ಸಸಿಗಳನ್ನು ಮರವಾಗಿಸಿ, ಬಹುಮಾನ ಪಡೆಯಿರಿ
ಸಿರವಾರ.ಅ೦೯-
ಹಿರಿಯರು ನಮಗೆ ಹೇಗೆ ಸ್ವಚ್ಚ ಪರಿಸರ ನೀಡಿದ್ದಾರೋ ಅದೇ ರೀತಿ ಮುಂದಿನ ಪೀಳಿಗೆಗೆ ಸ್ವಚ್ಚ ಪರಿಸರ ನೀಡಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ, ಮಕ್ಕಳಿಗೆ ಸಸಿಗಳನ್ನು ನೀಡಲಾಗಿದ್ದೂ, ಮರಗಳನ್ನಾಗಿಸಿದವರಿಗೆ ಬಹುಮಾನ ನೀಡಿ ಗೌರವಿಸಲಾಗುವುದು ಎಂದು ವನಸಿರಿ ಸಂಸ್ಥೆಯ ಅಧ್ಯಕ್ಷರಾದ ಅಮರೇಗೌಡ ಹೇಳಿದರು.
ಪಟ್ಡಣದ ಶಾಂತಿನಿಕೇತನ ಶಾಲೆ ಮತ್ತು ವನಸಿರಿ ರಾಜ್ಯ ಘಟಕ ರಾಯಚೂರು ಇವರ ಸಹಕಾರದಲ್ಲಿ ತಾಯಿಗೊಂದು ಮರ ಕಾರ್ಯಕ್ರಮವನ್ನು ಶಾಂತಿನಿಕೇತನ ಶಾಲೆ ಅಲ್ಲಿ ಹಮ್ಮಿಕೊಳ್ಳಲಾಗಿತ್ತು ಸಸಿಗಳನ್ನು ವಿತರಣೆ ಮಾಡಿ ಮಾತನಾಡಿ ಹೇಗೆ ತಾಯಿಗೆ ಬೆಲೆ ಕಟ್ಟಲಿಕ್ಕೆ ಸಾಧ್ಯ ಇಲ್ಲವೋ ಹಾಗೆ ಮರಕ್ಕು ಬೆಲೆ ಕಟ್ಟಲು ಸಾಧ್ಯವಿಲ್ಲ.
ಆದರಿಂದ ಎಲ್ಲರೂ ಮರಗಳನ್ನು ಬೆಳಸಿ ಬಿಸಿಲ ನಾಡನ್ನು ಹಸಿರು ನಾಡನ್ನಾಗಿ ಮಾಡಿ ಎಂದು ಹೇಳಿ ಶಾಲೆಯ ಎಲ್ಲ ಮಕ್ಕಳಿಗೂ ಸಸಿಗಳನ್ನು ವಿತರಣೆ ಮಾಡಿ ಚೆನ್ನಾಗಿ ಮರಗಳನ್ನು ಬೆಳೆಸಿದ ಮಕ್ಕಳಿಗೆ ಮುಂದಿನ ವರ್ಷ ತಂಡದ ಸದಸ್ಯರು ಮನೆಗೆ ಭೇಟಿ ನೀಡಿ ,ಬಹುಮಾನ ವಿತರಣೆ ಮಾಡುತ್ತರೆ ಎಂದರು.
ಶಾಲೆಯ ಅಧ್ಯಕ್ಷ ಬಸಲಿಂಗಪ್ಪ ಅರಕೇರಿ, ಪ್ರಾಚಾರ್ಯ ಅನುರಾಧ,ಮುಖ್ಯಗುರು ಬಾಬು,ಮಹೇಶ್ ಅರಕೇರಿ,ಶಿಕ್ಷಕರು,ಮಕ್ಕಳು ಇದ್ದರು.