ಅಧ್ಯಾಪಕರು ಜೀವನದಲ್ಲಿ ಸಾಕ್ಷತ್ಕಾರ ಹೊಂದಿರಬೇಕು -ಡಾ.ಗಂಗಾಧರಯ್ಯ ಹಿರೇಮಠ್
ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ:ಆ.09 ಅಧ್ಯಾಪಕರು ಜೀವನದಲ್ಲಿ ಸಾಕ್ಷತ್ಕಾರ ಸಮಯ ಪ್ರಜ್ಞೆ ಹೊಂದಿರಬೇಕು  ಎಂದು ದಾವಣಗೆರೆಯ ನಿವೃತ್ತ ಪ್ರಾಧ್ಯಾಪಕರಾದ ಡಾ.ಗಂಗಾಧರಯ್ಯ ಹಿರೇಮಠ್ ಉಪನ್ಯಾಸಕರಿಗೆ ಕಿವಿಮಾತು ಹೇಳಿದರು.
ಪಟ್ಟಣದ ಗುರುಭವನದಲ್ಲಿ ವಿಜಯನಗರ ಜಿಲ್ಲಾ ಪ.ಪೂ.ಕಾಲೇಜ್‍ಗಳ ಪ್ರಾಚಾರ್ಯರ, ಉಪನ್ಯಾಸಕರ ಸಂಘಟನೆ ಹಾಗೂ ವಿದ್ಯಾನಿಕೇತನ ಕಾಲೇಜ್ ಸಹಯೋಗದೊಂದಿಗೆ  ಬುಧವಾರ ಹಮ್ಮಿಕೊಂಡಿದ್ದ ಶೈಕ್ಷಣಿಕ ಸಮಾವೇಶದಲ್ಲಿ ಅವರು ಉಪನ್ಯಾಸ ನೀಡಿ ಮಾತನಾಡುತ್ತಿದ್ದರು. ಉಪನ್ಯಾಸಕರ ಇಚ್ಚಾಶಕ್ತಿ ಇದ್ದರೆ ಸಮಾಜಕ್ಕೆ ಒಳ್ಳೆಯ ಪ್ರಜೆಗಳನ್ನು ಕೊಡಬಹುದು.ಜಾತಿ,ದರ್ಮದಿಂದ ದೂರಯಿದ್ದು ನಾವೆಲ್ಲಾ ಒಂದೇ ಎಂಬ ಮನೋಬಾವದಲ್ಲಿ   ಉತ್ತಮ ಸೇವೆಯಿಂದ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಹಾದಿ ಸುಗಮವಾಗುತ್ತೆ. ನಿಮ್ಮ ಕರ್ತವ್ಯ ನೀವು ಮರೆಯಬೇಡಿ ಎಂದರು.
ಅವಳಿ ಜಿಲ್ಲೆಗಳ ಪ.ಪೂ.ಕಾಲೇಜ್‍ಗಳ ಉಪನಿರ್ದೇಶಕರಾದ ಟಿ.ಫಾಲಾಕ್ಷರವರು ಕಾರ್ಯಕ್ರಮ ಉದ್ಘಾಟಿಸಿ, ಕಾಲೇಜ್‍ಗಳಲ್ಲಿ ಉತ್ತಮ ಫಲಿತಾಂಶಕ್ಕಾಗಿ ಗುಣಮಟ್ಟದ ಶಿಕ್ಷಣ ನೀಡಿ, ಕಾಲೇಜ್‍ಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಏರಿಕೆಗಿಂತ ಗುಣಮಟ್ಟದ ಶಿಕ್ಷಣ ಬಹು ಮುಖ್ಯ ಎಂದರು.
ಇದೇ ವೇದಿಕೆಯಲ್ಲಿ ನಿವೃತ್ತರಾದ ವಿಜಯನಗರ ಜಿಲ್ಲೆಯ ಕಾಲೇಜ್‍ಗಳ ನೌಕರರು ಮತ್ತು ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಪ್ರಾಚಾರ್ಯರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ್ ಸಿ.ಹವಲ್ದಾರ್, ಪದಾಧಿಕಾರಿಗಳಾದ ವಿದ್ಯಾನಿಕೇತನ ಕಾಲೇಜ್‍ನ ಪಿ.ಶರತ್‍ಚಂದ್ರ, ಬಳ್ಳಾರಿಯ ಶ್ರೀಶೈಲ, ಶಿವರಾಮ್, ಎಂ.ಆರ್.ಶೇಖರ್, ಕೆ.ಬಿ.ಎಂ.ನಾಗಲಿಂಗಸ್ವಾಮಿ, ಎಂ.ಟಿ.ಗಿರೀಶ್, ಡಾ.ಎಂ.ಕೆ.ದುರುಗಪ್ಪ, ಡಾ.ರಾಜಣ್ಣ, ಗೂಳಪ್ಪ, ಮಲ್ಲಿಕಾರ್ಜುನ, ಗೌಡರ ಬಸವರಾಜ್, ಹೊಸಪೇಟೆಯ ಪಾರ್ವತಿ, ಕೊಟ್ಟೂರಿನ ಡಾ.ಜಗದೀಶ ಚಂದ್ರ ಭೋಸ್ ಮತ್ತು  ದಯಾನಂದ ಕಿನ್ನಾಳ್ ಮತ್ತಿತರರು ಇದ್ದರು.