ಶಿವಶರಣ ಹರಳಯ್ಯನವರ ಭವ್ಯವಾದ ಸ್ಮಾರಕ ನಿರ್ಮಾಣ
ಬಸವಕಲ್ಯಾಣ:ಸೆ.30: ಕಲ್ಯಾಣ ಕ್ರಾಂತಿ ನಡೆದ ನೆಲ ಬಸವಕಲ್ಯಾಣದಲ್ಲಿ ಶಿವಶರಣ ಹರಳಯ್ಯನವರ ಭವ್ಯವಾದ ಸ್ಮಾರಕ ಮುಂಬರುವ ದಿನಗಳಲ್ಲಿ ಬಸವಕಲ್ಯಾಣ ನಗರದಲ್ಲಿ ನಿರ್ಮಾಣ ಮಾಡಲಾಗುವದು ಎಂದು ಅರಣ್ಯ, ಪರಿಸರ ಜೀವಿಶಾಸ್ತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಭರವಸೆ ನೀಡಿದದರು.
ಹರಳಯ್ಯ ವೃತ್ತದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಮಹಾ ಶಿವಶರಣ ಹರಳಯ್ಯನವರ ಮೂರ್ತಿ ಅನಾವರಣ ಹಾಗೂ ಸಮಗಾರ ಸಮಗಾರರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಸಮ ಸಮಾಜ ನಿರ್ಮಾಣ ಬಸವಣ್ಣನವರ ಕನಸಸಾಗಿತ್ತು. ಅಂದು ಜಾತಿ ರಹಿತವಾದ ಸಮಾನತೆಯ ಸಮಾಜ ನಿರ್ಮಾಣಕ್ಕಾಗಿ ನಡೆದ ಹೋರಾಟ, ಸಂಘರ್ಷಕ್ಕೆ ಶಿವಶರಣ ಹರಳಯ್ಯನವರು ಭದ್ರ ಬುನಾದಿ, ಅಂದು ಶರಣು ಶರಣಾರ್ಥಿ ಪದ ಸಮತೆಗಾಗಿ ನಡೆದ ಕಲ್ಯಾಣ ಕ್ರಾಂತಿಗೆ ಕಾರಣವಾತ್ತು ಎಂದು ವಿಶ್ಲೇಷಿಸಿದರು.
ಬಸವಣ್ಣನವರ ನೇತೃತ್ವದಲ್ಲಿ 12ನೇ ಶತಮಾನದಲ್ಲಿ ಸಮಾಜೋಧಾರ್ಮಿಕ ಕ್ರಾಂತಿ ನಡೆಯಿತು. ಜಗತ್ತಿಗೆ ಪ್ರಜಾಪ್ರಭುತ್ವದ ಕಲ್ಪನೆ ನೀಡಿದ್ದು ಅನುಭವ ಮಂಟಪ. ಶರಣರ ತತ್ವಾದರ್ಶಗಳು ಸರ್ವ ಕಾಲಕ್ಕೂ ಪ್ರಸ್ತುತ. ನಮ್ಮ ತಂದೆಯವರಾದ ಪೂಜ್ಯ ಭೀಮಣ್ಣ ಖಂಡ್ರೆ ಅವರು ಕಲ್ಯಾಣದಲ್ಲಿ 2012ಲ್ಲಿ ಶಿವಶರಣ ಹುತಾತ್ಮ ದಿನಾಚರಣೆಯನ್ನು ಬೃಹತ್ ಪ್ರಮಾಣಕ್ಕೆ ಆಚರಣೆ ಮಾಡಿದ್ದರು. ಇದೇ ಸಂದರ್ಭದಲ್ಲಿ ಕಲ್ಯಾಣದಲ್ಲಿ ಹುತಾತ್ಮ ಸ್ಮಾರಣ ನಿರ್ಮಾಣದ ಬಗ್ಗೆ ಹೇಳಿದ್ದರು. ಇದು ಅವಶ್ಯಕವಾಗಿದ್ದು, ಈ ಕಾರ್ಯ ಮುಂದಿನ ದಿನಗಳಲ್ಲಿ ನಡೆಯಲಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೊದಲ ಸಲ ಸಿಎಂ ಆಗಿದ್ದಾಗಲೇ 650 ಕೋಟಿ ವೆಚ್ಚದದಲ್ಲಿ ಅನುಭವ ಮಂಟಪ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿತ್ತು. ಸರ್ಕಾರ ಬದಲಾದ ನಂತರ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್.ಯಡಿಯೂಪ್ಪನವರ ಅವಧಿಯಲ್ಲಿ 200 ಕೋಟಿ ಅನುದಾನ ಒUದಗಿಸಲಾಗಿತ್ತು. ಈಗ ಮತ್ತೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ 15 ತಿಂಗಳಲ್ಲಿ 100 ಕೋಟಿ ರೂ ಒದಗಿಸಲಾಗಿದೆ. ಶೇ.52ರಷ್ಟು ಕಾಮಗಾರಿ ಮುಗಿಯಬೇಕಿತ್ತು. ಶೇ.48ರಷ್ಟು ಮುಗಿದಿದೆ. ಮುಂದಿನ ವರ್ಷ ಅಂತ್ಯದ ವರೆಗೆ ಕಾಮಗಾರಿ ಪೂರ್ಣಗೊಳಿಸಲಾಗುವದು ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ ವಿಶ್ವಬಸವ ಧರ್ಮ ಟ್ರಸ್ಟ್ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದೇವರು ಮಾತನಾಡಿ, ಕಲ್ಯಾಣದಲ್ಲಿ 10 ಎಕರೆ ಪ್ರದೇಶದಲ್ಲಿ ಶಿವಶರಣ ಹರಳಯ್ಯನವರ ಸ್ಮಾರಕ ನಿರ್ಮಾಣವಾಗಬೇಕು. ಕಲ್ಯಾಣ ಕ್ರಾಂತಿಕೆ ಕಾರಣವಾಗ ಘಟನೆಗಳನ್ನು ಇಲ್ಲಿ ಅನಾವರಣವಾಗಬೇಕು. ವಿಶ್ವದ ಜನ ಕಲ್ಯಾಣದತ್ತ ನೋಡುವಂತೆ ಸ್ಮಾರಕ ನಿರ್ಮಾಣವಾಗಬೇಕು. ಲಿಂಗಾಯತ ಧರ್ಮಕ್ಕಾಗಿ, ಸಮತೆಯ ತತ್ವಕ್ಕಾಗಿ ಮೊದಲಿಗೆ ತ್ಯಾಗ ಮಾಡಿದವರು ಶಿವಶರಣ ಹರಳಯ್ಯನವರು. ತ್ಯಾಹದ ತಳಹದಿಯ ಮೇಲೆ ಧರ್ಮ ನಿಂತಿದೆ. ಶಿವಶರಣ ಹರಳಯ್ಯನವರ ಸ್ಮಾರಕ ನಿರ್ಮಿಸುವ ಮೂಲಕ ಕಲ್ಯಾಣ ಕ್ರಾಂತಿಯನ್ನು ಮುಂದಿನ ಪಿಳಿಗೆಗೆ ಪರಿಚಯಿಸುವ ಕಾರ್ಯ ನಡೆಯಬೇಕು ಎಂದರು.
ಧ್ವಜಾರೋಹಣ ನೆರವೇರಿಸಿದ ಅಖಿಲ ಭಾರತೀಯ ರವಿದಾಸಿಯಾ ಧರ್ಮ ಸಂಘಟನೆಯ ರಾಷ್ಟ್ರೀಯಧ್ಯಕ್ಷರಾದ 108 ಸಂತಶ್ರೀ ಸುಖದೇವ ಜಿ ಮಹಾರಾಜ ಮಾತನಾಡಿ, ಜನ ಕಲ್ಯಾಣಕ್ಕಾಗಿ ಜ್ಞಾನ ನೀಡುವ ಕಾರ್ಯವನ್ನು ಸಂತ ಶಿರೋಮಣಿ ಗುರು ರವಿದಾಸ ಮಹಾರಾಜರು ಮಾಡಿದ್ದಾರೆ. ಸಮಗಾರ ಸಮಾಜಕ್ಕೆ ದೊಡ್ಡ ಇತಿಹಾಸವಿದೆ ಭೂಮಿ ಇರುವ ಎಲ್ಲ ದೇಶಗಳಲ್ಲಿಯೂ ಈ ಸಮುದಾಯದ ಜನ ವಾಸಿಸುತ್ತಾರೆ. ಸಮಾನತೆಗಾಗಿ ಕ್ರಾಂತಿ ನಡೆದ ಕಲ್ಯಾಣದ ನೆಲದಲ್ಲಿ ಶಿವಶರಣ ಹರಳಯ್ಯನವರ ಸ್ಮಾರಕ ನಿರ್ಮಾಣವಾಗಬೇಕು. ವಿಶ್ವದ ಗಮನ ಸೆಳೆಯುವ ಕಾರ್ಯ ಇಲ್ಲಿ ನಡೆಯಬೇಕು. ಸಮಾಜದ ಹಿತಕ್ಕಾಗಿ, ಸಂತ ಮಹಾತ್ಮರನ್ನು ಕಲ್ಯಾಣಕ್ಕಾಗಿ ಕಾರ್ಯ ಮಾಡಿದ ಮಹಾತ್ಮರನ್ನು, ಮಹಾಪುರುಷರ ತತ್ವಾದರ್ಶಗಳನ್ನು ಅರಿತು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪರಮಾತ್ಮನ ನಾಮ ಸ್ಮರಣೆ ಮಾಡಬೇಕು. ಗುರು ಮಾರ್ಗದರ್ಶನದಲ್ಲಿ ನಡೆಯಬೇಕು ಎಂದರು.
ಹುಲಸೂರನ ಶ್ರೀ ಡಾ.ಶಿವಾನಂದ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು. ಪೂಜ್ಯ ಡಾ. ಗಂಗಾಂಬಿಕಾ ಅಕ್ಕ, ಶಾಸಕ ಶರಣು ಸಲಗರ ಮಾತನಾಡಿದರು. ಬೀದರ್ ಅಕ್ಕಮಹಾದೇವಿ ಮಹಿಳಾ ಮಹಾ ವಿದ್ಯಾಲಯದ ಪ್ರೊ.ಶಿವಶರಣಪ್ಪ ಹುಗ್ಗೆ ಪಾಟೀಲ್ ಉಪನ್ಯಾಸ ನೀಡಿದರು.
ಶಿವಶರಣ ಹರಳಯ್ಯ ಸಮಾಜದ ತಾಲೂಕು ಆಧ್ಯಕ್ಷ ಶಿವಾಜಿರಾವ ಕಾಂಬಳೆ ಅಧ್ಯಕ್ಷತೆ ವಹಿಸಿದ್ದರು. ಭಂತೆ ಜ್ಞಾನ ಸಾಗರ ಸಾನ್ನಿಧ್ಯ ವಹಿಸಿದ್ದರು. ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ಬಿ.ನಾರಾಯಣರಾವ, ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಮಾಜಿ ಎಂಎಲ್ಸಿ ವಿಜಯಸಿಂಗ್, ಕಾಂಗ್ರೆಸ್ ಮುಖಂಡ ಧನರಾಜ ತಾಳಂಪಳ್ಳಿ, ಶಶಿಕಾಂತ ದುರ್ಗೆ, ಅಜರಲಿ ನವರಂಗ, ಶಿವರಾಜ ನರಶೆಟ್ಟಿ, ಪ್ರಮುಖರಾದ ಬಸವರಾಜ ಮುರಡೆ, ಯುವರಾಜ ಭೆಂಡೆ, ಜಿ.ಆರ್.ಪಾಟೀಲ್, ತಹಸಿನ್ ಅಲಿ ಜಮಾದಾರ, ರವೀಂದ್ರ ಬೋರಾಳೆ, ರವೀಂದ್ರ ಕೊಳಕೂರ, s ಸಮಾಜದ ಪದಾಧಿಕಾರಿ-ಪ್ರಮುಖರಾದ ಗೌತಮ ಜಾಧವ, ಮಧುಕರ ಹಮೀಲಪುರೆ, ಮೋಹನ ಕಾಂಬಳೆ, ಸೂರ್ಯಕಾಂತ ಕಾಂಬಳೆ, ಮಧುಕರ ಕಾಂಬಳೆ, ರಮೇಶ ಕಾಂಬಳೆ, ಕೋಂಡಿಬಾ ಜಾಧವ, ಸುಧಾಕರ್ ಗೋಕಲೆ, ವಿಜಯಕುಮಾರ ಕಾಂಬಳೆ, ರಾಜ ಸಿಂಧೆ, ವಿಲಾಸರಾವ ಕಾಂಬಳೆ, ಧನರಾಜ ಭಾಲ್ಕೆ, ಜೈರಾಮ ಕಾಂಬಳೆ, ರಮೇಶ ಸೂರ್ಯವಂಶಿ, ವಿದ್ಯಾಸಾಗರ ಜಾಧವ, ಜೈಹಿಂದ ಜಾಧವ, ರಾಜಕುಮಾರ ಜಾಧವ, ಗೋವಿಂದ ಕಾಂಬಳೆ ಮನೋಹರ ಅಬಿಲಪುರೆ ಉಪಸ್ಥಿತರಿದ್ದರು. ಸೂರ್ಯಕಾಂತ ಟಿಕೇಕರ್ ಹಾಗೂ ನವಲಿಂಗ ಪಾಟೀಲ್ ನಿರೂಪಿಸಿದರು. ಶಿವರಾಜ ಕಾಂಬಳೆ ವಂದಿಸಿದರು.
ಖಂಡ್ರೆ ಸಿಎಂ ಆಗಲಿ
ಶಿವಶರಣ ಹರಳಯ್ಯನವರು ಶ್ರೇಷ್ಠ ಶರಣರು. 650 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ನೂತನ ಅನೂಭವ ಮಂಟಪದ ನಾಲ್ಕು ಮುಖ್ಯ ಮಹಾದ್ವಾರಗಳಲ್ಲಿ ಒಂದು ಮಹಾದ್ವಾರಕ್ಕೆ ಶಿವಶರಣ ಹರಳಯ್ಯನವರ ಹೆಸರಿಡಬೇಕು. ವ್ಯಾಪಕ ಮಳೆಯಿಂದಾಗಿ ತಾಲೂಕಿನಲ್ಲಿ 17 ಸೇತುವೆಗಳಿಗೆ ಹಲವು ರಸ್ತೆಗಳಿಗೆ ಹಾನಿಯಾಗಿದ್ದು, ಇವುಗಳ ನಿರ್ಮಾಣಕ್ಕೆ ಸಕಾರದಿಂದದ ವಿಶೇಷ ಅನುದಾನ ಕಲ್ಪಿಸಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.
ಸಮಿತಿಯಲ್ಲಿ ಎಲ್ಲ ಸಮುದಾಯದವರಿಗೂ ಅವಕಾಶ ನೀಡಿ
ಬಸವಕಲ್ಯಾಣ ನಗರದಲ್ಲಿ ಶಿವಶರಣ ಹರಳಯ್ಯನವರ ಸ್ಮಾರಕ ನಿರ್ಮಿಸಬೇಕು. ಹರಳಯ್ಯ ವೃತ್ತದ ಬಳಿ ದೊಡ್ಡದಾದ ಸರ್ಕಲ್ ನಿರ್ಮಾಣಕ್ಕೆ ಸ್ಥಳ ಒಗದಗಿಸಬೇಕು. ಅನುಭವ ಮಂಟಪ ಸಮಿತಿಯಲ್ಲಿ ಪೂಜ್ಯರಿಗೆ ಹಾಗೂ ಎಲ್ಲ ಶರಣರ ಸಮುದಾಯದವರಿಗೆ ಅವಕಾಶ ಕಲ್ಪಿಸಬೇಕು ಎಂದು ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ವೇದಿಕೆಯಲ್ಲಿ ಸಚಿವರಿಗೆ ಮನವಿ ಮಾಡಿದರು.