ಸರಸ್ವತಿ ಪೂಜಿಸಿದರೆ ಜೀವನ ಪಾವನ: ಕೊಳಮಲಿ
ವಿಜಯಪುರ,ಆ.9:ಆಚಾರ ವಿಚಾರ ಸಂಸ್ಕøತಿಯಲ್ಲಿ ಭಾರತ ವಿಶ್ವಕ್ಕೆ ಮಾದರಿಯಾಗಿದೆ. ಭಕ್ತಿಯ ಪರಂಪರೆ ಎಲ್ಲೆಡೆ ಹರಿದು ಬಂದಿದೆ. ಪ್ರತಿನಿತ್ಯ ತಾಯಿ ವಾಗ್ದೇವಿಯನ್ನು ಮನದಲ್ಲಿ ನೆನೆಯುತ್ತಾ ಅಧ್ಯಯನ ಮಾಡಿದರೆ ಜ್ಞಾನ ಭಂಡಾರ ವೃದ್ಧಿಯಾಗುತ್ತದೆ. ಶ್ರದ್ಧಾ ಮನೋಭಾವನೆಯಿಂದ ಸರಸ್ವತಿ ಮಾತೆಯನ್ನು ಪೂಜಿಸಿದರೆ ಜೀವನ ಪಾವನವಾಗುತ್ತದೆ ಎಂದು ಕರ್ನಾಟಕ ಕನಕದಾಸ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಜಯಪ್ರಭು ಕೊಳಮಲಿ ಹೇಳಿದರು.
ಗುರುವಾರ ನಗರದ ಕರ್ನಾಟಕ ಕನಕದಾಸ ಶಿಕ್ಷಣ ಸಂಸ್ಥೆಯ ಕನಕ ಪೂರ್ವ ಪ್ರಾಥಮಿಕ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಂಡ ಸರಸ್ವತಿ ಪೂಜಾ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕುಮಾರಿ ಅರುಂಧತಿ ಒಡೆಯರ್ ಪ್ರಾರ್ಥಿಸಿದರು, ಅನುರಾಧ ಬಿರಾದಾರ ಸ್ವಾಗತಿಸಿದರು. ಸಂಸ್ಥೆ ಆಡಳಿತ ಮಂಡಳಿ, ಶಾಲಾ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.