ಸರಕಾರಿ ಶಾಲೆಗಳಿಗೆ ಕ್ರೀಡಾಭಿವೃದ್ದಿ ಕಾರ್ಯಕ್ರಮ ಜಾರಿ
ಕಲಬುರಗಿ,ಸೆ.30-ಅಶೋಕ ಲೈಯಲ್ಯಾಂಡ್, ಲರ್ನಿಂಗ್ ಲಿಂಕ್ಸ್ ಫೌಂಡೇಶನ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಚಿತ್ತಾಪೂರ ತಾಲೂಕಿನ 242 ಶಾಲೆಗಳಲ್ಲಿ ರೋಡ್ ಟು ಸ್ಕೂಲ್ ಕಾರ್ಯಕ್ರಮ ಅನುಷ್ಠಾನಗೊಳ್ಳುತ್ತಿದೆ. ಈ ಕಾರ್ಯಕ್ರಮದಡಿಯಲ್ಲಿ ಪ್ರತಿಯೊಂದು ಸರಕಾರಿ ಶಾಲೆಗಳಲ್ಲಿನ ಮಕ್ಕಳು ಉತ್ತಮವಾಗಿ ಕಲಿಯಬೇಕು ಮತ್ತು ಸದೃಢವಾಗಿ ಬೆಳೆಯಬೇಕು ಇದನ್ನು ಈಡೇರಿಸಲು ಸಮುದಾಯದ ಭಾಗವಹಿಸುವಿಕೆಯನ್ನು ಹೆಚ್ಚಿಸುತ್ತಿದೆ. ಈ ಕಾರ್ಯಕ್ರಮದಡಿಯಲ್ಲಿ ತಾಲೂಕಿನ ಎಲ್ಲಾ ಶಾಲೆಗಳಿಗೆ ಸಂಪನ್ಮೂಲ ವ್ಯಕ್ತಿಗಳನ್ನು ನೇಮಿಸುವುದರ ಮೂಲಕ ಸರಕಾರಿ ಶಾಲೆಯಲಿ ಮಕ್ಕಳ ಬುನದಿ ಹಂತದ ಸಾಕ್ಷರತೆ ಮತ್ತು ಗಣಿತದ ಮೂಲಭೂತ ಕ್ಷಮತೆಗಳನ್ನು ಅಭಿವೃದ್ದಿ ಪಡೆಸಲು ಪ್ರಯತ್ನಿಸುತ್ತಿದೆ. ತಾಲೂಕಿನ 30 ಸಾವಿರ ಮಕ್ಕಳು ಮತ್ತು 60 ಸಾವಿರ ಪೆÇೀಷಕರನ್ನು ಈ ಕಾರ್ಯಕ್ರಮದಡಿಲ್ಲಿ ತಲುಪಲು ಉದ್ದೇಶಿಸಿಸಲಾಗಿದೆ.
“ಕ್ರೀಡಾಭಿವೃದ್ದಿ ಕಾರ್ಯಕ್ರಮ” ಅನುಷ್ಠಾನದಡಿಯಲ್ಲಿ ತಾಲೂಕಿನ ಎಲ್ ಎಲ್ ಎಫ್ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳು, ಕ್ರೀಡಾ ಸುಗಮಕಾರರು, ಹಿರಿಯ ಸಂಪನ್ಮೂಲ ವ್ಯಕ್ತಿಗಳು ಮತ್ತು ಪೆÇ್ರಜೆಕ್ಟ್ ಅಸೋಸಿಯೇಟ್ಸ್
ಸೇರಿ ಒಟ್ಟು 292 ಜನರಿಗೆ ಸೆ.26 ರಿಂದ 28ರವರೆಗೆ 3 ದಿನಗಳಲ್ಲಿ ತರಬೇತಿ ನೀಡಲಾಯಿತು. ಮುಖ್ಯ ತರಬೇತಿದಾರರಾಗಿ ಎಲ್‍ಎಲ್‍ಎಫ್ ಸಂಸ್ಥೆಯ ಮುಖ್ಯ ಕ್ರೀಡಾ ತರಬೇತಿದಾರರಾದ ಕ್ರಿಸ್ಟೋಪರ್ ತರಬೇತಿಯನ್ನು ನಡೆಸಿಕೊಟ್ಟರು.
ಈ ತರಬೇತಿ ಜಿಲ್ಲಾ ಕ್ರೀಡಾಂಗಣ ಬಳಸಲು ಅನುಮತಿ ನೀಡಿ ತಂಡಕ್ಕೆ ಕ್ರೀಡೆಗಳ ಮಹತ್ವದದ ಬಗ್ಗೆ ಮಾತನಾಡುತ್ತ ಅಶೋಕ ಲೈಲ್ಯಾಂಡ ಮತ್ತು ಲರ್ನಿಂಗ್ ಲಿಂಗ್ಸ್ ಫೌಂಡೇಶನ್ ಚಿತ್ತಾಪೂರ ತಾಲೂಕಿನ ಶಾಲೆಗಳ
ಅಭಿವೃದ್ದಿಗೆ ನೀಡುತ್ತಿರುವ ಕೊಡುಗೆಯನ್ನು ಹೊಗಳುತ್ತ ಮುಂದಿನ ದಿನಗಳಲ್ಲಿ ಕ್ರೀಡಾಭಿವೃದ್ದಿಗೆ ಇಲಾಖೆಯು ಸಹಕಾರ ನೀಡಲಿದೆ, ಗ್ರಾಮೀಣ ಪ್ರದೇಶದಲ್ಲಿನ ಬಡ ಮಕ್ಕಳಿಗೆ 4ನೇ ಮತ್ತು 7ನೇ ತರಗತಿಗಳಿಗೆ
ಉಚಿತವಾಗಿ ಕ್ರೀಡಾ ಶಾಲೆಗೆ ಪ್ರವೇಶ ನೀಡಲಾಗುವುದು ಎಂದು ಹೇಳಿದರು. ಕ್ರೀಡಾ ಮತ್ತು ಯುವಜನ ಸಬಲೀಕರಣ ಇಲಾಖೆ ಜಿಲ್ಲಾ ಉಪ ನಿರ್ದೇಶಕ ಕೆ.ಸುರೇಶ ಅವರು ತರಬೇತಿಗಳಿಗೆ ಚಾಲನೆ ನೀಡಿದರು.
ಹಿರಿಯ ಹಾಕಿ ತರಬೇತಿದಾರ ಸಂಜಯ ಬಾಣಸ ಮತ್ತು ಚಿತ್ತಾಪೂರ ತಾಲೂಕಿನ ದೈಹಿಕ ಶಿಕ್ಷಣಾಧಿಕಾರಿ ಶಿವಶರಣಪ್ಪ ಮಂಟಾಳೆ ಯವರು ತರಬೇತಿಯಲ್ಲಿ ಉಪಸ್ಥಿತರಿದ್ದು ಶಿಬಿರಾರ್ಥಿಗಳಿಗೆ ಹುರಿದುಂಬಿಸಿದರು. ಎಲ್‍ಎಲ್‍ಎಫ್ ಸಂಸ್ಥೆಯ ಸಿಬ್ಬಂದಿಗಳಾದ ತಿರುಪತಿ ಮನ್ನಾಪೂರ, ಗುರು, ರೋಹಿತ ಮತ್ತು ಶೃತಿ ತರಬೇತಿಯ ನೇತೃತ್ವ ವಹಿಸಿದ್ದರು.