ವಕ್ಫ ಮಂಡಳಿ ದುರ್ಬಲಕ್ಕೆ ಕೇಂದ್ರದ ಯತ್ನ ಖಂಡನೀಯ
ರಾಯಚೂರು,ಆ೯:ಕೇಂದ್ರ ಸರಕಾರ ವಕ್ಫ್ ಆಕ್ಟ್ ೧೯೯೫ ಹಾಗೂ ವಕ್ಫ ಆಕ್ಟ್ ೨೦೧೩ ತಿದ್ದುಪಡಿಗಳನ್ನು ಅಮೂಲಾಗ್ರವಾಗಿ ಬದಲಾವಣೆ ಮಾಡಲು ಮುಂದಾಗಿ ವಕ್ಫ ಅಮೆಂಡಮೆಂಟ್ ಆಕ್ಟ್ ೨೦೨೪ ಯನ್ನು ಲೋಕಸಭೆಯಲ್ಲಿ ಮಂಡಿಸಿರುವದು ವಕ್ಫ್ ಮಂಡಳಿಯನ್ನು ದುರ್ಬಲಗೊಳಿಸಲು ನಡೆಸಿರುವ ಯತ್ನ ಖಂಡನೀಯ ಎಂದು ಕೆಪಿಸಿಸಿ ಮಾಧ್ಯಮವಿಭಾಗದ ರಾಜ್ಯ ವಕ್ತಾರ ಡಾ.ರಜಾಕ್‌ಉಸ್ತಾದ್ ತಿಳಿಸಿದ್ದಾರೆ.
ಬಿಜೆಪಿ ಪಕ್ಷದ ಕೇಂದ್ರ ಸರಕಾರ ಮುಸ್ಲಿಂರ ಬಗ್ಗೆ ಇರುವ ದ್ವೇಷದ ಮುಂದುವರೆದ ಭಾಗದಂತಿದೆ. ವಕ್ಫ್ ಮಂಡಳಿ ಕೇಂದ್ರದ ಕಾನೂನುಗಳಡಿ ಕಾರ್ಯನಿರ್ವಹಿಸುತ್ತದೆ, ಇದರಲ್ಲಿ ವಕ್ಫ್ ಆಸ್ತಿಗಳ ರಕ್ಷಣೆ, ಧರ್ಮದ ಆಚರಣೆಗಳ ನಿರ್ವಹಣೆ, ವಕ್ಫ್ ಆಸ್ತಿಗಳ ನಿರ್ವಹಣೆಗೆ ಸಮಿತಿಗಳನ್ನು ರಚಿಸುವದು ಹೊರತುಪಡಿಸಿ ಯಾವುದೇ ದುರುದ್ದೇಶವಿಲ್ಲ, ಈಗಿರುವ ವಕ್ಫ್ ಕಾಯ್ದೆಯಂತೆ ವಕ್ಫ್ ಆಸ್ತಿಗಳ ರಕ್ಷಣೆಗೆ ಪ್ರಯತ್ನಿಸಲಾಗುತ್ತಿದೆ, ಇಂತಹ ಸಂದರ್ಭದಲ್ಲಿ ವಕ್ಫ ಮಂಡಳಿಗೆ ಇರುವ ಅಧಿಕಾರವನ್ನು ಕಿತ್ತುಕೊಂಡು ಸರಕಾರಕ್ಕೆ ನೀಡುವದು ದುರುದ್ದೇಶದಿಂದ ಕೂಡಿದೆ. ಲೋಕಸಭೆಯಲ್ಲಿ ಅಲ್ಪಂಖ್ಯಾತರ ಕಲ್ಯಾಣ ಇಲಾಖೆಯ ಸಚಿವ ಕಿರಣ ರಿಜುಜು ಅವರು ವಕ್ಫ ಕಾಯ್ದೆ ಮತ್ತು ಮಂಡಳಿಗಳ ಕುರಿತು ತಪ್ಪು ಮಾಹಿತಿಗಳನ್ನು ಹಂಚಿಕೊಂಡಿರುವದು ದುರಾದೃಷ್ಟಕರ ಎಂದು ರಜಾಕ್ ತಿಳಿಸಿದ್ದಾರೆ.
ವಕ್ಫ ಅಮೆಂಡಮೆಂಟ್ ಆಕ್ಟ್ ೨೦೨೪ರಲ್ಲಿ ಇಬ್ಬರು ಮುಸ್ಲಿಂಯೇತರರನ್ನು ಸದಸ್ಯರನ್ನಾಗಿ ನೇಮಿಸಲು ಮುಂದಾಗಿರುವದು ಮುಸ್ಲಿಂರ ಧಾರ್ಮಿಕ ಭಾವನೆಗಳಿಗೆ ದಕ್ಕೆ ತರುವ ಪ್ರಯತ್ನ
ಸಚಿವ ಕಿರಣ ರಿಜುಜು ಅವರು ವಕ್ಫ ಟ್ರಿಬ್ಯುನಲ್ ಆದೇಶವೇ ಅಂತಿಮವಾಗಿದೆ, ಇದನ್ನು ಹೈಕೋರ್ಟ ಮತ್ತು ಸುಪ್ರೀಂ ಕೋರ್ಟನಲ್ಲಿ ಪ್ರಶ್ನೆ ಮಾಡಲು ಬರುವದಿಲ್ಲ ಎಂದು ಹೇಳಿರುವದು ಸುಳ್ಳು, ಈಗಲೂ ಲಕ್ಷಾಂತರ ಪ್ರಕರಣಗಳು ದೇಶದವ ವಿವಿಧ ಉಚ್ಛನ್ಯಾಯಾಲಯಗಳಲ್ಲಿವೆ, ಅಲ್ಲದೇ ವಕ್ಫ್ ಟ್ರಿಬ್ಯುನಲ್‌ನಲ್ಲಿ ಸಾವಿರಾರು ಪ್ರಕರಣಗಳು ಬಾಕಿ ಇದ್ದು, ಜನರಿಗೆ ನ್ಯಾಯ ಸಿಗುತ್ತಿಲ್ಲವೆಂದು, ಅದಕ್ಕಾಗಿ ಜಿಲ್ಲಾಧಿಕಾರಗಳಿಗೆ ಅಧಿಕಾರ ನೀಡಲು ಈ ಕಾಯ್ದೆಯಲ್ಲಿ ಅವಕಾಶ ನೀಡಿರುವದು ಸಚಿವರಿಗೆ ದೇಶದ ನ್ಯಾಯಾಂಗ ವ್ಯವಸ್ಥೆಯ ವಾಸ್ತಾವಂಶ ಗೊತ್ತಿಲ್ಲದಂತೆ ಕಾಣುತ್ತಿದೆ, ಜಿಲ್ಲಾಧಿಕಾರಿಗಳು ತಮ್ಮಲ್ಲಿ ದಶಕಗಳಿಂದ ಬಾಕಿ ಇರುವ ಸಿವಿಲ್ ಪ್ರಕರಣಗಳಿಗೆ ಇತ್ಯರ್ಥ ಮಾಡಲು ಸಾದ್ಯವಾಗಿಲ್ಲ ಎಂದು ತಿಳಿಸಿದ್ದಾರೆ.
ನ್ಯಾ.ರಾಜೇಂದ್ರ ಸಾಚಾರ್ ನೀಡಿರುವ ವರದಿಯ ಕೆಲವು ಅಂಶಗಳನ್ನು ಮಾತ್ರ ಉಲ್ಲೇಖ ಮಾಡಿ, ಇನ್ನುಳಿದ ಅಂಶಗಳನ್ನು ಮರೆಮಾಚುವದು ಯಾವ ನ್ಯಾಯ, ಸಾಚಾರ ವರದಿಯಲ್ಲಿ ಮುಸ್ಲಿಂರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ನೀಡಬೇಕೆಂದಿದೆ, ಅದರ ಬಗ್ಗೆ ಯಾಕೆ ಮೌನ? ಅದೇ ವರದಿಯಲ್ಲಿ ಮದರಸಾ ಆಧುನೀಕರಣದ ಬಗ್ಗೆ ಇದೆ, ವಿದ್ಯಾರ್ಥಿ ವೇತನ ನೀಡುವ ಬಗ್ಗೆ ಇದೆ, ಫೆಲೋಶಿಪ ನೀಡುವ ಕುರಿತು ಇದೆ, ಇಂತಹ ೭೬ ಶಿಫಾರಸ್ಸುಗಳನ್ನು ನ್ಯಾ.ಸಾಚಾರ ಅವರು ತಮ್ಮ ವರದಿಯಲ್ಲಿ ಶಿಫಾರಸ್ಸು ಮಾಡಿದ್ದಾರೆ, ಅವುಗಳನ್ನು ಅನುಷ್ಠಾನಗೊಳಿಸಲು ಕೇಂದ್ರ ಸರಕಾರ ಮುಂದಾಗಲಿ, ಅದು ಬಿಟ್ಟು ವಕ್ಫ ಮಂಡಳಿ ದುರ್ಬಲಗೊಳಿಸುವದು ಕೈಬಿಡಬೇಕೆಂದು ಈ ಮೂಲಕ ಆಗ್ರಹ ಮಾಡುತ್ತೇವೆ. ವಕ್ಫ ಮಂಡಳಿಯಲ್ಲಿ ಈಗಾಗಲೇ ಸುನ್ನಿ, ಶಿಯಾ ಸಮುದಾಯದ ಸದಸ್ಯರು ಇದ್ದು, ಈಗ ಬೋಹ್ರಾ ಮತ್ತು ಅಗಾಖಾನ ಸಮುದಾಯದವರನ್ನೂ ಸದಸ್ಯರನ್ನಾಗಿ ಮಾಡುವದಾಗಿ ಹೇಳಿರುವದು, ಹಿಂದಿನ ಕಾಯ್ದೆಯಲ್ಲಿ ನಿರ್ಭಂದವಿರಲಿಲ್ಲ ಎನ್ನುವ ಕನಿಷ್ಠ ತಿಳುವಳಿಕೆ ಸರಕಾರಕ್ಕೆ ಇಲ್ಲದಿರುವದು ಆಶ್ಚರ್ಯಕರವಾಗಿದೆ.
ಇಂತಹ ದ್ವೇಷದ ರಾಜಕಾರಣ ಮಾಡುವದು ಬಿಟ್ಟು, ದೇಶದ ಒಳತಿಗೆ ಕೆಲಸ ಮಾಡುವದು ಕೇಂದ್ರ ಸರಕಾರ ಕಲಿಯಲಿ. ಕಳೆದ ಚುನಾವಣೆಯಲ್ಲಿ ಬಿಜೆಪಿಗೆ ಇಂತಹ ದ್ವೇಷದ ರಾಜಕಾರಣದ ವಿರುದ್ದವೇ ದೇಶದ ಜನತೆ ಪಾಠ ಕಲಿಸಿದ್ದಾರೆ ಎಂದು ಡಾ.ರಜಾಕ್‌ಉಸ್ತಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.