15ರಂದು ಪತ್ರಿಕಾ ದಿನಾಚರಣೆ:ರಾಜ್ಯಮಟ್ಟದ ಗುರುದೇವ ಪ್ರಶಸ್ತಿ ಜಗದೀಶ್, ಡಾ.ಧರ್ಮಣ್ಣ ಆಯ್ಕೆ
ಜೇವರ್ಗಿ: ಆ.9:ಇದೆ 15ರಂದು ನಡೆಯುವ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ಗುರುದೇವ ಪ್ರಶಸ್ತಿಗೆ ದಾನಮ್ಮ ಕಾಲೇಜಿನ ಪ್ರಾಚಾರ್ಯ ಜಗದೀಶ್ ಎಸ್ ಉಕನಾಳಕರ್ ಹಾಗೂ ಮಹಾಲಕ್ಷ್ಮೀ ಕಾಲೇಜಿನ ಪ್ರಾಚಾರ್ಯ ಡಾ.ಧರ್ಮಣ್ಣ ಕೆ ಬಡಿಗೇರ ಕರಕಿಹಳ್ಳಿ ಆಯ್ಕೆ ಆಗಿದ್ದಾರೆ ಎಂದು ಕರ್ನಾಟಕ ಜನರ್ಲಿಸ್ಟ್ ಯೂನಿಯನ್ ಅಧ್ಯಕ್ಷ ಮರೆಪ್ಪ ಬೇಗಾರ ತಿಳಿಸಿದ್ದಾರೆ.
ಪಟ್ಟಣದ ಕನ್ನಡ ಭವನದಲ್ಲಿ ಹಮ್ಮಿಕೊಂಡ ಪತ್ರಿಕಾ ದಿನಾಚರಣೆ ಕಾರ್ಯಕ್ರಮವು ಬಲು ಅದ್ದೂರಿಯಾಗಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಸಂಸದ ಡಾ.ರಾಧಾಕೃಷ್ಣ ದೊಡ್ಡಮನಿ ಹಾಗೂ ಹರಗುರು ಚರಮೂರ್ತಿಗಳ ವೇದಿಕೆಯಲ್ಲಿ ಕಾರ್ಯಕ್ರಮ ಜರುಗಲಿದೆ ಎಂದು ಹೇಳಿದರು.
ಇದೆ ಸಂದರ್ಭದಲ್ಲಿ ರಾಜ್ಯಮಟ್ಟದ ಗುರುದೇವ ಪ್ರಶಸ್ತಿಗೆ ಡಾ.ಧರ್ಮಣ್ಣ ಕೆ ಬಡಿಗೇರ ಕರಕಿಹಳ್ಳಿ, ಪ್ರಾಚಾರ್ಯ ಜಗದೀಶ್ ಎಸ್ ಉಕನಾಳಕರ್ ಆಯ್ಕೆಯಾಗಿದ್ದಾರೆ.ಸಮಾಜ ಸೇವಾ ರತ್ನ ಪ್ರಶಸ್ತಿಗೆ ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಶಾಂತಪ್ಪ ಕೂಡಲಗಿ,ಮಾಧ್ಯಮ ರತ್ನ ಈರಣ್ಣ ಹಾದಿಮನಿ,ದಕ್ಷ ಅಧಿಕಾರಿ ಡಿ ಬಿ ಪಾಟೀಲ್, ಕನ್ನಡ ಸಾಹಿತ್ಯ ರತ್ನ ಎಸ್ ಕೆ ಬಿರಾದಾರ, ಕಲಾ ರತ್ನ ಸುಧಾ ಭ ಬೆಣ್ಣೂರರವರು ಆಯ್ಕೆಯಾಗಿದ್ದಾರೆ.
ಪ್ರಶಸ್ತಿ ವಿಜೇತರಿಗೆ ಇದೆ 15ರಂದು ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ರಾಜಕೀಯ ಗಣ್ಯರು,ಸಂಸದರು,ಶಾಸಕರು ಹಾಗೂ ಸಮಾಜ ಸೇವಕರು,ವಿವಿಧ ಸಂಘ ಸಂಸ್ಥೆಗಳ ಮುಖಂಡರು ಕಾರ್ಯಕ್ರಮಕ್ಕೆ ಸಾವಿರಾರು ಜನರು ಭಾಗಿಯಾಗಲಿದ್ದಾರೆ ಎಂದು ಮರೆಪ್ಪ ಬೇಗಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾರೋಟನಲ್ಲಿ ಭವ್ಯ ಮೆರವಣಿಗೆ
ನಾಲ್ಕು ಗೊಡೆಯ ಒಳಗೆ ಇದ್ದು,ಭವ್ಯ ಭಾರತದ ನಾಗರಿಕರನ್ನು ರೂಪಿಸುತ್ತಿರುವ ಗುರುವರ್ಯರುಗಳಾದ ಪ್ರಾಚಾರ್ಯ ಜಗದೀಶ್ ಎಸ್ ಉಕನಾಳಕರ್ ಹಾಗೂ ಡಾ.ಧರ್ಮಣ್ಣ ಕೆ ಬಡಿಗೇರ ರವರನ್ನು ಮಿನಿ ವಿಧಾನಸೌಧದಿಂದ ಕನ್ನಡ ಭವನದವರೆಗೆ ಸಾರೋಟನಲ್ಲಿ ಭವ್ಯ ಮೇರವಣಿಗೆ ನಡೆಯಲಿದೆ.