರದಿಂದ ಕಾಮಗಾರಿ ಕೈಗೊಂಡು ಯಾವುದೇ ರೈತರಿಗೆ ನೀರಿನ ಅಭಾವ ಆಗದಂತೆ ಸರಿಯಾಗಿ ಕೆಲಸ ಮಾಡಬೇಕೆಂದು ಇಲಾಖೆಯ ಅಧಿಕಾರಿಗೆ ಸೂಚನೆ ನೀಡಿದರು.

ಸುಮಾರು ದಿನಗಳಿಂದ ಈ ಭಾಗದ ಕಾಲುವೆಯಲ್ಲಿ ಹೂಳು ತುಂಬಿ ತುಂಬಾ ತೊಂದರೆ ಯಾಗಿ ನಮ್ಮ ಜಮೀನುಗಳಿಗೆ ಸರಿಯಾಗಿ ನೀರು ತಲುಪುತ್ತಿರಲಿಲ್ಲ ಶಾಸಕಿ ನಮ್ಮ ಮನವಿಗೆ ಹೆಚ್ಚಿನ ಆಸಕ್ತಿವಹಿಸಿ ಸಂಪೂರ್ಣ ಕಾಲುವೆಯಲ್ಲಿ ನೀರು ಹರಿಯುವಂತೆ ಮಾಡಿದ್ದಾರೆ.
ಕುಪ್ಪಯ್ಯ ಭೋವಿ, ಆಲ್ಕೋಡ್ ಗ್ರಾಮದ ರೈತ.
ಬಹುದಿನಗಳಿಂದ ಅರಕೆರಾ ೯ ಎ ಕಾಲುವೆ ಹೂಳು ತುಂಬಿ ರೈತರಿಗೆ ನೀರಿನ ಸೌಲಭ್ಯವಿಲ್ಲದೆ ತೊಂದರೆಯಲ್ಲಿದ ನನ್ನ ಕ್ಷೇತ್ರದರೈತರ ಸಮಸ್ಯೆಯನ್ನು ನೀರಾವರಿ ಇಲಾಖೆಯ ಮೇಲಾಧಿಕಾರಿಗಳ ಗಮನಕ್ಕೆ ತಂದಾಗ ತಕ್ಷಣ ಸ್ಪಂದಿಸಿ ಅಧಿಕಾರಿಗಳು ಕೆಲಸ ಬರದಿಂದ ಕೈಗೊಂಡಿದ್ದು ಬೇಗ ಪೂರ್ಣಗೊಳಿಸಿ ರೈತರಿಗೆ ಸಂಪೂರ್ಣ ನೀರಾವರಿ ಸೌಲಭ್ಯ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಕರೆಮ್ಮ ಜಿ ನಾಯಕ.