ಪರಶುರಾಮ ಪಿ ಎಸ್ ಐ ಗೆ ಶೃದ್ಧಾಂಜಲಿ
ಆಳಂದ :ಆ.9: ಪಟ್ಟಣದಲ್ಲಿ ದಿವಂಗತ ಪರಶುರಾಮ ಚಲುವಾದಿಯವರಿಗೆ ಶೃದ್ಧಾಂಜಲಿ ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ಅಮರ ಜ್ಯೋತಿ ಬಂತೆ ಜಿ ಮಾತನಾಡಿ ಪರಶುರಾಮ ರವರಆತ್ಮಕ್ಕೆ ಶಾಂತಿ ಸಿಗಲೆಂದು ಬುದ್ಧ ಬಸವ ಅಂಬೇಡ್ಕರ್ ಅವರಲ್ಲಿ ಪ್ರಾರ್ಥಿಸಿದರು ,
ಸಾವಿನ ಬಗ್ಗೆ ಸೂಕ್ತ ತನಿಖೆ ನಡೆಯಬೇಕೆಂದು ಒತ್ತಾಯಿಸಿದರು, ಬಾಬುರಾವ ಅರುಣೋದಯ ಮಾತನಾಡಿ 25 ಕೋಟಿ ರೂ ಪರಿಹಾರ ನೀಡಬೇಕು ಮತ್ತುಅವರ ಪತ್ನಿಗೆ ಸರ್ಕಾರಿ ಹುದ್ದೆ ನೀಡಬೇಕೆಂದು ಬೇಡಿಕೆ ಇಟ್ಟರು. ಕಲ್ಯಾಣಿ ದೇವಂತಗಿ ಮಾತನಾಡಿ ಕಾಂಗ್ರೆಸ್ ಸರ್ಕಾರ ದಲಿತರ ಹೆಸರಿನಲ್ಲಿ ಮತ ಪಡೆದು ದಲಿತರ ರಕ್ಷಣೆ ನೀಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಮಾನ್ಯ ಗೃಹ ಸಚಿವರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಶ್ರೀ ವಿಶ್ವನಾಥ ಕೊರಣೆಶ್ವರ ಶ್ರೀಗಳು, ಧರ್ಮಾ ಬಂಗರಗಿ, ಪ್ರವೀಣ ಮೊದಲೆ ರಮೇಶ ಲೋಹಾರ, ಶಿವಪ್ಪ ತೋಳೆ ಶ್ರೀಶೈಲ ನೈಕೋಡಿ ಶಿವಕುಮಾರ ಚಿಂಚೋಳಿ ಮಲ್ಲಿಕಾರ್ಜುನ ಬಾಳ್ಳಿ ಮುಂತಾದವರು ಉಪಸ್ಥಿತರಿದ್ದರು