ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕ್ವಿಟ್ ಇಂಡಿಯಾ ಚಳವಳಿ ವರ್ಷಾಚರಣೆ
ವಿಜಯಪುರ,ಆ.9: ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ‘ಬ್ರಿಟಿಷರೆ ಭಾರತ ಬಿಟ್ಟು ತೊಲಗಿ (ಕ್ವಿಟ್ ಇಂಡಿಯಾ)’ ಚಳುವಳಿಯ 82ನೇ ವರ್ಷಾಚರಣೆಯನ್ನು ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಶುಕ್ರವಾರ ಆಚರಿಸಲಾಯಿತು.
ಕ್ವಿಟ್ ಇಂಡಿಯಾ ಚಳುವಳಿ ದಿನಾಚರಣೆಯ ‘ಬ್ರಿಟಿಷರೆ ಭಾರತ ಬಿಟ್ಟು ತೊಲಗಿ ಘೋಷಣೆಯೊಂದಿಗೆ ಮಹಾತ್ಮಾ ಗಾಂಧೀಜಿರವರು 1942 ಆಗಸ್ಟ್ 9ನೇ ತಾರೀಖಿನಂದು ಬ್ರಿಟಿಷರ ವಿರುದ್ಧ ಹೋರಾಟ ಪ್ರಾರಂಭಿಸಿದರು. ಮುಂದೆ ನಮಗೆ ಈ ಹೋರಾಟವೇ ಭಾರತ ಸ್ವಾತಂತ್ರ್ಯ ಹೊಂದಲು ಬುನಾದಿಯಾಯಿತು. ಮಹಾತ್ಮಾ ಗಾಂಧೀಜಿಯವರು ಹಮ್ಮಿಕೊಂಡ ಈ ಹೋರಾಟ ಬ್ರಿಟಿಷರನ್ನು ಭಾರತ ಬಿಟ್ಟು ತೊಲಗುವಂತೆ ಮಾಡಿತು. ಈ ಹೋರಾಟಗಳಲ್ಲಿ ಅನೇಕ ಜನ ಹೋರಾಟಗಾರರು ತಮ್ಮ ತ್ಯಾಗ ಬಲಿದಾನ ಮಾಡಿ ಇಂದು ನಾವು ಸ್ವತಂತ್ರವಾಗಿ ಬದುಕಲು ದಾರಿ ಮಾಡಿಕೊಟ್ಟರು. ಈ ಮಹಾಪುರುಷರು ಹಾಕಿಕೊಟ್ಟ ದಾರಿ ಅಮೋಘವಾಗಿದ್ದು, ನಾವು ಇಂದಿನ ಪೀಳಿಗೆಗೆ ಅರಿವು ಮೂಡಿಸುವ ಕೆಲಸ ಮಾಡಬೇಕಾಗಿದೆ’ ಎಂದು ಕಾಂಗ್ರೆಸ್ ಪಕ್ಷದ ಮುಖಂಡರು ಹೇಳಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಉಪಾಧ್ಯಕ್ಷÀ ವೈಜನಾಥ ಕರ್ಪೂರಮಠ, ಅಫ್ಜಲ ಜಾನವೇಕರ, ನಗರ ಬ್ಲಾಕ್ ಅಧ್ಯಕ್ಷÀ ಜಮೀರಅಹ್ಮದ ಬಕ್ಷಿ, ಮಹಾನಗರ ಪಾಲಿಕೆ ಸದಸ್ಯೆÀ ಆರತಿ ಶಹಾಪೂರ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಸಂತ ಹೊನಮೊಡೆ, ಎಂ. ಎಂ. ಮುಲ್ಲಾ (ದ್ಯಾಬೇರಿ), ಸಾಹೇಬಗೌಡ ಬಿರಾದಾರ, ಚನಬಸಪ್ಪ ನಂದರಗಿ, ದೇಸು ಚವ್ಹಾಣ, ಸುಭಾಸ ಕಾಲೇಬಾಗ, ಬಾಪುಗೌಡ ಪಾಟೀಲ, ಎಂ. ಬಿ. ಮೇಡೆಗಾರ, ಅಬ್ದುಲ್‍ಪೀರಾ ಜಮಖಂಡಿ, ಪರಶುರಾಮ ಹೊಸಮನಿ, ವೀರೇಶ ಕಲಾಲ, ಅಯಾಜ ರೋಜೆವಾಲೆ, ಕಲ್ಲಪ್ಪ ಪರಶೆಟ್ಟಿ, ಮಹ್ಮದಹನೀಫ ಮಕಾಂದಾರ, ಕಾಶಿಬಾಯಿ ಹಡಪದ, ಗಂಗವ್ವ ಕಣಮುಚನಾಳ, ಸುಲ್ತಾನಸಾಬ ಅಗಸಿಮನಿ, ಅಬ್ದುಲಹಮೀದ ಮುಕ್ಬಿಲ್, ಸಾಜಿದಾಹುಸೇನ ರಿಸಾಲದಾರ, ಮಲ್ಲಿಕಾರ್ಜುನ ಗಬಸಾವಳಗಿ, ನಿಂಗಪ್ಪ ಸಂಗಾಪೂರ, ದಾನಪ್ಪ ಸೂರಗೊಂಡ, ಹಾಜಿಲಾಲ ದಳವಾಯಿ ಮುಂತಾದವರು ಉಪಸ್ಥಿತರಿದ್ದರು.