ಸಂಸ್ಕಾರಯುತ ಸಮಾಜಕ್ಕೆ ಪುರಾಣ, ಪ್ರವಚನ ಅಗತ್ಯ
ಕಲಬುರಗಿ,ಆ.9-ನಗರದ ಹೊಸಾ ಬಡಾವಣೆ ಬಸವೇಶ್ವರ ಕಾಲೊನಿಯ ಶಿವ ಮಂದಿರದಲ್ಲಿ ಶ್ರಾವಣ ಮಾಸದ ಅಂಗವಾಗಿ ಮೂರನೇ ವರ್ಷದ ಮಹಾದಾಸೋಹೀ ಕಲಬುರ್ಗಿ ಶರಣಬಸವೇಶ್ವರ ಪುರಾಣದಲ್ಲಿ ಶರಣಬಸವೇಶ್ವರ ತೊಟ್ಟಿಲು ಕಾರ್ಯಕ್ರಮ ಬಹು ವಿಜೃಂಭಣೆಯಿಂದ ಜರುಗಿತು.
ಬೆಳಗುಂಪಿಯ ಅಭಿನವ ಪರ್ವತೇಶ್ವರ ಶಿವಾಚಾರ್ಯರು ಸಾನ್ನಿಧ್ಯವಹಿಸಿ ಪುರಾಣ ಪ್ರವಚನ ಸಾತ್ವಿಕ ಜೀವನ ನಡೆಸಲು ಮತ್ತು ಸಂಸ್ಕಾರಯುತ ಸಮಾಜವನ್ನು ಕಟ್ಟಲು ಇಂದಿನ ದಿನಗಳಲ್ಲಿ ಬಹಳ ಮುಖ್ಯ ಎಂದು ಆಶಿರ್ವಚನ ನಿಡಿದರು. ಪುರಾಣಿಕರಾದ ಸುಂಟನೂರ ಸಂಸ್ಥಾನ ಹಿರೇಮಠದ ಬಂಡಯ್ಯ ಶಾಸ್ತ್ರಿಗಳು, ಕಲಾವಿದರಾದ ಚೇತನ್ ಸ್ವಾಮಿ ಬೀದಿಮನಿ, ತಬಲಾ ವಾದಕರಾದ ಕಲ್ಮೇಶ ದೇಸಾಯಿ ಕಲ್ಲೂರ, ಶಿವ ಮಂದಿರ ಸಮಿತಿ ಅಧ್ಯಕ್ಷರಾದ ಭಿಮಾಶಂಕರ್ ಚಕ್ಕಿ, ಮಲ್ಲಿನಾಥ ಭೋಳಶೆಟ್ಟಿ, ವಚನೋತ್ಸವ ಮಹಿಳಾ ಘಟಕ ಬಸವೇಶ್ವರ ಕಾಲೊನಿ ಸರ್ವ ಪದಾಧಿಕಾರಿಗಳು. ಶಿವ ಮಂದಿರ ಸಮಿತಿ ಸದಸ್ಯರು ಕಾಲೊನಿಯ ಸಮಸ್ತ ಸದ್ಭಕ್ತರು ತಾಯಿಯಂದಿರು ಭಾಗವಹಿಸಿದ್ದರು.