ನೆಚ್ಚಿನ ಶಿಕ್ಷಕರ ವರ್ಗಾವಣೆ ಕಣ್ಣೀರಿಟ್ಟ ವಿದ್ಯಾರ್ಥಿಗಳು
ಆಳಂದ :ಆ.9:ತಾಲೂಕಿನ ದರ್ಗಾಶಿರೂರ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ 12.7.2005 ರಿಂದ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಶ್ರೀ ದುಂಡಪ್ಪ ಪೂಜಾರಿ ಅವರ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಕಣ್ಣಿರು ಹಾಕಿದರು. 2007ರಲ್ಲಿ ಖೋಖೋ ಆಟ ಪ್ರಾರಂಭಿಸಿ 12 ಬಾರಿ ಗೆದ್ದು ಶಾಲೆಯ ಮತ್ತು ಊರಿನ ಕೀರ್ತಿ ಹೆಚ್ಚಿಸಿದ್ದಾರೆ
ಮಕ್ಕಳ ಮತ್ತು ಶಿಕ್ಷಕರ ನಡುವೆ ವಿದ್ಯಾಭ್ಯಾಸದ ಜೊತೆ ಪ್ರೀತಿ ವಿಶ್ವಾಸ ನಂಬಿಕೆ ಬೆಳೆಯುವುದು ಸರ್ಕಾರಿ ಶಾಲೆಗಳಲ್ಲಿಯೇ ಎನ್ನುವುದಕ್ಕೆ ತಾಜಾ ಉದಾಹರಣೆಗೆ ಆಳಂದ ತಾಲೂಕಿನ ದರ್ಗಾ ಶಿರೂರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಸಾಕ್ಷಿಯಾಯಿತು. ದುಂಡಪ್ಪ ಪೂಜಾರಿ ಎಂಬ ದೈಹಿಕ ಶಿಕ್ಷಕರು ದರ್ಗಾ ಶಿರೂರ
ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸುಮಾರು 19 ವರ್ಷ 19 ದಿನಗಳ ಕಾಲ ಸೇವೆ ಸಲ್ಲಿಸಿ ಸದ್ಯ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಬಳೂರಗಿಗೆ. ವರ್ಗಾವಣೆ ಯಾಗಿರುವ ಪ್ರಯುಕ್ತ ವಿದ್ಯಾರ್ಥಿಗಳು ಕಣ್ಣಿರು ಹಾಕುತ್ತಿರುವುದು ಕಂಡುಬಂದಿತು. ಶಿಕ್ಷಕ ದುಂಡಪ್ಪ ಪೂಜಾರಿ ಅವರು ಮಕ್ಕಳನ್ನು ಪಠ್ಯದೊಂದಿಗೆ ಆಟ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸುತ್ತಿದ್ದರು ದರ್ಗಾ ಶಿರೂರದ ಶ್ರೀಗುರುಬಸಪ್ಪ ಘಂಟೆ ಸರಕಾರಿ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಕರ ಕೊರತೆ ಇತ್ತು ಆ ಶಾಲೆಯಲ್ಲಿ ಯು ಸಹ ಸೇವೆ ನೀಡಿ ಮಕ್ಕಳಿಗೆ ಖೋಖೋ ಆಟ ಕಲಿಸಿ ತಾಲೂಕಿಗೆ ಶಾಲೆಯ ಕೀರ್ತಿ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಕ್ರೀಡಾ ಚಟುವಟಿಕೆಗಳಲ್ಲಿ ತಾಲೂಕು ಮಟ್ಟ ಮತ್ತು ಜಿಲ್ಲಾ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಭಾಗವಹಿಸಲು ಹುರಿದುಂಬಿಸಿ ವಿದ್ಯಾರ್ಥಿಗಳ ಪ್ರತಿಭೆಯನ್ನು ಹೊರತಂದಿದ್ದಾರೆ ಶಾಲೆಯ ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ಮುಂದಾಳತ್ವ ವಹಿಸಿಕಾರ್ಯಕ್ರಮಗಳನ್ನು ಅದ್ದೂರಿಯಾಗಿ ಅಚ್ಚುಕಟ್ಟಾಗಿ ನಡೆಸಿಕೊಂಡು ಬರುತ್ತಿದ್ದ ಮಾದರಿ ಶಿಕ್ಷಕರಾಗಿದ್ದರು ಎಂದು ಗ್ರಾಮದ ಹಿರಿಯರು, ವಿದ್ಯಾರ್ಥಿಗಳು ಹಾಗೂ ಸಹ ಶಿಕ್ಷಕರು ನೆನಪಿಸಿಕೊಳ್ಳುವುದು ಕಂಡುಬಂದಿತು ಒಟ್ಟಾರೆ ಶಿಕ್ಷಕ ಹಾಗೂ ವಿದ್ಯಾರ್ಥಿಗಳ ಅವಿನಾಭಾವ ಸಂಬಂಧಕ್ಕೆ ದರ್ಗಾ ಶಿರೂರ ಗ್ರಾಮ ಸಾಕ್ಷಿಯಾಯಿತು ಸುರೇಶ ಕಾಶಿನಾಥ ಘಂಟೆಯವರು ಬೆಳ್ಳಿಯ ಗಣೇಶನ ವಿಗ್ರಹವನ್ನು ನೀಡಿ ಸನ್ಮಾಸಿದರು. ಈ ಸಂದರ್ಭದಲ್ಲಿ ಶ್ರೀ ಅಭಿನವ ಶಿವಲಿಂಗ ಮಹಾಸ್ವಾಮಿಗಳು, ಸುರೇಶ ಕಾಶಿನಾಥ ಘಂಟೆ, ಭೀಮಾಶಂಕರ ಬಟ್ಟರಕಿ ಶಿವಲಿಂಗ ಸುತಾರ, ಭೀಮಾಶಂಕರ ಘಂಟೆ, ಗುಂಡಪ್ಪ ಜಕಾಪುರೆ, ರಾಜಶೇಖರಗೊಗಾಯಿ, ಶ್ರೀಶೈಲ ಮಂಟಗಿ, ಭೋಗೇಶ ಘಂಟೆ ಶಾಲೆಯ ಮುಖ್ಯ ಗುರುಗಳಾದ ಶಶಿಕಾಂತ ಪಾಟೀಲ ಮತ್ತು ಸಿಬ್ಬಂದಿ ವರ್ಗ ಮುದ್ದು ವಿದ್ಯಾರ್ಥಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು