ಶ್ರಾವಣದ ಹೂ ಕೇದಿಗೆ
ಕಲಬುರಗಿ,ಆ 9: ಹಿಂದೂಗಳಿಗೆ ಪವಿತ್ರವಾದ ಶ್ರಾವಣ ಮಾಸದಲ್ಲಿ ಮೊದಲ ಹಬ್ಬವೇ ನಾಗರ ಪಂಚಮಿ . ಈ ಹಬ್ಬದ ಸಮಯ ಹೂವಿನ ಮಾರುಕಟ್ಟೆ ಸುಂದರವಾದ ಹಳದಿ ಬಣ್ಣದ ಕೇದಿಗೆ ಪುಷ್ಪದ ಘಮದಿಂದಲೇ ಕೂಡಿರುತ್ತದೆ.
ಕೇದಿಗೆ ನಮಗೆಲ್ಲ ಚಿರಪರಿಚಿತವಾದ ಹೂವು. ಚಿಕ್ಕಂದಿನಲ್ಲಿ ಕೆರೆ ,ಹೊಳೆತೀರದಲ್ಲಿ ಹುಲುಸಾಗಿ ಬೆಳೆಯುವ ಕೇದಿಗೆ ಹೂವಿನ ಗಿಡಗಳು ಇತ್ತೀಚಿಗೆ ಕಾಣಲು ಅಪರೂಪವಾಗಿದೆ . ಹಿಂದೆ ಹಲವು ಕಡೆ ವಿಸ್ತಾರದ ಕೇದಿಗೆ ಬನಗಳಿರುತ್ತಿದ್ದವು.
ಕೇದಿಗೆಯು ದೊಡ್ಡ ದೊಡ್ಡ ಪೆÇದೆಗಳಲ್ಲಿ ಮಧ್ಯ ದಿಂಡುಗಳನ್ನು ಹೊಂದಿದ ಗಿಡ. ಉದ್ದನೆಯ ಬಿಳಿ ಮತ್ತು ಹಳದಿ ಬಣ್ಣದ ಎಲೆಗಳ ಅಲಗಿನಂಚಲ್ಲಿ ಚೂಪಾದ ಮುಳ್ಳುಗಳನ್ನೂ ಹೊಂದಿರುತ್ತದೆ.
ನಾಗದೇವರಿಗೆ ಕೇದಿಗೆ ಪುಷ್ಪವು ಅತ್ಯಂತ ಪ್ರಿಯವೆಂಬ ಕಾರಣಕ್ಕಾಗಿ ನಾಗರ ಪಂಚಮಿಯಂದು ಕೇದಿಗೆಹೂವಿಗೂ ಬೇಡಿಕೆ ತುಂಬಾನೇ ಹೆಚ್ಚಾಗಿರುತ್ತದೆ. ಮಹಾಲಕ್ಷ್ಮೀಗೆ ಕೇದಿಗೆ ಹೂ ಅತ್ಯಂತ ಪ್ರಿಯವಾದದ್ದು.ಆದ್ದರಿಂದ ಶ್ರಾವಣದಲ್ಲಿ ಮಹಾಲಕ್ಷ್ಮೀ ಪೂಜೆಗೆ ಈ ಹೂ ಅಗತ್ಯ ಎಂದು ಭಾವಿಸಲಾಗುತ್ತದೆ.