ನವಯುಗ ಕಾಲೇಜ್:ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ
ರಾಯಚೂರು.ಆ೯:ನವಯುಗ ಪದವಿ ಮಹಾವಿದ್ಯಾಲಯ ರಾಯಚೂರು ಹಾಗೂ ನವ ಯುವ ಸ್ನಾತಕೋತ್ತರ ಮಹಾವಿದ್ಯಾಲಯ ರಾಯಚೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬಿಳ್ಕೊಡುಗೆ ಸಮಾರಂಭ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಉದ್ಘಾಟಕರಾಗಿ ಆಗಮಿಸಿದ ಶಿವಬಸಪ್ಪ ಮಾಲಿಪಾಟೀಲ್ ಸಿಂಡಿಕೇಟ್ ನ ಸದಸ್ಯರು ರಾಯಚೂರು ವಿಶ್ವವಿದ್ಯಾಲಯ ರಾಯಚೂರು ಇವರು ಮಾತನಾಡಿ ಇತ್ತೀಚಿನ ದಿನಮಾನಗಳಲ್ಲಿ ಉತ್ತಮ ಸಂಸ್ಥೆ ಎಂದು ಹೆಸರುವಾಸಿಯಾಗಿರುವ ನವ ಯುಗ ಶಿಕ್ಷಣ ಸಂಸ್ಥೆ ಒಂದು ಆಗಿದೆ ಎಂದು ವಿದ್ಯಾರ್ಥಿಗಳು ಶಿಸ್ತಿನ ಸಿಪಾಯಿಗಳು ಇದ್ದಾರೆ ಉತ್ತಮ ಇನ್ನು ಹೆಚ್ಚಿನ ವಿದ್ಯಾರ್ಥಿಗಳು ಉತ್ತಮ ಅಂಕಗಳು ಪಡೆದುಕೊಳ್ಳಬೇಕೆಂದು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿರುವಂತ ಬಿ ದೇವರೆಡ್ಡಿ ನಿವೃತ್ತ ಪ್ರಾಂಶುಪಾಲರು ಉತ್ತಮ ಅಂಕಗಳ ಗಳಿಸಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಉನ್ನತ ಶಿಕ್ಷಣವನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು
ಮತ್ತೊರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿರುವಂತ ಶ್ರೀಮತಿ ಹೇಮಾವತಿ ಸತೀಶ್ ಕಾರ್ಯದರ್ಶಿಗಳು ನವಯುಗ ಶಿಕ್ಷಣ ಸಂಸ್ಥೆ ರಾಯಚೂರು ನಮ್ಮ ವಿದ್ಯಾರ್ಥಿಗಳು ಇನ್ನೂ ಸಾಕಷ್ಟು ಹೆಚ್ಚಿನ ಅಂಕಗಳ ಗಳಿಸಬೇಕೆಂದು ಪ್ರೋತ್ಸಾಹಿಸಿದರು.
ಅತಿಥಿಗಳಾಗಿದ್ದ ಭೀಮಪ್ಪ ಉಪನ್ಯಾಸಕರು ಕಥೆ ರೂಪದಲ್ಲಿ ವಿದ್ಯಾರ್ಥಿಗಳಿಗೆ ತಿಳಿಸಿದರು. ಸಿದ್ದಾರ್ಥ ವಲ್ಲಭ ಸರ್ ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು ನಿಯಮ ಜಾಗೃತೆಯ ಮುಂತಾದವುಗಳನ್ನು ಅಳವಡಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ವಿವರಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನವಯುವ ಶಿಕ್ಷಣ ಸಂಸ್ಥೆ ಆಡಳಿತ ಅಧಿಕಾರಿಗಳು ನರಸಿಂಹಲು ಏನ್ ಸೌಲಭ್ಯ ಕುರಿತು ಸುದೀರ್ಘವಾಗಿ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ನವಯುಗ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಸದಸ್ಯರಾದ ಸತೀಶ್ ಕುಮಾರ ಹಾಗೂ ಶೇಕ್ ಆತ್ತರ್ ಹಾಗೂ ಪ್ರಾಚಾರ್ಯ ಡಾ.ಈರಣ್ಣ ಪೂಜಾರಿ ಹಾಗೂ ಕಲಾ ವಿಭಾಗದ ಮುಖ್ಯಸ್ಥರು ಈರಪ್ಪ ಬಿಕಾಂ ವಿಭಾಗದ ಮುಖ್ಯಸ್ಥನಾದ ಭೀಮಣ್ಣ ಭಂಡಾರಿ ವಿಜ್ಞಾನ ವಿಭಾಗದ ಮುಖ್ಯಸ್ಥರದ ಕುಮಾರಿ ಅನ್ನಪೂರ್ಣ ಮೇಡಂ ಹಾಗೂ ಉಪನ್ಯಾಸಕರು,ಹಾಗೂ ವಿದ್ಯಾರ್ಥಿಗಳು ಮುಂತಾದವರು ಇದ್ದರು