ನಾಯಿ ದಾಳಿಯಿಂದ ಗಾಯಗೊಂಡಿದ್ದ ಜಿಂಕೆ ರಕ್ಷಣೆ
ಲಕ್ಷ್ಮೇಶ್ವರ,ಆ9: ತಾಲೂಕಿನ ಸುವರ್ಣ ಗಿರಿಯಿಂದ ಯಲ್ಲಾಪುರ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಯಲ್ಲಿ ಗುರುವಾರ ಸಂಜೆ ಜಿಂಕೆಯೊಂದರ ಮೇಲೆ ನಾಯಿಗಳು ದಾಳಿ ಮಾಡಿ ಗಾಯಗೊಳಿಸಿದ ಘಟನೆ ಜರುಗಿದೆ.
ಪಿಎಸ್‍ಐ ಈರಣ್ಣ ರಿತ್ತಿ ಅವರ ಸೂಚನೆ ಮೇರೆಗೆ ಜಿಂಕೆಯನ್ನು ರಕ್ಷಿಸಿದ ಲಕ್ಷ್ಮಿಕಾಂತ್ ಲಮಾಣಿ, ಮುತ್ತಣ್ಣಮುಸಪನವರ ಇನ್ನಿತರ ಯುವಕರು ಚಿಕಿತ್ಸೆ ನೀಡಿ ಅರಣ್ಯ ಇಲಾಖೆಯವರಿಗೆ ಒಪ್ಪಿಸಿದ್ದಾರೆ.
ಅರಣ್ಯ ಇಲಾಖೆಯ ಉಪವಲಯ ಅರಣ್ಯಾಧಿಕಾರಿ ಪ್ರಕಾಶ್ ಕರಗುಪ್ಪಿ ಅವರು ಜಿಂಕೆಯನ್ನು ಹರದಗಟ್ಟಿಯ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಬಿಡಲಾಗುವುದು ಎಂದು ಹೇಳಿದ್ದಾರೆ.