ಬಾಂಗ್ಲಾ ಅಸ್ಥಿರತೆ; ಹಿಂದೂಗಳ ರಕ್ಷಣೆಗೆ ವಿಎಚ್‍ಪಿ ತಾಕೀತು
ಕಲಬುರಗಿ:ಆ.9- ಬಾಂಗ್ಲಾದೇಶದಲ್ಲಿ ಉದ್ಭವಿಸಿರುವ ರಾಜಕೀಯಅಸ್ಥಿರತೆಯಿಂದಾಗಿ ಅಲ್ಲಿನಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಿರಂತರದೌರ್ಜನ್ಯ ನಡೆಯುತ್ತಿದ್ದು, ಕೂಡಲೇಕೇಂದ್ರ ಸರಕಾರ ಬಾಂಗ್ಲಾ ಹಿಂದೂಗಳ ರಕ್ಷಣೆಗೆ ಮುಂದಾಗಬೇಕೆಂದು ವಿಶ್ವ ಹಿಂದೂ ಪರಿಷತ್‍ಕರ್ನಾಟಕಉತ್ತರ ಪ್ರಾಂತಅಧ್ಯಕ್ಷ ಲಿಂಗರಾಜಪ್ಪಅಪ್ಪಾ ಒತ್ತಾಯಿಸಿದರು.
ಇಲ್ಲಿನಪತ್ರಿಕಾ ಭವನದಲ್ಲಿಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದಅವರು, ಬಾಂಗ್ಲಾದೇಶದಲ್ಲಿಅಲ್ಪಸಂಖ್ಯಾತ ಹಿಂದೂಗಳ ಸುರಕ್ಷತೆ ಮತ್ತು ಮಾನವ ಹಕ್ಕುಗಳ ಸಂರಕ್ಷಣೆಗೆಕೇಂದ್ರ ಸರಕಾರತಕ್ಷಣಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಜನರಿಂದಚುನಾಯಿತರಾಗಿದ್ದಅಲ್ಲಿನ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿದೇಶತೊರೆದ ಬೆನ್ನಲ್ಲೇಅರಾಜಕತಾವಾದಿಗಳು ಅಧಿಕಾರ ವಹಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳಆಂದೋಲನ ರೂಪದಲ್ಲಿ ಮೊದಲುಗೊಂಡದಂಗೆ ಬಳಿಕ ಅರಾಜಕತಾವಾದಿಗಳ ಕೈವಶವಾಗಿ ಅಲ್ಲಿನಅಲ್ಪಸಂಖ್ಯಾತ ಹಿಂದೂಗಳು ಕಿರುಕುಳ ಅನುಭವಿಸುವಂತಾಗಿದೆ. ಇದರಜೊತೆಗೆ, ಬಾಂಗ್ಲಾದೇಶದಲ್ಲಿ ಹಿಂದೂಧಾರ್ಮಿಕ ಸ್ಥಳಗಳು, ವ್ಯಾಪಾರ ಸಂಸ್ಥೆಗಳು ಮತ್ತು ಹಿಂದೂಗಳ ಮನೆಗಳಷ್ಟೇ ಅಲ್ಲದೆ, ಚಿತಾಗಾರಗಳನ್ನು ಗುರಿಯಿಟ್ಟುಕೊಂಡು ದಾಳಿ ಮಾಡಲಾಗುತ್ತಿದೆಎಂದುಅಪ್ಪಾಜಿ ಬೇಸರ ವ್ಯಕ್ತಪಡಿಸಿದರು.
ಆ ದೇಶದಲ್ಲಿ ಆಗಾಗ ಅರಾಜಕತೆಸೃಷ್ಟಿಯಾಗುತ್ತಲೇಇರುತ್ತದೆ.ಹೀಗೆ ಕಾಲಕಾಲಕ್ಕೆ ಸಂಭವಿಸುವ ದಂಗೆ ಮತ್ತು ದೊಂಬಿಗಳಿಂದಾಗಿ ಈ ಹಿಂದೆ ಶೇ.32ರಷ್ಟಿದ್ದ ಹಿಂದೂಗಳ ಸಂಖ್ಯೆ ಈಗ ಶೇ.8ಕ್ಕೆ ಕುಸಿದಿದೆ.ಮೇಲಾಗಿ, ಈಗಲೂ ಹಿಂದೂಗಳು ಜಿಹಾದಿಗಳ ಕಿರುಕುಳಕ್ಕೆ ಬಲಿಯಾಗುತ್ತಿದ್ದಾರೆಎಂದು ವಿಷಾದ ಸೂಚಿಸಿದರು.
ಚುನಾಯಿತ ಸರಕಾರವನ್ನು ಬುಡಮೇಲು ಮಾಡಿ ಅಸ್ತಿತ್ವಕ್ಕೆ ಬಂದಿರುವ ಮಧ್ಯಂತರ ಸರಕಾರದಿಂದಾಗಿ ಬಾಂಗ್ಲಾದೇಶದಲ್ಲಿಭಾರತ ವಿರೋಧಿ ಜಿಹಾದಿಗಳ ಚಟುವಟಿಕೆ ಉಲ್ಬಣಗೊಳ್ಳುವ ಎಲ್ಲ ಲಕ್ಷಣಗಳಿವೆ. ಮೇಲಾಗಿ, ಜಿಹಾದಿ ಮನಸ್ಥಿತಿಯ ಭಯೋತ್ಪಾದಕರು ಭಾರತದಗಡಿಯ ಮೂಲಕ ಒಳನುಸುಳುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಭಾರತೀಯ ಸೇನೆಯನ್ನು ಸನ್ನದ್ಧ ಸ್ಥಿತಿಯಲ್ಲಿಡಬೇಕು. ಜೊತೆಗೆ, ಆ ದೇಶದಲ್ಲಿ ಪ್ರಜಾಪ್ರಭುತ್ವ ಮತ್ತುಜಾತ್ಯತೀತ ಸರಕಾರರಚನೆಗೆ ಭಾರತಒತ್ತು ನೀಡಬೇಕೆಂದು ಲಿಂಗರಾಜಪ್ಪಅಪ್ಪಾಜಿ ಸಲಹೆ ನೀಡಿದರು.
ವಿಎಚ್‍ಪಿ ಕರ್ನಾಟಕಉತ್ತರ ಪ್ರಾಂತ ಕಾರ್ಯದರ್ಶಿ ಶಿವರಾಜ ಬೋಳಶೆಟ್ಟಿ, ಜಿಲ್ಲಾಧ್ಯಕ್ಷ ಶ್ರೀಮಂತ (ರಾಜು) ನವಲದಿ, ಪ್ರಶಾಂತಗುಡ್ಡಾ ಹಾಗೂ ಸತೀಶ್ ಮಾಹೂರ್ ಉಪಸ್ಥಿತರಿದ್ದರು.