ಇಷ್ಟಲಿಂಗಾರಾಧನೆ ಸಂಸ್ಕøತಿಯು ಪೂರ್ವಕಾಲದ ಅಪೂರ್ವಕೊಡುಗೆ :ಡಾ: ರಾಜಶೇಖರ ಶಿವಾಚಾರ್ಯರು
ಬೀದರ:ಆ.9:ದೇಹದ ಮೇಲೆ ಲಿಂಗಧರಿಸಿ ಅರ್ಚಿಸುವ ಇಷ್ಟಲಿಂಗರಾಧನೆಯು ಯುಗಯುಗಾಂತರ ಕಾಲದ ದಿವ್ಯಭವ್ಯ ಸಂಸ್ಕøತಿಯಾಗಿದೆ ಎಂದು ಬೇಮಳಖೇಡ ಹಿರೇಮಠದ ಶ್ರೀ ಷ.ಬ್ರ ಡಾ|| ರಾಜಖೇಖರ ಶಿವಾಚಾರ್ಯರು ಅಭಿಪ್ರಾಯಪಟ್ಟರು,
ಅವರು ಬೀದರ ಹತ್ತಿರದ ಕಂಗನಕೋಟ ಗ್ರಾಮದಲ್ಲಿ ಶ್ರಾವಣ ಶಿವ-ದರ್ಶನ ಸಂಚಾರ ಶ್ರೀ ಸಿದ್ದಾಂತ ಶಿಖಾಮಣಿ ಅಭಿಯಾನದ ನಿಮಿತ್ತ ಏರ್ಪಡಿಸಿದ ಶಿವದೀಕ್ಷಾ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿದರು. ವೀರಶೈವ ಲಿಂಗಾಯತ ಧರ್ಮದ ಪ್ರಸ್ತಾನತ್ರಯಗಳಾದ ಇಪ್ಪತ್ತೆಂಟು ಶಿವಾಗಮಗಳು ಶ್ರೀ ಸಿದ್ಧಾಂತ ಶಿಖಾಮಣಿ, ವಚನ ವಾಙ್ಮಯಗಳಲ್ಲಿ ಇಷ್ಟಲಿಂಗಾರಾಧನೆಯ ಪ್ರಾಚೀನ ಉಲ್ಲೇಖಗಳು ಹೇರಳವಾಗಿದೆ. ಸೃಷ್ಟ್ರೀಕರ್ತಬ್ರಹ್ಮ, ಪರಿಪಾಲಕ ವಿಷ್ಣು, ಲಯಕರ್ತ ಮಹೇಶ್ವರರು ಮತ್ತು ಸರಸ್ವತಿ ಮಹಾಲಕ್ಷ್ಮೀ ಮಹೇಶ್ವರಿಯಲ್ಲದೆ ದೇವಾನುದೇವತೆಗಳೆಲ್ಲರೂ, ಗೌತಮಾದಿ ಋಷಿ ಮುನಿಗಳು ಮತ್ತು ಸುರಾಸುರರು ಶಿವ ಪ್ರತೀಕವಾದ ಇಷ್ಟಲಿಂಗವನ್ನು ತಮ್ಮ ಉತ್ತಮಾಂಗದಲ್ಲಿ ಧರಿಸಿ ಪೂಜಿಸಿದರೆಂದು ಶ್ರೀ ಸಿದ್ಧಾಂತ ಶಿಖಾಮಣಿ ಉಕ್ತಗೊಳಿಸುತ್ತದೆ.