ಲೋಕಾಯುಕ್ತ ದಾಳಿ:ಡಿಡಿಎಲ್‍ಆರ್ ಪ್ರವೀಣ ಜಾಧವ ಅಮಾನತು
ಕಲಬುರಗಿ,ಆ 9: ನಗರದ ಬ್ರಹ್ಮಪುರದ ಭೂಮಿಯನ್ನು ಪೋಡಿ ಮಾಡಿಕೊಡಲು 1.5 ಲಕ್ಷ ರೂ ಲಂಚ ಪಡೆಯವಾಗ ಲೋಕಾಯುಕ್ತ ದಾಳಿಯಲ್ಲಿ ಸಿಕ್ಕಿ ಬಿದ್ದಿದ್ದ ಜಿಲ್ಲಾ ಭೂ ದಾಖಲೆಗಳ ಇಲಾಖೆ ಉಪ ನಿರ್ದೇಶಕ ( ಡಿ.ಡಿ.ಎಲ್.ಆರ್)ಪ್ರವೀಣ ಜಾಧವ ಅವರನ್ನು ಅಮಾನತ್ತು ಮಾಡಲಾಗಿದೆ,
ಕರ್ನಾಟಕ ಲೋಕಾಯುಕ್ತ ಜಿಲ್ಲಾ ಪೆÇಲೀಸ ಅಧಿಕ್ಷಕ ಎಸ್.ಪಿ .ಜಾನ್ ಆಂಟೋನಿ. ಮಾರ್ಗದರ್ಶನದಲ್ಲಿ ದಾಳಿ ನಡೆಯಿತು.
ಎಲ್ಲ ದಾಖಲಾತಿಗಳನ್ನು ಪರಿಶೀಲನೆ ನಡೆಸಿ ದಾಖಲೆ ಪತ್ರಗಳನ್ನು ಜಪ್ತಿ ಮಾಡಲಾಗಿದೆ.ಸಿಸಿ ಕ್ಯಾಮೆರಾ. ಡಿವಿಆರ್ ಸೇರಿದಂತೆ .ಹಲವಾರು ಕಡತಗಳನ್ನು. ಪರಿಶೀಲನೆ ನಡೆಸಲಾಯಿತು.ಕಂಪ್ಯೂಟರ್ ಅಲ್ಲಿರುವ ಕಡತಗಳನ್ನು, ಚಲನ ವಲನ ರಿಜಿಸ್ಟರ್,ಹಾಜರಾತಿ
ಪುಸ್ತಕ,ಅಲ್ಲಿನ ಸಿಬ್ಬಂದಿಗಳಿಗೆ ಇಂಚಿಂಚಾಗಿ ಪರಿಶೀಲನೆ ನಡೆಸಲಾಯಿತು.
ಬ್ರಹ್ಮಪುರದ 25 ಗುಂಟೆ ಜಮೀನು ಪೋಡಿ ಮಾಡಲು ಲಂಚ ಕೇಳಲಾಗಿತ್ತು ಈ ಕುರಿತು
ರೇವಣಸಿದ್ದ ಮೂಲಗೆ ಎಂಬುವವರು ಲೋಕಾಯುಕ್ತರಿಗೆ ದೂರು ನೀಡಿದ್ದರು.ದಾಳಿಯಲ್ಲಿ ಇನ್ಸ್ಪೆಕ್ಟರ್ ರಾಜಶೇಖರ್, ಸಿದ್ದರಾಮ್,ಅನಿಲ್,ಬಸವರಾಜ್.ಸಿಬ್ಬಂದಿಗಳು ಇದ್ದರು.