ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ
ಚನ್ನಮ್ಮನ ಕಿತ್ತೂರು,ಆ9: ತಾಲೂಕಿನ ಅಂಬಡಗಟ್ಟಿ ಗ್ರಾಮದಲ್ಲಿ ನಡೆದ ಕಕ್ಕಯ್ಯ ಶಿಕ್ಷಣ ಸಂಸ್ಥೆ ಶಾಲಾ ಕಟ್ಟಡದ ಭೂಮಿ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಶಾಸಕ ಬಾಬಾಸಾಹೇಬ ಪಾಟೀಲ ಸರ್ಕಾರಿ ಶಾಲೆಗಳ ಜೊತೆಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಪಾತ್ರ ಅಷ್ಟೇ ಮುಖ್ಯವಿದೆ. ಕಕ್ಕಯ್ಯ ಶಿಕ್ಷಣ ಸಂಸ್ಥೆ ಹೆಮ್ಮರವಾಗಿ ಬೆಳೆದು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಹತ್ತಾರು ಶಾಲೆಗಳಿಗೆ ಮಾದರಿಯಾಗಲೆಂದರು.
ಈ ವೇಳೆ ದೇಗುಲಹಳ್ಳಿ-ಅಂಬಡಗಟ್ಟಿ ಗುರು ಮಡಿವಾಳೇಶ್ವರ ಮಠದ ಪೀಠಾಧಿಪತಿ ಶ್ರೀ ವೀರೇಶ್ವರ ಸ್ವಾಮಿಜಿ, ಸಂಸ್ಥೆಯ ಅಧ್ಯಕ್ಷ, ಸರ್ವಸದಸ್ಯರು, ಶಿಕ್ಷಕರು, ಗ್ರಾಮಸ್ಥರು, ಹಿರಿಯರು ಯುವಕರು ಸೇÀರಿದಂತೆ ಸಾರ್ವಜನಿಕರಿದ್ದರು.