ಅಧುನಿಕ ತಂತ್ರಜ್ಞಾನದಿಂದ ಭತ್ತ ನಾಟಿ- ಮಂಜುನಾಥರೆಡ್ಡಿ
ಸಂಜೆವಾಣಿ ವಾರ್ತೆ
ಸಂಡೂರು :ಆ:9:: ಸಂಡೂರು :: ಭತ್ತ ಬೆಳೆಯಲ್ಲಿ ಯಾಂತ್ರೀಕೃತ ನಾಟಿಪದ್ದತಿಯನ್ನು ಅಳವಡಿಸಿಕೊಳ್ಳುವುದರಿಂದ ಸಮಯ, ಹಣ ಮತ್ತು ಹೆಚ್ಚು ಇಳುವರಿ ಪಡೆಯಲು ಸಾಧ್ಯವಿದೆ  ಎಂದು ತಾಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ ರಡ್ಡಿ  ಯಾಂತ್ರಿಕರಣದಿಂದ ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಿ ತಿಳಿಸಿದರು.
ಅವರು ತಾಲೂಕಿನ ಹಳೇ ದರೋಜಿ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆ ಬಿ.ಸಿ. ಟ್ರಸ್ಟ್ ಕಂಪ್ಲಿ ಇವರ ಸಹಯೋಗದಲ್ಲಿ ತೋರಣಗಲ್ಲು ಹೋಬಳಿಯ ಹಳೆ ದರೋಜಿ ಗ್ರಾಮದ ರೈತ ರಾಮು ಅವರ ಜಮೀನಿನಲ್ಲಿ ನೂತನ ಯಂತ್ರೀಕೃತ ಸಸಿ ನೆಡುವುದರಿಂದ ಉತ್ತಮವಾದ ಬೆಳೆ ಬರಲಿದೆ ಎಂದು ತಿಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆ ಬಿ.ಸಿ. ಟ್ರಸ್ಟ್ ಕೃಷಿ ಅಧಿಕಾರಿ ಸಂಜೀವ್‍ಕುಮಾರ್ ಅವರು ಮಾತನಾಡಿ ರೈತ ರಾಮು ಅವರ 10 ಎಕರೆ ಜಮೀನಿನಲ್ಲಿ ಯಾಂತ್ರಿಕೃತ ಭತ್ತ ಬೇಸಾಯ ಹಾಗೂ ನಾಟಿ ಪದ್ದತಿಯಲ್ಲಿರುವ ವ್ಯತ್ಯಾಸವನ್ನು ತಿಳಿಸಿದರು, ಪ್ರಮುಖವಾಗಿ ನಾಟಿಮಾಡುವುದರಿಂದ ಕಾರ್ಮಿಕರ ಶ್ರಮ ಉಳಿತಾಯವಾಗುತ್ತದೆ, ಕಡಿಮೆ ಸಮಯದಲ್ಲಿ ಹೆಚ್ಚು ನಾಟಿ ಮಾಡಲು ಅವಕಾಶವಾಗುತ್ತದೆ, ಕೂಲಿ ಬಹಳಷ್ಟು ಕಡಿಮೆಯಾಗುತ್ತದೆ, ಕಾರ್ಮಿಕರ ಸಮಸ್ಯೆ ಇಲ್ಲವಾಗುತ್ತದೆ. ಈ ಎಲ್ಲಾ ಅಂಶಗಳ ಜೊತೆಗೆ ಹೆಚ್ಚು ಇಳುವರಿಯನ್ನು ಪಡೆಯಲು ಸಹಕಾರಿಯಾಗಿದೆ ಅದ್ದರಿಂದ ರೈತರಿಗೆ ವರದಾನವಾಗಿ ಈ ಪದ್ದತಿಯನ್ನು ಶ್ರೀಕ್ಷೇತ್ರ ಧರ್ಮಸ್ಥಳ ಸಂಘದ ವತಿಯಿಂದ ಉಚಿತವಾಗಿ ತರಬೇತಿ ನೀಡುವುದರ ಜೊತೆಗೆ ಬಿತ್ತನೆಯ ಕಾರ್ಯವನ್ನು ನೆರವೇರಿಸುತ್ತಿದ್ದೇವೆ, ಈ ಸಂದರ್ಭದಲ್ಲಿ ಒಂದು ಎಕರೆಗೆ 100 ಟ್ರೇಬಳಕೆ ಮತ್ತು 12 ಬುಟ್ಟಿ ಮಣ್ಣಿನಲ್ಲಿ ಬೆಳೆದ 12 ಕೆ.ಜಿ. ಬೀಜದಲ್ಲಿ ಬೆಳೆದ ಸಸಿ ಮತ್ತು ನೀರು ನಿರ್ವಹಣೆಯನ್ನು ಮಾಡುವ ಕಾರ್ಯ ಇದಾಗಿದೆ ಎಂದರು.
ಈ ಸಂದರ್ಭದಲ್ಲಿ ಕ್ಷೇತ್ರದ ರೈತ ಮುಖಂಡರಾದ ಮಾರೆಪ್ಪ, ಅಂಬಣ್ಣ, ಬಸವರಾಜ, ಸೋಮಶೇಖರ್, ಲಿಂಗಪ್ಪ, ರಾಮಮೂರ್ತಿ, ಎಸ್.ವೀರಭದ್ರಪ್ಪ, ವಲಿಭಾಷಾ, ಯೋಜನಾಧಿಕಾರಿ ಹಾಲಪ್ಪ, ತೋರಣಗಲ್ಲು ಕೃಷಿ ಅಧಿಕಾರಿ ಸಂತೋಷ್, ಆತ್ಮ ಸಿಬ್ಬಂದಿಯಾದ ಕವಿತಾಕುಮಾರಿ, ಧನುಂಜಯ.ಜೆ.ಪಿ., ದರೋಜಿ ವಲಯದ ಮೇಲ್ವಿಚಾರಕರಾದ ರಾಜು, ಮೋಹನ್ ಇತರರು ಉಪಸ್ಥಿತರಿದ್ದರು.