ಬಾವಿಗೆ ಬಿದ್ದು ವಿದ್ಯಾರ್ಥಿ ಸಾವು
ಆಳಂದ,ಆ.9-ಪಟ್ಟಣದ ಹಳೆಯ ಚೆಕ್ ಪೆÇೀಸ್ಟ್ ಹತ್ತಿರದ ಚಿಲ್ಲಾಳ ಪೆಟ್ರೋಲ್ ಪಂಪ್ ಹಿಂದುಗಡೆ ಇರುವ ಬಾವಿಯಲ್ಲಿ ಬಿದ್ದು ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ್ದಾನೆ.
ಮೃತನನ್ನು ಆಳಂದ ತಾಲ್ಲೂಕಿನ ಮೋಘಾ (ಕೆ) ಗ್ರಾಮದ ಶಂಕರ ಲಕ್ಷ್ಮಣ ಝಂಡೆ (17) ಎಂದು ಗುರುತಿಸಲಾಗಿದೆ.
ಶಂಕರ ಎಸ್.ಎಸ್.ಎಲ್.ಸಿ.ವಿದ್ಯಾರ್ಥಿಯಾಗಿದ್ದು, ಮೂರನೇ ಬಾರಿಗೆ ಪರೀಕ್ಷೆ ಬರೆಯುತ್ತಲಿದ್ದ ಎಂದು ತಿಳಿದುಬಂದಿದೆ.
ಆಳಂದ ಪೆÇಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.