ಲಗೋರಿ ಆಟದ ಸ್ಪರ್ದೆಯಲ್ಲಿ ವಿದ್ಯಾರ್ಥಿನಿಯರು ವಿಜೇತ
ತಾಳಿಕೋಟೆ:ಆ.9: ಪಟ್ಟಣದ ಶ್ರೀ ಖಾಸ್ಗತೇಶ್ವರ ಕಲಾ ಹಾಗೂ ವಾಣಿಜ್ಯ, ವಿಜ್ಞಾನ ಮಹಾ ವಿದ್ಯಾಲಯದಲ್ಲಿ ಸಾಂಸ್ಕøತಿಕ ಹಾಗೂ ಚರ್ಚಾಕೂಟ ವಿಭಾಗ ಮತ್ತು ಕ್ರೀಡಾ ವಿಭಾಗಗಳ ಸಹಯೋಗದಲ್ಲಿ ಸಾಂಪ್ರದಾಯಿಕ ಆಟವಾದ “ಲಗೋರಿ ಆಟದ ಸ್ಪರ್ಧೆ”ಯನ್ನು ಆಯೋಜಿಸಲಾಯಿತು.
ಸ್ಪರ್ಧೆಯಲ್ಲಿ ಮಹಾವಿದ್ಯಾಲಯದಿಂದ ಬಿ.ಎ. ವಿಭಾಗದಿಂದ 2 ತಂಡ, ಬಿ.ಕಾಂ 1 ಮತ್ತು ಬಿ.ಎಸ್ಸಿ.1 ಹೀಗೆ ಒಟ್ಟು ನಾಲ್ಕು ತಂಡಗಳು ಭಾಗವಹಿಸಿದ್ದವು. ಸುಮಾರು 2 ಘಂಟೆಗಳ ಕಾಲ ನಡೆದ ಸ್ಪರ್ಧೆಯಲ್ಲಿ ಅಂತಿಮವಾಗಿ ಬಿ.ಎಸ್ಸಿ. 2ನೇ ಸೆಮಿಸ್ಟರನ ವಿದ್ಯಾರ್ಥಿನಿಯರು ಅತೀ ಹೆಚ್ಚು ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಪಡೆದುಕೊಂಡರು. ಬಿ.ಎ.4ನೇ ಸೆಮಿಸ್ಟರನ ವಿದ್ಯಾರ್ಥಿನಿಯರು ರನ್ನರ್‍ಅಪ್ ಆಗಿ ಹೊರಹೊಮ್ಮಿದರು.
ಈ ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಎಲ್ಲ ಬೋಧಕ/ಬೋಧಕೇತರ ಸಿಬ್ಬಂದಿವರ್ಗ ಹಾಗೂ ಎಲ್ಲ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.