ನಗರದಲ್ಲಿ ಸಡಗರದ ನಾಗರ ಪಂಚಮಿ ಆಚರಣೆ
ರಾಯಚೂರು.ಆ೯: ಮಡ್ಡಿಪೇಟೆಯ ಪಂಚಮುಖಿ ಹನುಮಾನ ದೇವಸ್ಥಾನ ಮತ್ತು ಮಕ್ತಲಪೇಟೆಯ ಜಗನ್ಮಾತೆ ಪಾಲಮ್ಮ ತಾಯಿ ದೇವಸ್ಥಾನದಲ್ಲಿ ಮಹಿಳೆಯರು ಮತ್ತು ಯುವತಿಯರು ಹಾಗೂ ಪುರುಷರು ನಾಗದೇವತೆಗೆ ಪೂಜೆ ಸಲ್ಲುಸಿ ನಮ್ಮ ನಾಡು, ದೇಶ ಹಾಗೂ ನಮ್ಮ ಕುಟುಂಬದ ಸರ್ವರ ಪರವಾಗಿ ನಿನಗೆ ಹಾಲೆರೆಯುತ್ತಿದ್ದೇನೆ ನಾಗದೇವತೆ ಹಾಲು, ನೈವೇಧ್ಯವನ್ನು ಸಂಪನ್ನಳಾಗಿ ಸ್ವೀಕರಿಸಿ ನಮ್ಮನ್ನೆ ಸುಖ ಶಾಂತಿ ನೆಮ್ಮದಿ ಆರೋಗ್ಯ ಐಶ್ವರ್ಯಗಳನ್ನು ಕೊಟ್ಟು ಕಾಪಾಡು ಎಂದು ಬೇಡಿಕೊಳ್ಳುತ್ತ ಪೂಜೆ ಸಲ್ಲಿಸಿ ಮಂಗಳಾರತಿ ಬೆಳಗಿದರು.
ನಂತರ ಬಾಲಕಿ ವಿದ್ಯಾರವರು ಮಾತನಾಡಿ ವರ್ಷಕ್ಕೊಮ್ಮೆ ಬರುವಂಥ ಶುಭ ಶ್ರಾವಣ ಮಾಸದಲ್ಲಿ ಬರುವಂತ ನಾಗರ ಪಂಚಮಿ ಎಂಬುದು ಪುರಾತನ ಕಾಲದಿಂದಲೂ ಬಂದಂಥ ದೇಶದ ನಾಡಿನ ವಿಶೇಷವಾಗಿ ಮಹಿಳೆಯರ ಹಬ್ಬವಾಗಿದೆ. ಈ ಹಬ್ಬದಲ್ಲಿ ಮನೆಯನ್ನು ಸ್ವಚ್ಛವಾಗಿರಿಸಿ ಶುದ್ಧ ಮಡಿಯಿಂದ ಸಿಹಿ ತಂಡಿಗಳನ್ನು ಮಾಡಿ ದೇವಸ್ಥಾನಕ್ಕೆ ಕುಟುಂಬದ ಸಂಭ್ರಮದೊಂದಿಗೆ ಆಗಮಿಸಿ ದೇವರಿಗೆ ನೂಲು ಎಳೆಯನ್ನು ಹಾಕಿ ಪೂಜಿಸಿ ನಂತರ ನನ್ನ ಪಾಲು, ನನ್ನ ಮಾತಾ ಪಿತೃಗಳ ಪಾಲು, ನಮ್ಮ ಬಂಧು ಬಳಗದವರ ಪಾಲಾಗಿ ನಿನಗೆ ಹಾಲನ್ನು ಹೆರೆಯುತ್ತಿದ್ದೇನೆ ನಮಗೆ ಶುಭಾಶೀರ್ವಾದ ಮಾಡು ಎಂದು ಬೇಡಿಕೊಂದ್ದಾಗಿ ತಿಳಿಸಿದರು.
ಇಂದು ನಮ್ಮ ನಾಡಿನ ಪ್ರಸಿದ್ಧ ಜಾತ್ರೆ ಕಲಮಾಲಿ ಜಾತ್ರೆಯೂ ನಡೆಯಲಿದೆ ನಾಡಿನ ಸರ್ವ ಜನತೆಯೂ ಸಹಿತ ಕಲ್ಮಾಲಿ ಕರಿಯಪ್ಪ ತಾತನವರ ಮಹಾ ರಥೋತ್ಸವದಲ್ಲಿ ಭಾಗವಹಿಸುತ್ತಿರುವುದಾಗಿ ತಿಳಿಸಿದರು.