ಜಮೀನಿಗಿಳಿದ ಬಸ್: ಪ್ರಯಾಣಿಕರು ಪಾರು
ನವಲಗುಂದ,ಆ9 : ನವಲಗುಂದದಿಂದ ಕುಂದಗೋಳಕ್ಕೆ ತರಳುತ್ತಿದ್ದ ಸಾರಿಗೆ ಸಂಸ್ಥೆ ಬಸ್ ರಸ್ತೆ ಪಕ್ಕದ ಜಮೀನಿಗಿಳಿದ ಘಟನೆ ತಾಲೂಕಿನ ಚೀಲಖವಾಡ ಗ್ರಾಮದ ಹತ್ತಿರ ಶುಕ್ರವಾರ ನಡೆದಿದ್ದು, ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಚಿಲಕವಾಡ ಗ್ರಾಮದ ಹತ್ತಿರ ರಸ್ತೆಯಲ್ಲಿ ರೈತರು ವಿವಿಧ ಬೆಳೆಕಾಳುಗಳ ರಾಶಿಗಳನ್ನು ರಸ್ತೆಯ ಮೇಲೆ ಹಾಕಿದ್ದರಿಂದ ಪಕ್ಕದಲ್ಲಿ ಮೆಲ್ಲಗೆ ಸಂಚರಿಸುವಾಗ ಬಸ್ ಜಮೀನಿಗಿಳಿದಿದೆ.
ಅದೃಷ್ಟವಶಾತ್ ಬಸ್‍ನಲ್ಲಿದ್ದ ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ರಸ್ತೆಯ ಮೇಲೆ ಹಾಕಿರುವ ರಾಶಿಗಳನ್ನು ತೆಗೆಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಈ ಭಾಗದ ಪ್ರಯಾಣಿಕರು ಒತ್ತಾಯಿಸಿದ್ದಾರೆ.