ಹಬೋಹಳ್ಳಿ:ವೃತ್ತಿ ರಂಗಭೂಮಿ ಕಲಾವಿದರಿಗೆ ಆಹಾರ ಕಿಟ್ ವಿತರಣೆ
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ :ಆ.09 ಕಾರ್ಯನಿರತ ಪತ್ರಕರ್ತರ ಸಂಘದಿಂದ ಪಟ್ಟಣದಲ್ಲಿ ನಡೆಯುತ್ತಿರುವ ಮಂಡಲಗಿರಿ ನಾಟಕ ಕಂಪನಿಯ ಕಲಾವಿದರಿಗೆ ನಾಗರ ಪಂಚಮ ಹಬ್ಬದ ಪ್ರಯುಕ್ತ ಆಹಾರ ಕಿಟ್ ವಿತರಣೆ ಮಾಡುತ್ತಿದ್ದೆವೆ ಎಂದು ಸಂಘದ ತಾಲೂಕು ಅಧ್ಯಕ್ಷ ಉಮಾಪತಿ ಶೆಟ್ಟರ್ ಹೇಳಿದರು.
ಪಟ್ಟಣದ ಕೊಟ್ರಬಸಪ್ಪನವರ ಖಾಲಿ ನಿವೇಶನದಲ್ಲಿ ಮಂಡಲಗಿರಿಯ ಶ್ರೀ ಗುರು ಸಿದ್ದಲಿಂಗೇಶ್ವರ ನಾಟಕ ಕಂಪನಿಯ ಕಲಾವಿದರಿಗೆ ಗುರುವಾರ ಆಹಾರ ಕಿಟ್ ವಿತರಿಸಿ ಅವರು ಮಾತನಾಡಿ ನಾಟಕ ಎಂಬುದು ಜೀವಂತ ಕಲೆ ರಂಗ ಕಲಾವಿದರ ಬದುಕು ಉಳಿಯಬೇಕು, ಬೆಳೆಯಬೇಕು ಎಂಬ ಸದುದ್ದೇಶದಿಂದ ಈ ಕಾರ್ಯಕ್ಕೆ ಮುಂದಾಗಿದ್ದೇವೆ ಎಂದರು.
ಸಂಘದ ಜಿಲ್ಲಾಉಪಾಧ್ಯಕ್ಷ ಬುಡ್ಡಿ ಬಸವರಾಜ್ ಮಾತನಾಡಿ ಟಿವಿ ಮತ್ತು ಮೋಬೈಲ್ ಹಾವಳಿಯಿಂದ ರಂಗಭೂಮಿ ಕಲಾವಿದರ ಬದುಕು ಕಷ್ಟಕರವಾಗಿದೆ.ಕಲಾವಿದರು ಉಳಿಯಬೇಕು ಕಲೆ ಜೀವಂತವಾಗಿರಬೇಕೆÉಂದರೆ ನಾವೆಲ್ಲಾ ಪ್ರೋತ್ಸಾಯಿಸಿ ಬೆಳೆಸಬೇಕು ನಮ್ಮ ಸಂಘದಿಂದ ಒಂದು ಸಣ್ಣ ಅಳಿಲು ಸೇವೆ ಎಂದರು.
ನಾಟಕ ಕಂಪನಿಯ ಮಾಲೀಕ ಹಾಗೂ ನಿರ್ದೇಶಕ ಶರತ್ ಕುಂಭ್ಳೆ ಮಾತನಾಡಿ ನಗರದಲ್ಲಿ ಕಳೆದ 15 ದಿನಗಳಿಂದ ನಾಟಕ ಪ್ರದರ್ಶನ ನಡೆಯುತ್ತಿದ್ದು ಕಲೆಕ್ಷೆನ್ ತುಂಬಾ ಡಲ್ ಆಗಿದೆ. ಒಂದೊಂದು ದಿನ ಒಬ್ಬೊಬ್ಬರು ಊಟದ ವ್ಯವಸ್ಥೆಯನ್ನು ಮಾಡುವ ಮೂಲಕ ತಮ್ಮ ಕಲಾ ಪ್ರೇಮವನ್ನು ಮೆರೆದಿದ್ದಾರೆ. ಒಂದು ವಾರಕ್ಕೂ ಹೆಚ್ಚು ಆಗುವಷ್ಟು ಆಹಾರ ದಿನಸಿಗಳನ್ನು ನೀಡಿರುವ ಪತ್ರಕರ್ತರ ಸಂಘಕ್ಕೆ ಕಲಾವಿದರು ಋಣಿಯಾಗಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಭೀಮರಾಜ, ಖಜಾಂಚಿ ರಾಜಾವಲಿ ಗಡದ್, ಪತ್ರಕರ್ತರಾದ ಸಿ.ಶಿವಾನಂದ, ಮಂಜುನಾಥ ಪಟ್ಟಣಶೆಟ್ಟಿ, ಬಿ.ಕೆ.ವಿಶ್ವನಾಥ, ಜೆ.ನಾಗರಾಜ, ಮಜ್ಜಿವಿ ವೀರೇಶ್, ಅಕ್ಕಂಡಿ ಬಸವರಾಜ, ಬಿ.ಕೆ.ಬಸವರಾಜ, ನಾಕಟ ಕಲಾವಿದರಾದ ಪಂಚಾಕ್ಷರಿ ಹೂಗಾರ್, ಗುರುಲಿಂಗಸ್ವಾಮಿ, ಮಹಾಬಲೇಶ, ಶಂಕರ್, ಜ್ಯೋತಿ, ರವಿ, ಸುನೇತ್ರ, ಶರಣಮ್ಮ, ಪವನ್  ಇದ್ದರು.