ಕಾಲುವೆ ಕಾಮಗಾರಿ ಕಳಪೆ ; ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ
ತಾಳಿಕೋಟೆ:ಆ.9:ತಾಲೂಕಿನ ಭಂಟನೂರ ಗ್ರಾಮದ ಹತ್ತಿರ ಮುಳವಾಡ ಏತ ನೀರಾವರಿಗೆ ಸಂಬಂಧಿಸಿದ ಕಾಲುವೆಗಳನ್ನು ಕಳಪೆ ಗುಣಮಟ್ಟದಿಂದ ನಿರ್ಮಿಸಿದ್ದರಿಂದ ಕಾಲುವೆಗಳು ಅಲ್ಲಲ್ಲಿ ಒಡೆದು ಕಾಲುವೆಯಲ್ಲಿಯ ನೀರು ಜಮೀನುಗಳಿಗೆ ನುಗ್ಗಿ ಅಪಾರ ಪ್ರಮಾಣ ಹಾನಿ ಸಂಬವಿಸಿದ್ದು ಈ ಕುರಿತು ಕ್ರಮಕ್ಕೆ ಆಗ್ರಹಿಸಿ ರೈತರು ಸಂಬಂದಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನೆಗೆ ಬಾರದ್ದರಿಂದ ಕುಪಿತಗೊಂಡ ರೈತರು ಜಯ ಕರ್ನಾಟಕ ಸಂಘಟನೆಯ ನೇತೃತ್ವದಲ್ಲಿ ಗುರುವಾರರಂದು ಆಲಮಟ್ಟಿ ಕೆಬಿಜೆಎನ್‍ಎಲ್ ಮುಖ್ಯ ಅಭಿಯಂತರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ಮುಳವಾಡ ಏತ ನೀರಾವರಿಗೆ ಸಂಬಂಧಿಸಿದ 180 ಕೀಮಿ ದಿಂದ 193 ಕೀಮಿ ವರೆಗಿನ ಹಾಗೂ ಮುಂದುವರೆದ ಕಾಮಗಾರಿಯ ಗುತ್ತಿಗೆದಾರರಾದ ಆದಿತ್ಯ ಕನಸ್ಪಕ್ಷನ ಗುತ್ತಿಗೆದಾರರಿದ್ದು ಕಾಮಗಾರಿಯೂ ಸಂಪೂರ್ಣ ಕಳಪೆ ಮಟ್ಟದಿಂದ ನಿರ್ಮಾಣ ಮಾಡಲಾಗಿದೆ ಎಂದು ಆರೋಪಿಸಿರುವ ಜಯ ಕರ್ನಾಟಕ ಸಂಘಟನೆಯ ನೇತೃತ್ವದಲ್ಲಿ ತೆರಳಿದ ರೈತರು ಮುಖ್ಯ ಅಭಿಯಂತರರನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡಿರುವದು ಬೆಳಕಿಗೆ ಬಂದಿದೆ.
ಈ ಹಿಂದೆಯೂ ಕಾಲುವೆ ಕಳಪೆ ಕಾಮಗಾರಿಯಿಂದ ರೈತರಿಗೆ ತುಂಬಾ ಹಾನಿಯುಂಟಾಗುತ್ತಿದ್ದು ಕೂಡಲೇ ಕ್ರಮ ಜರುಗಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ, ಆಲಮಟ್ಟಿ ಕೆಬಿಜೆಎನ್‍ಎಲ್ ಮುಖ್ಯ ಅಭಿಯಂತರರಿಗೆ ಜಯಕರ್ನಾಟಕ ಸಂಘಟನೆಯ ನೇತೃತ್ವದಲ್ಲಿ ಮನವಿಯನ್ನು ಸಲ್ಲಿಸಿ ಸೂಕ್ತ ಕ್ರಮಕ್ಕೆ ಕಾಲವಕಾಶವನ್ನು ನೀಡಿದ್ದರು. ಆದರೂ ಕೂಡಾ ಅಧಿಕಾರಿಗಳು ಸ್ಥಳ ವಿಕ್ಷಣೆಯನ್ನೂ ಕೂಡಾ ಮಾಡದೇ ಬೇಜವಾಬ್ದಾರಿ ತೋರಿದ್ದರಿಂದ ಗುರುವಾರರಂದು ಆಲಮಟ್ಟಿ ಕೆಬಿಜೆಎನ್‍ಎಲ್ ಕಚೇರಿಗೆ ತೆರಳಿದ ಜಯಕರ್ನಾಟಕ ಸಂಘಟನೆಯ ನೇತೃತ್ವದಲ್ಲಿ ನೂರಾರು ರೈತರು ಕೆಲಕಾಲ ಧರಣಿಯನ್ನು ನಡೆಸಿದರಲ್ಲದೇ ಕಾಮಗಾರಿ ನಿರ್ವಹಣೆಯಲ್ಲಿ ಬೇಜವಾಬ್ದಾರಿ ತೋರಿದ ಅಧಿಕಾರಿಗಳ ವಿರೂದ್ದ ಘೋಷಣೆಗಳ ಹಾಕಿದರು.
ಈ ಸಮಯದಲ್ಲಿ ಜಯ ಕರ್ನಾಟಕ ಸಂಘಟನೆಯ ತಾಳಿಕೋಟೆ ತಾಲೂಕಾ ಅಧ್ಯಕ್ಷ ಬಸವರಾಜ ಸಿಂಗನಹಳ್ಳಿ ಅವರು ಮಾತನಾಡಿ ಮುಳವಾಡ ಏತ ನೀರಾವರಿ ಯೋಜನೆಗೆ ಸಂಬಂದಿಸಿ ತಾಳಿಕೋಟೆ ತಾಲೂಕಿನ ಭಂಟನೂರ ಗ್ರಾಮದ ಹತ್ತಿರ ನಿರ್ಮಿಸಲಾದ ಕಾಲುವೆ ಕಾಮಗಾರಿಯು ಕಳಪೆಮಟ್ಟದಿಂದ ಕೂಡಿದ್ದು ಹಾಗೂ ಕಾಮಗಾರಿಯನ್ನು ಪೂರ್ಣಗೊಳಿಸದೇ ಇರುವದರಿಂದ ಸಂಬಂದಪಟ್ಟ ಗ್ರಾಮಗಳಾದ ಗೋಟಖಂಡಿ ಭಂಟನೂರ ಗಡಿ ಸೋಮನಾಳ ಕಾರಗನೂರ ಕೊಡಗಾನೂರ ಗುಂಡಕನಾಳ ಗ್ರಾಮಗಳ ರೈತರಿಗೆ ಕಾಲುವೆಯ ಯಾವುದೇ ರೀತಿಯ ಸದ್ಬಳಕೆ ಆಗುತ್ತಿಲ್ಲ. ರೈತರು ಕಾಲುವೆಗಾಗಿ ಅಪಾರ ಪ್ರಮಾಣದ ಭೂಮಿಯನ್ನು ಕಳೆದುಕೊಂಡಿರುತ್ತಾರೆ. ಆದರೂ ಉಳಿದ ಅಲ್ಪ ಜಮೀನಿನಲ್ಲಿ ಬೆಳೆ ಬೆಳೆಯಲು ನೀರು ಸಿಗುತ್ತಿಲ್ಲ ಜಾನುವಾರುಗಳಿಗೂ ನೀರಿನ ತೊಂದರೆ ಇದೆ. ಈಗಾಗಲೇ ರೈತರು ಇಲಾಖೆಗೆ ದಿನಾಂಕ 19-03-2024 ಪ್ರಾಯೋಗಿಕವಾಗಿ ನೀರು ಹರಿಸಿದಾಗ ತೊಂದರೆಗೊಳಗಾದ ರೈತರು ಸಂಬಂದಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ ಯಾವುದೇ ಕ್ರಮ ಅಧಿಕಾರಿಗಳು ಜರುಗಿಸದಿದ್ದಾಗ ನಮ್ಮ ಜಯ ಕರ್ನಾಟಕ ಸಂಘಟನೆ ತಾಳಿಕೋಟಿ ತಾಲೂಕು ಘಟಕ ಅಧ್ಯಕ್ಷರನ್ನು ರೈತರು ಸಂಪರ್ಕಿಸಿ ವಿಷಯ ತಿಳಿಸಿದಾಗ ಸೂಕ್ತ ಕ್ರಮಕ್ಕೆ ದಿ. 12-06-2024 ರಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು ಇರುತ್ತದೆ. ಆದರೆ ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಳ್ಳದೇ ಇರುವದರಿಂದ, ಮತ್ತು ಅಧಿಕಾರಿಗಳಿಗೆ ನೀಡಿರುವ ಕಾಲಾವಧಿ ಮುಗಿದಿದ್ದರಿಂದ ಜಯ ಕರ್ನಾಟಕ ಸಂಘಟನೆಯ ನೇತೃತ್ವದಲ್ಲಿ ನೂರಾರು ರೈತರು ಆಲಮಟ್ಟಿಯ ಪೆÇೀಸ್ಟ ಆಫೀಸ ಸರ್ಕಲ್‍ದಿಂದ ಮುಖ್ಯ ಇಂಜಿನಿಯರ್ ಕಛೇರಿಯವರೆಗೆ ಪಾದಯಾತ್ರೆ ಮೂಲಕ ಬಂದು ಧರಣಿಯನ್ನು ನಡೆಸುವ ಅನಿವಾರ್ಯತೆ ಬಂದಿದೆ ಎಂದ ಅವರು ಕೂಡಲೇ ಕೆಬಿಜೆಎನ್‍ಎಲ್ ಅಧಿಕಾರಿಗಳು ಸ್ಥಳ ವಿಕ್ಷಣೆ ಮಾಡಿ ತಪ್ಪಿತಸ್ಥ ಗುತ್ತಿಗೆದಾರರ ಮೇಲೆ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ ಅವರು ಕಾಲುವೆಯ ಒಳ ಹರಿವಿನ ಪ್ರಮಾಣವನ್ನು ಹೆಚ್ಚಿಸಿ ಕೊನೆಯ ಗ್ರಾಮದ ವರೆಗೂ ನೀರು ಹರಿಯುವಂತೆ ಅಚ್ಚಾಕಟ್ಟಾದ ಕಾಮಗಾರಿಯನ್ನು ನಿರ್ವಹಿಸಬೇಕೆಂದು ಒತ್ತಾಯಿಸಿದರು.
ಈ ಸಮಯದಲ್ಲಿ ಜಯ ಕರ್ನಾಟಕ ಸಂಘಟನೆಯ ತಾಲೂಕಾ ಅಧ್ಯಕ್ಷ ಬಸವರಾಜ ಸಿಂಗನಹಳ್ಳಿ, ಸಂಗನಗೌಡ ಮೂಲಿಮನಿ, ಸೋಮನಗೌಡ ಆನೇಸೂರ, ನಿಂಗಪ್ಪ ನಾಗೂರ, ಬಸವರಾಜ ತಳ್ಳೊಳ್ಳಿ, ಮಲ್ಲನಗೌಡ ಬಿರಾದಾರ, ಪ್ರಭುಗೌಡ ಬಿರಾದಾರ, ಬಸನಗೌಡ ಕೊಳೂರ, ರಾಜುಗೌಡ ಯಾತಗಿರಿ, ಕನಕರೆಡ್ಡೆಪ್ಪಗೌಡ ಕನಕರೆಡ್ಡಿ, ಸಿದ್ದನಗೌಡ ನಾವದಗಿ, ಒಳಗೊಂಡು ನೂರಾರು ರೈತರು ಇದ್ದರು.