ಇನ್ನೋವಾ ಕಾರ್ ಹಾಯ್ದು ಬೈಕ್ ಸವಾರ ಸಾವು
ವಿಜಯಪುರ,ಆ.9:ಆಕ್ಟಿವಾ ಬೈಕ್ ಹಾಗೂ ಇನ್ನೋವಾ ಕಾರ್ ಮಧ್ಯೆ ಡಿಕ್ಕಿ ಸಂಭವಿಸಿ ಇನ್ನೋವಾ ವಾಹನದ ಅಡಿಯಲ್ಲಿ ಬೈಕ್ ಸವಾರ ಸಿಲುಕಿ ಸಾವನಪ್ಪಿದ ಘಟನೆ ನಗರದ ಮನಗೂಳಿ ಅಗಸಿ ಬಳಿ ನಡೆದಿದೆ.
ರವಿ ಮೇಲಿನಮನಿ (37) ಮೃತ ಬೈಕ್ ಸವಾರ.
ಅಪಘಾತದ ಬಳಿಕ ಎರಡೂವರೆ ಕಿಲೋ ಮೀಟರ್ ವರೆಗೆ ಮನಗೂಳಿ ಅಗಸಿಯಿಂದ ಜಿ.ಪಂ. ಕಚೇರಿ ಮುಖ್ಯ ದ್ವಾರದವರೆಗೂ ಬೈಕ್ ಸವಾರನನ್ನು ಇನ್ನೋವಾ ಕಾರ್ ಎಳೆದೊಯ್ದಿದೆ. ಇದರಿಂದಾಗಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ರವಿ ನ್ಯಾಯವಾದಿಯಾಗಿ ಕಳೆದ ಎರಡು ವರ್ಷದಿಂದ ಕೆಲಸ ಮಾಡುತ್ತಿದ್ದರು.
ಅಪಘಾತದ ಬಳಿಕ ಇನ್ನೋವಾ ಅಡಿಯಲ್ಲಿ ಸಿಲುಕಿದ್ದ ರವಿಯ ಶವ ಬೇರ್ಪಟ್ಟ ಬಳಿಕ ಇನ್ನೋವಾ ಚಾಲಕ ವಾಹನ ಸಮೇತ ಸ್ಥಳದಿಂದ ಪರಾರಿಯಾಗಿದ್ದಾನೆ.
ಸ್ಥಳಕ್ಕೆ ಎಸ್ಪಿ ಋಷಿಕೇಶ ಸೋನಾವಣೆ, ಎಎಸ್ಪಿ ಶಂಕರ ಮಾರಿಹಾಳ, ಡಿವೈಎಸ್ಪಿ ಬಸವರಾಜ ಯಲಿಗಾರ ಹಾಗೂ ಇತರೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಯಾರೋ ವ್ಯವಸ್ಥಿತವಾಗಿ ಬೈಕ್ ಸವಾರ ರವಿಯನ್ನು ಈ ರೀತಿ ಕೊಲೆ ಮಾಡಿರಬಹುದು ಎಂದು ಆರೋಪ ಕೇಳಿ ಬಂದಿದೆ. ತನಿಖೆ ಬಳಿಕ ಘಟನೆ ಕುರಿತು ಹೆಚ್ಚಿನ ಮಾಹಿತಿ ದೊರೆಯಲಿದೆ ಎಂದು ಎಸ್ಪಿ ಋಷಿಕೇಶ ಸೋನಾವಣೆ ತಿಳಿಸಿದ್ದಾರೆ.
ಜಲನಗರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.