ಫೆಬ್ರವರಿಯಲ್ಲಿ ಗುಲ್ಬರ್ಗ ಸಿಮೆಂಟ್ ಕಂಪನಿ ಆರಂಭ
ಕಲಬುರಗಿ:ಆ.9: ಫೆಬ್ರವರಿಯಲ್ಲಿ ಗುಲ್ಬರ್ಗಸಿಮೆಂಟ್ ಕಾರ್ಯಭ ಗೊಳಿಸಲು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಗುರುವಾರ ನಡೆದ ಸಾರ್ವಜನಿಕ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.
ಫರಹತಾಬಾದ್ ಹತ್ತಿರ ಕಂಪನಿ ನಿರ್ಮಾಣದ ಸ್ಥಳದಲ್ಲಿ ನಡೆದ ಸಭೆಯಲ್ಲಿ ಜಮೀನು ಕಖೆದುಕೊಂಡ ರೈತರು ಹಾಗೂ ಸುತ್ತಲಿನ ಗ್ರಾಮಗಳ ರೈತರು ಸಭೆಯಲ್ಲಿ ಪಾಲ್ಗೊಂಡು ಸಲಹೆ ಸೂಚನೆ ನೀಡಿದರು.
ಪ್ರತಿ ಎಕರೆಗೆ 12 ಲಕ್ಷ ರೂ. ನೀಡಿ ಜಮೀನು ಖರೀದಿಸಲಾಗಿದ್ದು, 16 ಲಕ್ಷ ರೂ. ನೀಡುವಂತೆ ಮನವಿ ಮಾಡಿದರು.
250 ಹೆಕ್ಟರ್ ಜಮೀನು ಖರೀದಿಸಲಾಗಿದ್ದು, ವಾರ್ಷಿಕ 2 ಮಿಲಿಯನ್ ಟನ್ ಸಾಮಥ್ರ್ಯದ ಕ್ಲಿಂಕರ್ ಮತ್ತು 25 ಮಿಲಿಯನ್ ಟನ್ ಸಾಮಥ್ರ್ಯದ ಸಿಮೆಂಟ್ ಉತ್ಪಾದನೆ ಜೋತೆ ವಿದ್ಯುತ್ ತಯಾರುಕಾ ಘಟಕ ಸ್ಥಾಪಿಸಲಾಗುವುದು ಮತ್ತು ವಸತಿ ಕಾಲೋನಿ ನಿರ್ಮಿಸಲಾಗುವುದು ಎಂದು ಕಂಪನಿ ಅಧಿಕಾರಿಗಳು ಕಾರ್ಯಯೋಜನೆ ಕುರಿತು ಮಾಹಿತಿ ನೀಡಿದರು.
ಶೇ.38 ರಷ್ಟು ಪ್ರದೇಶವನ್ನು ಹಸಿರು ಪ್ರದೇಶಕ್ಕೆ ಮೀಸಲಿಡಲಾಗಿದೆ. ಇಲ್ಲಿವರೆಗೂ 8760 ಸಸಿ ನಡೆಲಾಗಿದೆ. ಸರ್ಕಾರದ ನಿಗದಿತ ಮಾನದಂಡದಂತೆ ಪರಿಸರ ಮಾಲಿನ್ಯ ನಿಯಂತ್ರಿಸಲು ಕಂಪನಿ ಸಿದ್ದತೆ ಮಾಡಿಕೊಂಡಿದೆ ಎಂದರು.
ಜಮೀನುಪಡೆದ ಹಳ್ಳಿಗಳಲ್ಲಿ ಹಾಗೂ ಸುತ್ತಲಿನ ಗ್ರಾಮಗಳಿಗೆ ಕಂಪನಿ ವತಿಯಿಂದ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ, ವೈದ್ಯಕೀಯ ಸೌಲಭ್ಯ ಒದಗುಸಲಾಗುವುದು. ಮಹಿಳಾ ಸಮಬಲೀಕರಣಕ್ಕಾಗಿ ಮಹಿಳೆಯರಿಗೆ ಹೊಲಿಗೆಯಂತ್, ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟಕಕಾಗಿ ವಿದ್ಯಾರ್ಥಿಗಳಿಗೆ ತಟ್ಟೆ, ಗ್ಲಾಸ್ ವಿತರಿಸಲಾಗುವುದು ಎಂದು ಕಂಪನಿಯ ಉದ್ದೇಶ ಕುರಿತು ಮಾಹಿತಿ ನೀಡಿದರು.
ನಂತರ ಜಿಲ್ಲಾಧಿಕಾರಿ ಭಿ.ಫೌಜಿಯಾ ತನರುಮ್ ಮಾತನಾಡಿ, ಜಮೀನು ನೀಡಿದ ರೈತರಿಗೆ ಎಲ್ಲ ಸೌಲಭ್ಯ ನೀಡಬೇಕು.ಸರ್ಕಾರದ ನಿಯಮ ಪಾಲಿಸಬೇಕು ಹಾಗೂ ಕಂಪನಿಯಲ್ಲಿ ಸ್ಥಳೀಯಯುವಕರಿಗೆ ಉದ್ಯೋಗ ಕಲ್ಪಿಸಿಕೊಡಬೇಕು ಎಂದುಕಂಪನಿ ಮ್ಯಾನೇಜರ್ ಪು.ಶ್ರೀನಿವಾಸ, ದಿನೇಶ ಬೋಹರಾ, ಹಿರಿಯ ಪರಿಸರ ನಿಯಂತ್ರಣಾಧಿಕಾರಿ ರೇಖಾ, ಕಂಪನಿಯ ಹಿರಿಯ ಅಧಿಕಾರಿ ಸತೀಶ ಕುಮಾರ ಹಾಗೂ ರೈತರು ಪಾಲ್ಗೊಂಡಿದ್ದರು.
ಹೊನ್ನಕಿರಣಗಿ ಗ್ರಾಮ ಪಂಚಾಯತಿ ಅಧ್ಯಕ್ಷ ಮಲ್ಲಿನಾಥ ಕೆ ಭೂಸ. ಫಿರೋಜೋಬಾದ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಸರ್ವ ಸದಸ್ಯರು. ರೈತರು ಮತ್ತು ರೈತ ಮುಖಂಡರಾದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಸಾಯಿಬಣ್ಣ ನೀಲಪಗೂಳ. ರಮೇಶ್ ನಾಟಿಕರ. ಬಸವರಾಜ್ ಚಟ್ಟಿ. ಶರಣಪ್ಪ ಕೆ ಬೂಸ. ಶಿವಯೋಗಪ್ಪ ಸೋಮಜಾಳ. ಮಷೇಕ್ ಪಟೇಲ್. ಲತೀಫ್ ಜಾಗಿರದಾರ. ಸಿದ್ದಣ್ಣ ಅರಳಿ ಮಾತನಾಡಿದರು